This is the title of the web page
This is the title of the web page

Please assign a menu to the primary menu location under menu

Local News

ಮದುವೆ ಮೆರವಣಿಗೆಯಲ್ಲಿ ಗಲಾಟೆ ಒಂಬತ್ತು ಜನರನ್ನು ವಶಕ್ಕೆ ಪಡೆದ ಪೊಲೀಸರು


ಬೆಳಗಾವಿ: ಮದುವೆ ಮೆರವಣಿಗೆ ವೇಳೆ ಎಮ್.ಇ.ಎಸ್ ಪುಂಡಾಟಿಕೆಗೆ ಸಂಬಂಧಿಸಿದಂತೆ ಒಂಬತ್ತು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಹೇಳಿದರು.

ಶುಕ್ರವಾರ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕನ್ನಡಿಗರ ಮದುವೆ ಮೆರವಣಿಗೆ ವೇಳೆ ಗಲಾಟೆ ಮಾಡಿ ಹಲ್ಲೆಗೆ ಮುಂದಾಗಿದ್ದ ಒಂಬತ್ತು ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ರಾತ್ರಿ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಗಲಾಟೆಗೆ ಕಾರಣ ಎನೂ ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಿಂದೆ ಎನಾದ್ರೂ ದ್ವೇಷ ಇತ್ತಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿತ್ತಿದೆ ಎಂದರು.

ಹಲ್ಲೆಗೊಳಗಾದ ವ್ಯಕ್ತಿ ಆರು ತಿಂಗಳ ಹಿಂದೆ ಬೈಕ್ ಸುಟ್ಟಿದ್ದರೆಂಬ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಇನ್ನು ದಾಮನೆ ಗ್ರಾಮದಲ್ಲಿ ಮಚ್ಚು ಲಾಂಗು ಹಿಡಿದು ಓಡಾಡ್ತಾರೆ ಎಂಬ ಆರೋಪ ವಿಚಾರಕ್ಕೆಬಪ್ರತಿಕ್ರಿಯಿಸಿ
ಆ ರೀತಿ ಎನಾದ್ರೂ ಕಂಡು ಬಂದ್ರೇ ವಶಕ್ಕೆ ಪಡೆಯುತ್ತೇವೆ ಮುಂಜಾಗೃತ ಕ್ರಮವಾಗಿ ಘಟನೆ ನಡೆದ ಸ್ಥಳದಲ್ಲಿ ಒಂದು ಸಿಎಆರ್ ತುಕಡಿ ನಿಯೋಜಿಸಿ ಬಿಗಿ ಭದ್ರತೆ ಮಾಡಲಾಗಿದೆ ಎಂದರು.


Gadi Kannadiga

Leave a Reply