This is the title of the web page
This is the title of the web page

Please assign a menu to the primary menu location under menu

Local News

ವ್ಯಕ್ತಿ ನಾಪತ್ತೆ


ಬೆಳಗಾವಿ, ಜ.೦೨ : ವಡಗಾವಿಯ ಅಮೃತಾ ಮಂಜುನಾಥ ಚೋಪಡಿ, ವಯಸ್ಸು: ೨೬, ಇವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದು, ನನ್ನ ಗಂಡ ಮಂಜುನಾಥ ಭೀಮರಾವ ಚೋಪಡಿ, ವಯಸ್ಸು: ೩೫ ವರ್ಷ, ಸಂತೋಷ ಶೇಠ ಇವರ ವಡಗಾವಿಯ ಮಂಗಾಯಿ ನಗರ ೩ ನೇ ಕ್ರಾಸ್ ಮನೆಯಲ್ಲಿ ಬಾಡಿಗೆ ಇದ್ದು, ೦೧/೦೧/೨೦೨೩ ರಂದು ಮದ್ಯಾಹ್ನ ೨:೦೭ ಗಂಟೆಗೆ ಮನೆಗೆ ಬಂದು ಮನೆಯ ಒಳಗಡೆ ಬರದೇ ಪುನಃ ಮದ್ಯಾಹ್ನ ೩:೦೬ ಗಂಟೆಗೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ.
ಈ ಕುರಿತು ಶಹಾಪೂರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಾಣೆಯಾದವರ ವಿವರ:
ಹೆಸರು: ಮಂಜುನಾಥ ಭೀಮರಾವ ಚೋಪಡಿ, ೩೫ ವರ್ಷ, ಎತ್ತರ ೫ ಪೂಟ ೬ ಇಂಚು, ಕೋಲು ಮುಖ, ನೆಟ್ಟನೆ ಮೂಗು, ಸದೃಡ ಮೈಕಟ್ಟು, ಗೋದಿಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ, ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾನೆ.
ತಿಳಿ ಕೇಸರಿ ಮತ್ತು ನೀಲಿ ಬಣ್ಣದ ಜಾಕೆಟ್, ಗುಲಾಬಿ ಬಣ್ಣದ ಟಿ-ಶರ್ಟ, ಬೂದು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ ೦೮೩೧-೨೪೦೫೨೩೩, ಶಹಾಪೂರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ-೦೮೩೧-೨೪೦೫೨೪೪ ಹಾಗೂ ಶಹಾಪೂರ ಪೋಲಿಸ್ ಠಾಣೆಯ ಪಿ. ಐ,. ಮೋ ನಂ; ೯೪೮೦೮೦೪೦೪೬ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಶಹಾಪೂರ ಪೋಲಿಸ್ ಠಾಣೆಯ ಆರಕ್ಷಕ ಉಪ ನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply