This is the title of the web page
This is the title of the web page

Please assign a menu to the primary menu location under menu

Local News

ವ್ಯಕ್ತಿ ನಾಪತ್ತೆ


ಬೆಳಗಾವಿ,೧೮ : ಮೂಡಲಗಿ ತಾಲೂಕಿನ ಸುಣಧೋಳ್ಳಿ ನಿವಾಸಿಯಾದ ಮಂಜುನಾಥ ಜಗದೀಶ ನರಗುಂದ ಇವರ ತಂದೆಯಾದ ಜಗದೀಶ ಬಸವಣೆಪ್ಪ ನರಗುಂದ ಏಪ್ರಿಲ್ ೭ ರಂದು ಮುಂಜಾನೆ ೯ ಗಂಟೆಗೆ ಗೋಕಾಕ ಹೋಗಿ ಬರುತ್ತೇನೆ ಎಂದು ಹೇಳಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ. ಫಿರ್ಯಾದೆದಾರರು ಸಂಬಂಧಿಗಳನ್ನು ವಿಚಾರಿಸಿದರು ಯಾವುದೇ ಸುಳಿವು ಇಲ್ಲದ ಕಾರಣ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಕುಲಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗದೀಶ ಬಸವಣೆಪ್ಪ ನರಗುಂದ ೪೯ ವಯಸ್ಸಿವನರಾದಿದ್ದು, ೫ ಪೂಟ ೮ ಇಂಚ ಎತ್ತರ, ಸದೃಡ ಮೈಕಟ್ಟು, ದುಂಡು ಮುಖ, ಉದ್ದ ಮೂಗು, ಸಾದಾಗಪ್ಪು ಮೈ ಬಣ್ಣ, ತಿಳಿ ಹಸಿರಯ ಬಣ್ಣದ ಪುಲ್ ತೋಳಿನ ಶರ್ಟು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ದರಿಸಿದ್ದು, ಕನ್ನಡ ಹಿಂದಿ ಭಾಷೆ ಮಾತನಾಡುತ್ತಾನೆ.
ಈ ಪ್ರಕಾರದ ವರ್ಣನೆ ಇರುವ ವ್ಯಕ್ತಿಯ ಬಗ್ಗೆ ಕಂಡುಬಂದಲ್ಲಿ ಕುಲಗೋಡ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೩೪-೨೨೨೨೩೩ ಹಾಗೂ ಮೊಬೈಲ್ ನಂಬರ್ ೯೪೮೦೮೦೪೦೬೯ ನ್ನು ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿ.ಎಸ್.ಎಚ್.ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply