This is the title of the web page
This is the title of the web page

Please assign a menu to the primary menu location under menu

Local News

ನಾವು ಆರಿಸಿ ಬಂದರೂ ಜನರಿಗೆ ಉತ್ತರಾಕೊಡಾಕ್ ಬರ್ತಿಲ್ಲ, ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರ ಅಳಲು


ಬೆಳಗಾವಿ:ಚುನಾವಣೆ ಸಂದರ್ಭದಲ್ಲಿ ವಾರ್ಡುಗಳಲ್ಲಿ ಜನರಿಗೆ ಅನೇಕ ಭರವಸೆಗಳನ್ನು ನೀಡಿ ಆಯ್ಕೆಯಾಗಿದ್ದೇವೆ ಆದರೆ ಇನ್ನೂವರೆಗೆ ಮೇಯರ್ ಉಪಮೇಯರ್ ಆಯ್ಕೆಯಾಗದೆ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ನಮ್ಮ ಮಾತಿನಂತೆ ನಿರೀಕ್ಷೆ ಇಟ್ಟು ಜನರು ನಮ್ಮನ್ನು ಆಯ್ಕೆಮಾಡಿಕಳುಹಿಸಿದ್ದಾರೆ.

ಆದರೆ ಅವರಿಗೆ ಏನು ಉತ್ತರ ಕೊಡುವುದು ನಮಗೆ ತಿಳಿಯುತ್ತಿಲ್ಲ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯ ಶಂಕರ್ ಪಾಟೀಲ್ ತಮ್ಮ ಅಳಲು ತೋಡಿಕೊಂಡರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಚುನಾವಣೆ ತಕ್ಷಣ ನಡೆಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರಮುಖವಾಗಿ ಸದಸ್ಯರ ಇಷ್ಟೊಂದು ಅಸಮಾಧಾನಕ್ಕೆ ಕಾರಣವಾಗಿರುವ ಅಂಶವನ್ನು ಗಮನಿಸಿದಾಗ ಇಲ್ಲಿ ರಾಜಕೀಯ ಲೆಕ್ಕಾಚಾರ ಇರುವುದನ್ನು ತಳ್ಳಿಹಾಕುವಂತಿಲ್ಲ!.

ಈಗಾಗಲೇ ವಿಧಾನ ಪರಿಷತ್ ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಗೆಲುವು ಕಂಡಿರುವ ಕಾಂಗ್ರೆಸ್ ನಾಯಕರು ಇದೀಗ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಆಪರೇಷನ್ ಹಸ್ತಕ್ಕೆ ವೇದಿಕೆ ಸಜ್ಜುಗೊಳಿಸಲು ಮುಂದಾಗಿದ್ದಾರೆ.

ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಹಾಗೂ ಉಪಮಹಾಪೌರರ ಆಯ್ಕೆಯಾಗದೆ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿರುವುದು ಸುಳ್ಳಲ್ಲ ಪರಿಸ್ಥಿತಿ ಹೀಗಿರುವಾಗ ಪಾಲಿಕೆಯ ಚುನಾವಣೆ ಮುಗಿದು 9ತಿಂಗಳು ಮುಗಿದರು ಮಹಾನಗರ ಪಾಲಿಕೆಯ ಸದಸ್ಯರಿಗೆ ಗೋಳು ತಪ್ಪುತ್ತಿಲ್ಲ ಅಲ್ಲದೆ ತಮ್ಮನ್ನು ಆಯ್ಕೆ ಮಾಡಿದ ಜನರ ಸಮಸ್ಯೆಗಳಿಗೆ ಸ್ಪಂದಿಸಲೂ ಆಗುತ್ತಿಲ್ಲ.

ಹಾಗೆಯೇ ಈ ಸದಸ್ಯರಿಗೆ ಸಚಿವರು, ಶಾಸಕರುಗಳು ಸೂಕ್ತವಾಗಿ ಬೆಂಬಲಿಸದಿರುವುದರಿಂದ ವಾರ್ಡ್ ಜನರಿಗೆ ಉತ್ತರಿಸುವುದು ಪಾಲಿಕೆಯ ಸದಸ್ಯರಿಗೆ ಕಗ್ಗಂಟಾಗಿ ಹೋಗಿದೆ..

ಏತನ್ಮಧ್ಯೆ 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ರಣತಂತ್ರ ರೂಪಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪರೇಷನ್ ಹಸ್ತದ ಕುರಿತು ಹೇಳಿರುವ ಮಾತುಗಳೀಗ ಅಲ್ಲಲ್ಲಿ ರಾಜಕೀಯ ಪಡಸಾಲೆಯಲ್ಲಿ ಭಾರೀ ಸದ್ದು ಮಾಡುತ್ತಿವೆ.

ಅಲ್ಲದೆ ಪಾಲಿಕೆಯ ಬಿಜೆಪಿಯ ಅಸಮಾಧಾನಿತ ಸದಸ್ಯರನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷದತ್ತ ಮುಖಮಾಡಿಸುವಲ್ಲಿ ಸ್ಥಳೀಯ ಕೈ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಮೇಯರ್, ಉಪಮೇಯರ್ ಚುನಾವಣೆಯ ಒಳಗೆ ಅಸಮಾಧಾನ ಗೊಂಡಿರುವ ಬಿಜೆಪಿ ಸದಸ್ಯರು ಕೈ ಹಿಡಿದರು ಆಶ್ಚರ್ಯ ಪಡಬೇಕಾಗಿಲ್ಲ.

ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷಗಳ ಚಿಹ್ನೆಯಡಿಯಲ್ಲಿ ಕಾಂಗ್ರೆಸ್ -10 ಬಿಜೆಪಿ-36 ಎಂಐಎಂಐಎಂ -1, ಪಕ್ಷೇತರರು ಸೇರಿದಂತೆ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿ ತಿಂಗಳುಗಳೇ ಕಳೆದರೂ ಮೇಯರ್ ಉಪಮೇಯರ್ ಚುನಾವಣೆ ನಡೆಯದೇ ಇರುವುದು ಸದಸ್ಯರಿಗೆ ಹಲ್ಲಿದ್ದರೂ ಕಡಲೆ ತಿನ್ನದಹಾಗೆ, ಅವರು ಚುನಾಯಿತರಾದರೂ ಅಧಿಕಾರ ಚಲಾವಣೆಗೆ ಹಕ್ಕಿಲ್ಲ.

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಚರಂಡಿ,ವಸತಿ, ರಸ್ತೆ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದ್ದರು ಮೇಯರ್ ಉಪಮೇಯರ್ ಹುದ್ದೆಗಳೇ ಖಾಲಿ ಇರುವುದರಿಂದ ವಾರ್ಡ್ ಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕ್ರೀಯಾ ಯೋಜನೆ ರೂಪಿಸಿ ಅನುದಾನ ವಿನಿಯೋಗಿಸಲು ಸದಸ್ಯರಿಗೆ ಅಧಿಕಾರವೇ ಇಲ್ಲದಂತಾಗಿದೆ.


Gadi Kannadiga

Leave a Reply