This is the title of the web page
This is the title of the web page

Please assign a menu to the primary menu location under menu

State

ಪುರಾತನ ಸ್ನಾನ ಘಟ್ಟದ ಪುಷ್ಕರಣೆಗೆ ನರೇಗಾ ಯೋಜನೆ ಕಾಮಗಾರಿಯಿಂದ ಮರುಜೀವ


ಗಂಗಾವತಿ:-ಜನೇವರಿ-14.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಸಮೀಪದ ದುರ್ಗಾದೇವಿ ಬೆಟ್ಟದ ಹಿಂಬಾಗದಲ್ಲಿರುವ ಪುರಾತನ ಸ್ನಾನಘಟ್ಟದ ಪುಷ್ಕರಣಿಗೆ ನರೇಗಾ ಯೋಜನೆ ಕಾಮಗಾರಿ ಮೂಲಕ ನೂತನ ವೈಭವ ನೀಡಿದಂತಾಗಿದೆ.

ಗಂಗಾವತಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಆನೆಗುಂದಿ ಅವರ ಸಹಯೋಗದೊಂದಿಗೆ ಸುಮಾರು 10 ಲಕ್ಷ ಅನುದಾನದ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಪುಷ್ಕರಣಿಗೆ ಜೀವಕಳೆ ತಂದಿದ್ದಾರೆ.

ವಿಶೇಷವೆಂದರೆ ಇಷ್ಟೆಲ್ಲಾ ಕಾಮಗಾರಿಗಳನ್ನು ಕನಿಷ್ಟ ಯಂತ್ರೋಪಕರಣಗಳ ಬಳಕೆ ಮಾಡಲಾಗಿದೆ.

ಈ ಪುಷ್ಕರಣಿಯು ಬೆಟ್ಟದಲ್ಲಿರುವ ಕಾರಣ ಅಲ್ಲಿಗೆ ವಾಹನಗಳು ತೆರಳಲು ಅವಕಾಶಗಳಿಲ್ಲ, ಆದರೂ ಕೇವಲ ಮಾನವ ಶಕ್ತಿಯಿಂದಲೇ ಕಾಮಗಾರಿ ಬೇಕಾಗುವ ಸಿಮೆಂಟ್,ಉಸುಕು,ಕಲ್ಲು,ಮಣ್ಣು, ಜೊತೆಗೆ ಇತರ ವಸ್ತುಗಳನ್ನು ಬಳಸಿ ಕೆಲಸ ಮಾಡಲಾಗಿದೆ.

ಈ ಕಾಮಗಾರಿ ಮೂರು ತಿಂಗಳ ಕಾಲ ನಡೆದಿದ್ದು ಇದಕ್ಕೆ 1005 ಮಾನವ ದಿನಗಳನ್ನು ಸೃಜಿಸಲಾಗಿದೆ ಪುಷ್ಕರಣಿ ಅಭಿವೃದ್ಧಿಪಡಿಸಲು ನಿತ್ಯ 20 ಜನ ಕೆಲಸ ಮಾಡಿದ್ದಾರೆ.

ಇನ್ನೂ ದೇವಸ್ಥಾನದ ಕೆಲ ಸಿಬ್ಬಂದಿ ಗಳು ಕೆಲಸದಲ್ಲಿ ಸ್ವಯಂಪ್ರೇರಿತವಾಗಿ ಪೋಷಣೆ ಅಭಿವೃದ್ಧಿಗೆ ಶ್ರಮಿಸಿದರು.

ಸ್ನಾನಘಟ್ಟದ ಪುಷ್ಕರಣಿಯಲ್ಲಿ ಮೊದಲು ಚೈನ್ ಕ್ರೇನ್ ಮೂಲಕ 3 ಟನ್ ಗಾತ್ರದ ಕಲ್ಲುಗಳನ್ನು ಸರಿಪಡಿಸಿ ಸದೃಢವಾಗಿರಲು ಮಾಡಲಾಯಿತು.

ನಂತರ ಅದರ ಸುತ್ತ ಸುಂದರವಾಗಿ ಕಾಣಲು ಹಾಗೂ ಸಾರ್ವಜನಿಕ ಕರು ನಡೆದು ವೀಕ್ಷಣೆ ತೆರಳಲು ಅನುಕೂಲವಾಗಲಿ ಎಂದು ನೆಲಹಾಸು ಹಾಕಲಾಗಿದೆ.

ಪುಷ್ಕರಣಿಯಸುತ್ತ ಚೈನ್ ಲಿಂಕ್ ಫೆಂಚಿಂಗ್, ಜೊತೆಗೆ ಗ್ರಿಲ್ ವರ್ಕ್ ಸಹ ಮಾಡಲಾಗಿದೆ ಸ್ನಾನಘಟ್ಟದ ಪುಷ್ಕರಣಿ ಕಾಮಗಾರಿ ಪೂರ್ಣವಾದ ನಂತರ ಎಲ್ಲರಿಗೂ ಸುಂದರವಾಗಿ ಕಾಣುವಂತೆ ವಿವಿಧ ರೀತಿಯ ಬಣ್ಣಗಳನ್ನು ಹಚ್ಚಲಾಗಿದೆ.

ಇಂದು ಈ ಪುರಾತನ ಕಲ್ಯಾಣಿಯನ್ನು ದೇಗುಲದ ಬ್ರಹ್ಮಶ್ರೀ ಸ್ವಾಮಿಜಿ ಶಾಸಕ ಪರಣ್ಣ ಮುನವಳ್ಳಿ, ಹಾಗೂ ಮಾನ್ಯ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರುನ್ನಮ್ ನೇತೃತ್ವದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇಗುಲದ ಬ್ರಹ್ಮಶ್ರೀ ಸ್ವಾಮಿಜಿ ಸೇರಿದಂತೆ ಕಾರ್ಯನಿರ್ವಾಹಕ ಅಧಿಕಾರಿ ಡಿ ಮೋಹನ್ ಹಾಗೂ ತಾಲೂಕ ಪಂಚಾಯತ ನರೇಗಾ ಸಿಬ್ಬಂದಿ ಗಳು, ಗ್ರಾ.ಪಂ ಅಧ್ಯಕ್ಷ ರು, ಉಪಾಧ್ಯಕ್ಷರು, ಹಾಗೂ ಗ್ರಾಮ ಪಂಚಾಯತಿ ಸದಸ್ಯರು ,ಗ್ರಾಮ ಪಂಚಾಯತ ಪಿಡಿಓ ಕೃಷ್ಣಪ್ಪ ಹಾಗೂ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Gadi Kannadiga

Leave a Reply