This is the title of the web page
This is the title of the web page

Please assign a menu to the primary menu location under menu

Local News

ಓದುಗ ಕವಿತೆ ಆಳದಲ್ಲಿರುವ ಅರ್ಥವನ್ನು ಗಮನಿಸಬೇಕು: ಎ. ಎಂ. ಜಯಶ್ರೀ


ಬೆಳಗಾವಿ ೧೮ : ಕವಿ ಬರೆದಿರುವ ಕವಿತೆಗೆ ನೂರಾರು ಅರ್ಥಗಳಿರುತ್ತವೆ ಅದು ಓದಗನನ್ನು ಅವಲಂಬಿಸಿರುತ್ತದೆ. ಕವಿತ್ವದ ಶಕ್ತಿಯೇ ಅಂತಹದ್ದು. ಕವಿ ಬರೆದಿರುವ ಕೇವಲ ಪದಗಳನ್ನಷ್ಟೇ ನೋಡದೆ ಅದರ ಆಳದಲ್ಲಿರುವ ಅರ್ಥವನ್ನು ಗಮನಿಸಬೇಕು. ಕವಿ ಡಾ. ಜಿನದತ್ತ ದೇಸಾಯಿ ಅವರ ಕವಿತೆಗಳಿಗೆ ಹಲವಾರು ಮುಖಗಳಿವೆ ಓದುಗರು ಗಮನಿಸಬೇಕು ಎಂದು ಬೆಳಗಾವಿ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳಾದ ಶ್ರೀಮತಿ ಎ. ಎಂ. ಜಯಶ್ರೀಯವರು ಇಂದಿಲ್ಲಿ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದವರು ಇಂದು ಮುಂಜಾನೆ ೧೦-೩೦ ಗಂಟೆಗೆ ಮಹಾವಿದ್ಯಾಲಯದ ಶ್ರೀ ಗವಿಸಿದ್ದಪ್ಪ ಬೆಳವಡಿ ಸಭಂಗಣದಲ್ಲಿ ಹಿರಿಯ ಕವಿ ಡಾ. ಜಿನದತ್ತ ದೇಸಾಯಿಯವರ ‘ಸಹಸ್ರಚಂದ್ರ’ ಕೃತಿಯ ಕುರಿತು ಚಿಂತನ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಹಸ್ರಚಂದ್ರ ಕೃತಿಯ ಕುರಿತು ಮಾತನಾಡುತ್ತ ಶ್ರೀಮತಿ ಎ. ಎಂ. ಜಯಶ್ರೀಯವರು ಮೇಲಿನಂತೆ ಹೇಳಿದರು.
ಮುಂದೆ ಮಾತನಾಡುತ್ತ ಅವರು ಡಾ. ದೇಸಾಯಿ ಅವರು ಭಾವಲೋಕದ ಕವಿಯಾಗಿ ಕಾಲ್ಪನಿಕ ಆಧಾರದ ಮೇಲೆ ಕವಿತೆಗಳನ್ನು ರಚನೆ ಮಾಡಿದರೂ ಕೂಡ ಸಮಾಜದಲ್ಲಿರುವ ಓರೆಕೋರೆಗಳನ್ನು ನೋಡುತ್ತ ಅದರ ವಿಮರ್ಶೆಯನ್ನು ಮಾಡುತ್ತ ಅಂತಃರ್ಮುಖಿಯಾಗಿ ಚಿಂತನೆಗಳನ್ನನೊಳಗೊಂಡ ಸಾಹಿತ್ಯ ರಚನೆ ಮಾಡುತ್ತ ಬಂದವರು ಎಂದು ಹೇಳಿದರು.
ಆಶಯ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ, ಲೇಖಕ ಎಲ್. ಎಸ್. ಶಾಸ್ತ್ರಿಯವರು ಮಾತನಾಡುತ್ತ ನನ್ನ ದೃಷ್ಟಿಯಲ್ಲಿ ಎಚ್ ಡುಂಡಿರಾಜ್, ಜರಗನಹಳ್ಳಿ ಶಿವಶಂಕರ ಹಾಗೂ ಡಾ. ಜಿನದತ್ತ ದೇಸಾಯಿ ಹೀಗೆ ಮೂರು ಪ್ರಮುಖ ಚುಟುಕು ಕವಿಗಳಲ್ಲಿ ಡಾ. ದೇಸಾಯಿಯವರು ಒಬ್ಬರು. ಅವರ ಕವೆತೆಗಳಲ್ಲಿ ಸಾಮಾಜಿಕ ಕಳಕಳಿಯಿದೆ ಎಂದು ಹೇಳಿದರು.ಡಾ. ಜಿನದತ್ತ ದೇಸಾಯಿಯವರು ಮಾತನಾಡಿ ಜಿಲ್ಲೆಯ ಲೇಖಕರ ಎಲ್ಲ ಕೃತಿಗಳು ಸಿಗುವಂತಹ ವಾಚನಾಲಯಗಳು ಪ್ರತಿಯೊಂದು ಜಿಲ್ಲೆಗಳಲ್ಲಿ ನಿರ್ಮಾಣಗೊಳ್ಳಬೇಕು ಇದೊಂದು ನನ್ನ ಕನಸು ಎಂದು ಹೇಳಿ ಕರ‍್ಯಕ್ರಮ ಹಮ್ಮಿಕೊಂಡ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.
ಕ್ರಾಂ.ಸಂ.ರಾ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ. ಜಿ. ಧಾರವಾಡ ಅವರು ಮಾತನಾಡಿ ಇಂದಿನ ಕರ‍್ಯಕ್ರಮ ನನಗೆ ತುಂಬ ಸಂತೋಷವನ್ನುಂಡು ಮಾಡಿತು. ಓದುವ ಸಂಸ್ಕೃತಿ ಇಂದು ಉಳಿಸಿ ಬೆಳಸಬೇಕಿದೆ. ತಾವೆಲ್ಲ ಪುಸ್ತಕಗಳನ್ನು ಕೊಂಡು ಓದಿ ಸಾಹಿತ್ಯವನ್ನು ಪ್ರೋತ್ಸಾಹಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಕೇಳಿಕೊಂಡರು.ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು. ಕು. ವಿಜೇತಾ ಪ್ರಾರ್ಥಿಸಿದರು. ಡಾ. ಜಿ. ಆರ್. ಕೋಟೆಣ್ಣವರ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಡಾ. ಎಂ. ಆರ್. ಭಟ್ ವಂದಿಸಿದರು. ಪ್ರೊ. ಡಿ. ಎಚ್. ನಾಯ್ಕ ನಿರೂಪಿಸಿದರು. ಡಾ. ಬಸವರಾಜ ಜಗಜಂಪಿ, ಪ್ರಿ. ಬಿ. ಎಸ್. ಗವಿಮಠ, ಎಂ. ಎ. ಪಾಟೀಲ, ಪ್ರೊ. ರಾಮಕೃಷ್ಣ ಮರಾಠೆ, ಬಸವರಾಜ ಗಾರ್ಗಿ, ಶಿವಪುತ್ರ ಸಸಾಲಟ್ಟಿ, ಅಶೋಕ ಮಳಗಲಿ, ಸುನಂದ ಎಮ್ಮಿ, ಮುಂತಾದವರು ಉಪಸ್ಥತರಿದ್ದರು.


Gadi Kannadiga

Leave a Reply