This is the title of the web page
This is the title of the web page

Please assign a menu to the primary menu location under menu

State

ವ್ಯಕ್ತಿ ನಾಪತ್ತೆ


ಬೆಳಗಾವಿ, ಏ.೦೫:ಅನಗೋಳದ ಕಲ್ಮೇಶ್ವರ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ೩೯ ವರ್ಷದ ಶಿವಾನಂದ ಮಲ್ಲಪ್ಪಾ ಕೋಣಿ ಕಳೆದ ೨೦೨೧ರ ನವೆಂಬರ್ ೧೦ರಂದು ಕಾಣೆಯಾಗಿದ್ದಾರೆ.
ಬೆಳಗಾವಿಯ ಉದ್ಯಮಭಾಗದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಾನಂದ ಕೋಣಿ ಎಂದಿನಂತೆ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬಂದಿಲ್ಲ ಎಂದು ಶಿವಾನಂದ ಅವರ ಹೆಂಡತಿ ಶ್ರೀದೇವಿ ಕೋಣಿ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆಯಾದ ವ್ಯಕ್ತಿ ಚಹರೆ:
ಬಿಳಿ ಮೈಬಣ್ಣ, ದುಂಡು ಮುಖ, ಉದ್ದ ಮೂಗು, ಕಪ್ಪು ಕೂದಲು ಹಾಗೂ ಸದೃಡ ಮೈಕಟ್ಟು ಹೊಂದಿದ್ದು ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಶಿವಾನಂದ ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದಾರೆ.
ನಾಪತ್ತೆಯಾದ ವ್ಯಕ್ತಿಯ ಸುಳಿವು ಸಿಕ್ಕವರು ಕೂಡಲೇ ತಿಲಕವಾಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ. ಠಾಣೆಯ ದೂರವಾಣಿ ಸಂಖ್ಯೆ ೦೮೩೧-೨೪೦೫೨೩೬, ಇನ್ಸ್ಪೆಕ್ಟರ್ ಮೊಬೈಲ್ ಸಂಖ್ಯೆ: ೯೪೮೦೮೦೪೦೫೨, ಪಿಎಸ್‌ಐ ಮೊಬೈಲ್ ಸಂಖ್ಯೆ: ೯೪೮೦೮೦೪೧೧೨ನ್ನು ಸಂಪರ್ಕಿಸಬಹುದು ಎಂದು ಠಾಣೆಯ ಪಿಎಸ್‌ಹೆಚ್‌ಒ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply