ಯರಗಟ್ಟಿ: ನವದಂಪತಿಗಳು ಜೀವನ ಪರ್ಯಂತ ಒಬ್ಬರನ್ನೊಬ್ಬರು ಅರಿತು ಬಾಳಬೇಕು. ಒಬ್ಬರಿಗೊಬ್ಬರು ಸಮಾಧಾನ, ಸಾವಧಾನದಿಂದ ಇದ್ದರೆ ಜೀವನ ಸಾರ್ಥಕವಾಗುತ್ತದೆ ಎಂದು ಮುನವಳ್ಳಿಯ ಸೋಮಶೇಖರಮಠದ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.
ಯರಗಟ್ಟಿ ಸಮೀಪದ ಆಲದಕಟ್ಟಿ ಕೆ.ಎಮ್ ಗ್ರಾಮದಲ್ಲಿ ರವಿವಾರ ನಡೆದ ಶಿವಯೋಗೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು ವರರಿಗೆ ಆಶಿರ್ವದಿಸಿ ಆಶಿರ್ವಚನ ನೀಡಿದ ಅವರು, ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಸಂಸ್ಕಾರವು ಅವರ ಬಾಳಿನಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಪ್ರತಿಯೊಬ್ಬರಿಗೂ ಸಂಸ್ಕಾರ ಬಹಳ ಮುಖ್ಯವಾಗಿರುತ್ತದೆ. ಇಂದು ಮದುವೆಯಾಗುತ್ತಿರುವ ಎಲ್ಲ ನವದಂಪತಿಗಳಿಗೂ ಸಹ ಸಂಸ್ಕಾರವಂತರಾಗಿ ಜೀವನ ನಡೆಸಬೇಕು ಎಂದರು.
ಕೆಎಮ್‌ಎಫ್ ಜಿಲ್ಲಾ ನಿರ್ದೇಶಕ ಎಸ್.ಎಸ್.ಮುಗಳಿ ಮಾತನಾಡಿ, ಭಕ್ತರು ಮಠದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಇಂದಿನ ದುಬಾರಿ ದಿನ ಮಾನಗಳಲ್ಲಿ ಬಡವರಿಗೆ, ಕಾರ್ಮಿಕರಿಗೆ ಮದುವೆಯ ಸಾಲದ ಹೊರೆಯನ್ನು ಕಡಿಮೆ ಮಾಡುವ ಜತೆಗೆ ಮದುವೆ ಹೆಸರಿನಲ್ಲಿ ದುಂದುವೆಚ್ಚಕ್ಕೆ ಕಡಿವಾನ ಹಾಕುವದನ್ನು ನಿಲ್ಲಿಸಿದ್ದಾರೆ. ಇಂತಹ ವಿಹಾಹಗಳಿಗೆ ಎಲ್ಲರೂ ತನು, ಮನ, ಧನದಿಂದ ಸಹಾಯ, ಸಹಕಾರ ನೀಡುವ ಮೂಲಕ ಬೆಂಬಲಿಸಬೇಕು ಎಂದರು.
ವೇದಮೂರ್ತಿ ಚಂದ್ರಯ್ಯ ಹಿರೇಮಠ, ಬಸಲಿಂಗಯ್ಯ ಹಿರೇಮಠ, ಪುಂಡಲೀಕ ಮೇಟಿ, ವಿಶಾಲ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಫಕೀರಪ್ಪ ಸನ್ನಗೌಡರ, ಅಶೋಕ ಚಿಕ್ಕೋಪ್ಪ, ಬಸವಂತಪ್ಪ ನಂಜನ್ನವರ, ಸೋಮಲಿಂಗಪ್ಪ ಚವಡಪ್ಪನವರ. ನಾಗಪ್ಪ ಗುರನಗೌಡ್ರ, ಅನೀಲ ವಂಟಮುರಿ, ಬಸವರಾಜ ಯರಗಟ್ಟಿ, ನಿಂನಗೌಡ ಸನ್ನಗೌಡ್ರ, ರಾಯಪ್ಪ ರಾಯನ್ನವರ, ಅಜ್ಜಪ್ಪ ಚವಡಪ್ಪನವರ, ಮಲ್ಲಪ್ಪ ಚವಡಪ್ಪನವರ, ನಾಗಪ್ಪ ಹುಂಬಿ, ಬಸವರಾಜ ಹಳೇಮನಿ, ನಾಗಪ್ಪ ಹಿತ್ತಲಮನಿ, ಕಿಟ್ಟಪ್ಪ ಮಡಿವಾಳರ, ಸಿದ್ದು ಜಗದಾಳೆ ಮುಂತಾದವರು ಉಪಸ್ಥಿತರಿದ್ದರು.
Gadi Kannadiga > Local News > ನವದಂಪತಿಗಳು ಜೀವನ ಪರ್ಯಂತ ಒಬ್ಬರನ್ನೊಬ್ಬರು ಅರಿತು ಬಾಳಬೇಕು
ನವದಂಪತಿಗಳು ಜೀವನ ಪರ್ಯಂತ ಒಬ್ಬರನ್ನೊಬ್ಬರು ಅರಿತು ಬಾಳಬೇಕು
Suresh11/04/2023
posted on
