ಕೊಪ್ಪಳ: ಜಿಲ್ಲೆಯ ರಸ್ತೆ ಅವ್ಯವಸ್ಥೆ ಜಿಲ್ಲಾ ಕೇಂದ್ರವಾದರೂ ನಗರದ ಪ್ರಮುಖ ರಸ್ತೆ ಅಶೋಕ್ ವೃತ್ತದಿಂದ ಭಾಗ್ಯನಗರ ತಲುಪುವ ರಸ್ತೆ ಎಸ್. ಪಿ. ಆಫೀಸ್ ಇಂದ ಪ್ರವಾಸಿ ಮಂದಿರ ಮುಂಭಾಗ ದೊಡ್ಡ ಗುಂಡಿಗಳು ಬಿದ್ದು ಹಾಳಾಗಿದ್ದು , ದಿನನಿತ್ಯ ಶಾಸಕರು ಹಾಗೂ ಸಂಸದರು ಇದೆ ಪ್ರವಾಸಿ ಮಂದಿರಕ್ಕೆ ಬಂದು ಹೋಗುತ್ತಾರೆ ಕಂಡು ಕಾಣದಂತೆ ಇರುವದು ಸಾರ್ವಜನಿಕ ಆಕ್ರೋಶಕ್ಕೆ ಕಾರಣ ಆಗಿದೆ. ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಹೀಗಾಗಿ ಮಳೆಬಂದಾಗ ದ್ವಿಚಕ್ರ ವಾಹನಗಳ ಸವಾರರು ಪರದಾಡುವುದು ಸಾಮಾನ್ಯ. ಮುಖ್ಯ ಕಚೇರಿಯಿಂದ ಅಶೋಕ ವೃತ್ತದಿಂದ ಕಿನ್ನಾಳಕ್ಕೆ ಹೋಗುವ ಮಾರ್ಗದ (ಐಬಿ ಬಳಿ) ರಸ್ತೆ ಸಾಕಷ್ಟು ಗುಂಡಿಗಳು ಬಿದ್ದಕಾರಣ. ಈ ರಸ್ತೆಗಳಲ್ಲಿ ಸವಾರರು ಪ್ರಯಾಸದಿಂದಲೇ ಹೋಗಬೇಕಾಗಿದೆ ಕೂಡಲೇ ಸಂಬಂಧಿಸಿದ ಶಾಸಕರು ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ ಇಲ್ಲವಾ ಎಂದು ಕಾದುನೋಡೋಣ.
Gadi Kannadiga > State > ಜಿಲ್ಲಾ ಕೇಂದ್ರವಾದರೂ ನಗರದ ಪ್ರಮುಖ ಇಲಾಖೆಗಳ ಮುಂದೆ ರಸ್ತೆ ಗುಂಡಿಗಳು