ಗಡಿ ಕನ್ನಡಿಗ
ಖಾನಾಪುರ : ಪಟ್ಟಣದ ಹತ್ತಿರವಿರುವ ಗಾಂಧೀನಗರ ಪ್ರದೇಶದಲ್ಲಿ ಇಂದು ಸಣ್ಣದೊಂದು ಜಗಳ ವಿಕೋಪ ತಾಳಿ ಚಾಕುವಿನಿಂದ ಹಲ್ಲೆ ಸಂಭವಿಸಿದ್ದು ಈ ಹಲ್ಲೆಯಲ್ಲಿ ಸುರೇಶ್ (ರಾಮೇಶ್) ಭೀಮಾ ಬಂಡಿವಡ್ಡರ (ವಯಸ್ಸು 30) ಎಂಬ ಯುವಕನ ಹತ್ಯೆ ಮಾಡಲಾಗಿದೆ.
ಸುರೇಶ್ ಅಲಿಯಾಸ್ ರಮೇಶ್ ಅವರನ್ನು ರಕ್ಷಿಸಲು ಹೋದ ಸಾಗರ್ ಅಷ್ಟೇಕರ್ ಗಂಭೀರವಾಗಿ ಗಾಯಗೊಂಡರು ಗಾಂಧೀನಗರದ ಶನಿಮಠ ಮತ್ತು ಮಾರುತಿ ಮಂದಿರದ ಸುತ್ತಮುತ್ತಲಿನಲ್ಲಿ ರಾಮೇಶ್ ಬಂಡಿವಡ್ಡರ ಮತ್ತು ಯಲ್ಲಪ್ಪ ಬಂಡಿವಡ್ಡರ (ವಯಸ್ಸು 62) ನಡುವೆ ನಡೆಯುತ್ತಿದ್ದ ಜಗಳವನ್ನು ಬಗೆಹರಿಸಲು ಇಂದು ಸಂಧಾನ ಸಭೆ ಆಯೋಜಿಸಲಾಗಿತ್ತು.
ಆದರೆ ಸಂಧಾನ ಸಭೆ ಬಗೆಹರಿಯದೆ ಬದಲಿಗೆ ಮತ್ತಷ್ಟು ತೀವ್ರಗೊಂಡು ಯಲ್ಲಪ್ಪ ಅವರು ರಾಮೇಶ್‌ನ ಹೊಟ್ಟೆ ಮೇಲೆ ಚಾಕುವಿನಿಂದ ಒಮ್ಮೆಲೇ ಹಲ್ಲೆ ನಡೆಸಿದರು ಹಲ್ಲೆ ಎಷ್ಟು ತೀವ್ರವಾಗಿ ತೆಂದರೆ ರಾಮೇಶ್‌ನ ಕರಳು ಅಂಗಾಂಗಗಳು ಹೊರಗೆ ಬಿದ್ದಿದ್ದವು.
ಗಂಭೀರವಾಗಿ ಗಾಯಗೊಂಡ ರಾಮೇಶ್ ಅವರನ್ನು ತುರ್ತಾಗಿ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಕರೆದೊಯ್ಯುವಾಗ ಮಧ್ಯಮಾರ್ಗದಲ್ಲೇ ಅವರ ಸಾವನ್ನಪ್ಪಿದ ಸುದ್ದಿ ಲಭಿಸಿದೆ.
ಘಟನೆ ನಡೆದ ನಂತರ ಶನಿಮಂದಿರ–ಮಾರುತಿ ಮಂದಿರದ ಸುತ್ತಲ ಪ್ರದೇಶದಲ್ಲಿ ಖಾನಾಪುರ ಪೊಲೀಸರು ಭದ್ರತಾ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೀವ್ರತೆ ಇರುವ ಕಾರಣದಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ತನಿಖೆ ಖಾನಾಪುರ ಪೊಲೀಸ್ ಠಾಣೆಯವರು ನಡೆಸುತ್ತಿದ್ದಾರೆ.