ಬೆಳಗಾವಿ,ಮೇ.೦೫: ಖಾನಾಪೂರ ತಾಲೂಕಿನ ಕಾಪೊಲಿ ಗ್ರಾಮದ ೮೪ ವರ್ಷದ ವೃದ್ಧ ವೆಂಕಟರಾವ ಬಾಬರ ಎಂಬ ವ್ಯಕ್ತಿ ಮಾರ್ಚ್ ೧೩ ರಂದು ಬೆಳಿಗ್ಗೆ ೬ ಗಂಟೆ ಸುಮಾರಿಗೆ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾರೆ.
ನಾಪತ್ತೆ ವ್ಯಕ್ತಿಯ ಚಹರೆ:
೫ ಅಡಿ ೭ ಇಂಚು ಎತ್ತರ, ಸದೃಢ ಮೈಕಟ್ಟು, ಗೋದಿಗೆಂಪು ಮೈ ಬಣ್ಣ, ಕೋಲು ಮುಖ ಹೊಂದಿರುವ ಈತ ೭ನೇ ತರಗತಿ ಓದಿದ್ದಾನೆ. ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ. ಈತ ನಾಪತ್ತೆಯಾದ ಸಂದರ್ಭದಲ್ಲಿ ಬಿಳಿ ಶರ್ಟ್, ಬಿಳಿ ಪೈಜಾಮ ಧರಿಸಿರುತ್ತಾನೆ.
ವ್ಯಕ್ತಿಯ ಸುಳಿವು ಸಿಕ್ಕವರು ಕೂಡಲೇ ನಂದಗಡ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ೦೮೩೬-೨೩೬೬೩೩ ಹಾಗೂ ಪಿಐ ಅವರ ಮೊಬೈಲ್ ಸಂಖ್ಯೆ ೯೪೮೦೮೦೪೦೮೭ನ್ನು ಸಂಪರ್ಕಿಸಬಹುದು ಎಂದು ನಂದಗಡ ಪೊಲೀಸ್ ಠಾಣೆಯ ಪಿಎಸ್ಹೆಚ್ಒ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ವ್ಯಕ್ತಿ ನಾಪತ್ತೆ
More important news
ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ
19/05/2022