This is the title of the web page
This is the title of the web page

Please assign a menu to the primary menu location under menu

State

ರೋಗಿ ಮತ್ತು ವೈದ್ಯನ ಸಂಬಂಧ ವರ್ಣನಾತೀತವಾಗಿದೆ : ಡಾ. ವಿ ಡಿ ಪಾಟೀಲ


ಬೆಳಗಾವಿ:- ಇಂದಿನ ಯುವ ವೈದ್ಯರು ನಾಳೆಯ ಆರೋಗ್ಯಯುತ ಸಮಾಜದ ರೂವಾರಿಗಳಾಗಿದ್ದಾರೆ ಆದ್ದರಿಂದ ಸೇವಾ ತತ್ಪರತೆ, ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಬೇಕು ಎಂದು ಕೆ ಎಲ್ ಇ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಅಭಿವೃದ್ಧಿ ಹಾಗೂ ಯೋಜನೆಗಳ ಮೂಖ್ಯಸ್ಥರಾದ ಡಾ. ವಿ ಡಿ ಪಾಟೀಲ ಕರೆ ನೀಡುತ್ತ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚರಕ ಸಭಾಂಗಣದಲ್ಲಿ ವಿಆರ್‌ಎಲ್ ಮೆಡಿಯಾ ಲಿಮಿಟೆಡ್ ನ ಸಹಯೋಗದಲ್ಲಿ ನಡೆದ ವೈದ್ಯರ ದಿನಾಚರಣೆಯ ಅಂಗವಾಗಿ ಮಾತನಾಡುತ್ತಿದ್ದರು. ರೋಗಿ ಮತ್ತು ವೈದ್ಯನ ಸಂಬಂಧ ವರ್ಣನಾತೀತವಾಗಿದೆ. ವೈದ್ಯ ತನಗೆ ಯಾವುದೇ ರೀತಿಯ ಸಂಭಂಧವಿಲ್ಲದಿದ್ದರೂ ತನ್ನ ಹತ್ತಿರ ಚಿಕಿತ್ಸೆಗೆಂದು ಬರುವ ಪ್ರತಿಯೊಬ್ಬ ರೋಗಿಯನ್ನು ತನ್ನವರೇ ಎಂದು ಭಾವಿಸುವ ಮೂಲಕ ಚಿಕಿತ್ಸೆ ನೀಡುತ್ತಾನೆ. ಈ ಮೂಲಕ ರೋಗಿಯ ಆರೋಗ್ಯ ಕಾಳಜಿಯಲ್ಲಿ ವೈದ್ಯರು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದ ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡುತ್ತ ವೈದ್ಯೋ ನಾರಯಣ ಹರಿ: ಎಂದು ಹಿರಿÀಯರು ಆಡಿದ ಮಾತಿನಂತೆ ಆರೋಗ್ಯ ರಕ್ಷಣೆಯಲ್ಲಿ £ಮ್ಮ ಆಸ್ಪತ್ರೆಯ ವೈದ್ಯರು ಈ ನಿಟ್ಟಿನಲ್ಲಿ ಹಗಲಿರುಳು ರೋಗಿಗಳ ಸೇವೆಯಲ್ಲಿ ನಿರತರಾಗಿ ಈ ಭಾಗ ಹಾಗೂ ಸುತ್ತಮುತ್ತಲ ನಾಗರೀಕರ ಆರೊಗ್ಯ ರಕ್ಷಣೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಇದೆ ರೀತಿ ಇನ್ನು ಹೆಚ್ಚಿನ ಕಾಳಜಿಯನ್ನು ವೈದ್ಯರು ತೆಗೆದುಕೊಂಡರೆ ಇನ್ನು ಅಧಿಕ ಸಾದನೆಯನ್ನು ನಾವು ಹೊಂದಬಹುದಾಗಿದೆ ಎಂದು ವೈದ್ಯರುಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿದ ಕೆ ಎಲ್ ಇ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಮುಖ್ಯಸ್ಥರಾದ ಡಾ. ವಿ ಡಿ ಪಾಟೀಲ, ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರಿಗೆ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ವೈದ್ಯರಾದ ಡಾ. ಆರ್ ಆರ್ ವಾಳ್ವೆಕರ, ಡಾ. ಅಜಯ ಕಾಳೆ, ಡಾ. ರಾಜೇಶ್ವರಿ ಕಡಕೋಳ, ಡಾ. ಜಗದೀಶ ಸುರಣ್ಣವರ, ಡಾ. ಅಮಿತ್ ಪಿಂಗಟ್ ಅವರಿಗೆ ವಿಆರ್‌ಎಲ್ ಮೇಡಿಯಾ ಪ್ರೆöÊವೆಟ್ ಲಿಮಿಟೆಡ ವತಿಯಿಂದ ಸನ್ಮಾನಿಸಲಾಯಿತು. ಬೆಳಗಾವಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಶ್ರಿ ಗುರುರಾಜ ಶಿಂಧೆ ಹಾಗೂ ಶ್ರೀ ಸುರೇಂದ್ರ ದೇಸಾಯಿ ಅವರು ವೈದ್ಯರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕೆ ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯ ಸಮಸ್ತ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ, ವಿ ಆರ್ ಎಲ್ ಮೇಡಿಯಾ ಪ್ರೆöÊವೇಟ್ ಲಿಮಿಟೆಡ್ ವಿವಿಧ ಪಧಾದಿಕಾರಿಗಳು, ಹಾಗೂ ಕೆ ಎಲ್ ಇ ಸೆಂಟಿನರಿ ಇನ್ಸಿ÷್ಟಟ್ಯುಟ್ ಆಫ ನರ್ಸಿಂಗ ಸೈನ್ಸ ನ ವಿದ್ಯಾರ್ಥೀUಳು ಭಾಗವಹಿಸಿದ್ದರು. ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿಯೋಜಿತ ನಿರ್ದೇಶಕರಾದ ಡಾ. ಆರ್ ಜಿ ನೆಲವಿಗಿ ಸ್ವಾಗತಿಸಿದರು. ಅರುಣ ನಾಗಣ್ಣವರ ನಿರೂಪಿಸಿದರು. ಸಂತೋಷ ಇತಾಪೆ ವಂದಿಸಿದರು.


Leave a Reply