This is the title of the web page
This is the title of the web page

Please assign a menu to the primary menu location under menu

Local News

ಕೃಷ್ಣಾ ನದಿಗೆ ನೀರು ಬಿಡುಗಡೆ ಮತ್ತೆ ಪ್ರವಾಹದ ಆತಂಕ


ಬೆಳಗಾವಿ: ಕೃಷ್ಣಾ ನದಿ ತೀರದ ಜನತೆಗೆ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು ನೀರಿನ ಮಟ್ಟ ಹೆಚ್ಚುತ್ತಿದೆ.

ಕೃಷ್ಣಾ ನದಿಗೆ 2,06,532 ಕ್ಯೂಸೆಕ್ ನೀರಿನ ಒಳಹರಿವು ಹರಿದು ಬರುತ್ತಿದ್ದು ಪ್ರವಾಹದ ಮುನ್ಸುಚನೆ ನೀಡಲಾಗಿದೆ. ರಾಯಭಾಗ, ನಿಪ್ಪಾಣಿ, ಅಥಣಿ , ಕಾಗವಾಡ, ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಬೀತಿ ಪ್ರಾರಂಭವೆಗಿದ್ದು ಕಳೆದ ಎಂಟು ದಿನಗಳಿಂದ ಧಾರಾಕಾರ ಮಳೆ ಹಿನ್ನೆಲೆ ನಿತ್ಯ 49,524ಕ್ಯೂಸೆಕ್ ಒಳಹರಿವಿನೊಂದಿಗೆ ಮಹಾರಾಷ್ಟ್ರದ ಕೋಯ್ನಾ ಡ್ಯಾಮ್ ಶೇ.83.23ರಷ್ಟು ಭರ್ತಿಯಾಗಿದೆ. 105ಟಿಎಂಸಿ ಸಂಗ್ರಹ ಸಾಮರ್ಥ್ಯದ‌ ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಈಗಾಗಲೇ 87.60ಟಿಎಂಸಿ ನೀರು ಸಂಗ್ರಹವಾಗಿದೆ‌. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೋಯ್ನಾ ಅಣೆಕಟ್ಟಿನ 6ಗೇಟ್‌ ಮೂಲಕ 10,100ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ


Gadi Kannadiga

Leave a Reply