ಬೆಳಗಾವಿ : ಚಿಕ್ಕೋಡಿಯ ಖಾಸಗಿ ಫೈನಾನ್ಸ್ ಬೀಗ ಮುರಿದು 6.47 ಲಕ್ಷ ರೂ. ದೋಚಿ ಪರಾರೊಯಾಗಿದ್ದ ನಾಲ್ವನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ರಮೇಶ್ ಕೃಷ್ಣಪ್ಪ ನಾಯಕ್, ಪರಸಪ್ಪ ಸತ್ಯಪ್ಪ ಅಮೋಜಿ ಗೋಳ, ಬಸವರಾಜ ಉಮೇಶ್ ಕುಂಚನೂರ, ತುಕ್ಕಪ್ಪ ದುಂಡಪ್ಪ ಅಮೋಜಿ ಗೋಳ ಎಂಬುವವರು ಬಂಧಿತರು. ಬ್ಯಾಂಕಿನ ಮ್ಯಾನೇಜರ್ ಗುರುನಾಥ್ ಕಳಸನ್ನವರ ಅಕ್ಟೋಬರ್ ಹನ್ನೊಂದರಂದು ಬ್ಯಾಂಕಿನ ಕೀಲಿ ಮುರಿದ ಬಗ್ಗೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಾಲ್ವರು ಅಕ್ಟೋಬರ್ ಹನ್ನೊಂದರಂದು ರಾತ್ರಿ ಚಿಕ್ಕೋಡಿಯ ಖಾಸಗಿ ಫೈನಾನ್ಸ್ ಗೆ ನುಗ್ಗಿ ಟ್ರಜರಿಯ ಲಾಕರ್ ನಲ್ಲಿದ್ದ 6,47 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ್ದರು. ಇವರೆಲ್ಲ ಈ ಹಿಂದೆ ಜಮಖಂಡಿಯ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅನ್ನು ಕಳ್ಳತನ ಮಾಡಿದ್ದರು. ನಂತರದ ದಿನಗಳಲ್ಲಿ ಮೂಡಲಗಿ ಹಾಗೂ ಮುಧೋಳದ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕಳ್ಳತನ ಮಾಡುವ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.