ಬೆಳಗಾವಿ, ಜ.೩೦ : ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಗ್ರಾಮದ ವ್ಯಕ್ತಿ ಸಂಜಯ ಸಂಗಪ್ಪ ಅಂಬಿಗೇರ(೪೨) ಕಾಣೆಯಾಗಿರುತ್ತಾರೆ.
ಇವರು ಅಕ್ಟೋಬರ.೩ ೨೦೨೨ ರಂದು ಮುಂಜಾನೆ ೧೧.೩೦ ಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಇವರ ಹೆಂಡತಿ ರೆಣುಕಾ ಅಂಬಿಗೇರ ದೂರೂ ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ:
ಈ ವ್ಯಕ್ತಿಯು ಕೋಲು ಮುಖ, ನೆಟ್ಟನೆಯ ಮೂಗು, ಸಾಧಾರಣ ಮೈಕಟ್ಟು ಹೊಂದಿದ್ದು ಗೋದಿಗಪ್ಪು ಮೈಬಣ್ಣ ಹೊಂದಿರುತ್ತಾರೆ. ಹಾಗೂ ೫ ಪೂಟ ೬ ಇಂಚು ಎತ್ತರವಿರುತ್ತಾರೆ. ಬಲಗೈ ಮೇಲೆ ”ಆ” ಎಂಬ ಅಕ್ಷರದ ಅಚ್ಛೆ ಇರುತ್ತದೆ ಹಾಗೂ ಕನ್ನಡ, ಮರಾಠಿ, ಹಿಂದಿ ಭಾಷೆ ಬಲ್ಲವರಾಗಿರುತ್ತಾರೆ.
ಹಾಗೂ ನೀಲಿ ಬಣ್ಣದ ಫುಲ್ ತೋಳಿನ ಚೆಕ್ಸ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಈ ವ್ಯಕ್ತಿಯ ಮಾಹಿತಿ ದೊರಕಿದಲ್ಲಿ ಪೋಲಿಸ್ ಆಯುಕ್ತರು ಬೆಳಗಾವಿ ಅಥವಾ ಪೋಲಿಸ್ ಇನ್ಸ್ಪೆಕ್ಟರ್, ಶಹಾಪೂರ ಪೋಲಿಸ್ ಠಾಣೆ ಇಲ್ಲಿ ಸಂಪರ್ಕಿಸಬಹುದು ಅಥವಾ ೦೮೩೧-೨೪೦೫೨೩೩, ೦೮೩೧-೨೪೦೫೨೪೪,೯೪೮೦೮೦೪೦೪೬ ಈ ಸಂಖ್ಯೆಗೆ ಸಂಪರ್ಕಿಸಬಹುದು.
Gadi Kannadiga > Local News > ವ್ಯಕ್ತಿ ನಾಪತ್ತೆ