This is the title of the web page
This is the title of the web page

Please assign a menu to the primary menu location under menu

Local News

ವ್ಯಕ್ತಿ ನಾಪತ್ತೆ


ಬೆಳಗಾವಿ.ಸೆ.೧೯:- ಅಹಮ್ಮದರಪೀಕ್ ತಂದೆ ಸಯ್ಯದಅಮೀನುದ್ದೀನ ಪೀರಜಾದೆ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕ, ಹಾಲಿ ಸಾಯಿನಗರ, ಯಡಿಯೂರಪ್ಪ ಮಾರ್ಗ ಜುನ್ನೆ ಬೆಳಗಾವಿ ಇವರು ಠಾಣೆಗೆ ಹಾಜರಾಗಿ ತಮ್ಮ ವರದಿ ನೀಡಿದ್ದು ತನ್ನ ಮಗ ಅಯೇಜಾಜಅಹ್ಮದ ಅಹ್ಮದರಪೀಕ ಪೀರಜಾದೆ ಬಜಾಜ ಶೋರೂಮ್‌ದಲ್ಲಿ ಕೆಲಸ ಮಾಡುತ್ತಿದ್ದು, ಇವನು ತನ್ನ ಹೆಂಡತಿ ತನಗೆ ವಿವಾಹ ವಿಚ್ಛೇದನ ನೀಡುವ ಕುರಿತು ನೋಟಿಸ್ ಕಳುಹಿಸಿರುತ್ತಾಳೆ ಅಂತಾ ಮನಸ್ಸಿಗೆ ಬೇಜಾರ ಮಾಡಿಕೊಂಡು ಸೆಪ್ಟಂಬರ್ ೦೯ ರಂದು ಮಧ್ಯಾಹ್ನ ೧೨ ಗಂಟೆಗೆ ಸುಮಾರಿಗೆ ಕೆಲಸ ಇದೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ.
ಅಯೇಜಾಜಅಹ್ಮದ ತಂದೆ ಅಹ್ಮದರಪೀಕ ಪೀರಜಾದೆ ವಯಸ್ಸು ೨೮ ವರ್ಷ, ಜಾತಿ ಮುಸ್ಲಿಂ, ೫ ಪೂಟ ೮ ಇಂಚು ಎತ್ತರ, ಕೋಲು ಮುಖ, ನೆಟ್ಟನೆಮೂಗು, ಸದೃಡ ಮೈಕಟ್ಟು, ಗೋದಿಗೆಂಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೊರಡುವಾಗ ತಿಳಿ ನೀಲಿ, ಕಂದು ಮತ್ತು ಬಿಳಿ ಬಣ್ಣದ ಡಿಜೈನ್‌ವುಳ್ಳ ಉದ್ದ ತೋಳಿನ ಶರ್ಟ ಮತ್ತು ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿದ್ದು, ಕನ್ನಡ, ಹಿಂದಿ ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ.
ಈ ಪ್ರಕಾರ ಚಹರೆಯುಳ್ಳ ಕಾಣೆಯಾದ ಮನುಷ್ಯನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಆಯುಕ್ತರು, ಬೆಳಗಾವಿ ಅಥವಾ ಪೊಲೀಸ್ ಇನ್ಸಪೆಕ್ಟರ, ಶಹಾಪೂರ ಪೊಲೀಸ ಠಾಣೆ ಬೆಳಗಾವಿ, ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ ೦೮೩೧-೨೪೦೫೨೩೩, ಶಹಾಪೂರ ಪೊಲೀಸ ಠಾಣೆ, ಬೆಳಗಾವಿ. ದೂರವಾಣಿ ಸಂ-೦೮೩೧-೨೪೦೫೨೪೪, ಪಿ. ಐ, ಶಹಾಪೂರ ಪಿಎಸ್. ಮೋ ನಂ; ೯೪೮೦೮೦೪೦೪೬ ನ್ನು ಸಂಪರ್ಕಿಸಬೇಕು ಎಂದು ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಯ ಸಿ.ಎಚ್.ಸಿ ಅವರು ಪ್ರಕಟಣೇಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply