This is the title of the web page
This is the title of the web page

Please assign a menu to the primary menu location under menu

Crime NewsLocal News

ನವೃತ್ತ ಅಧಿಕಾರಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ದರೋಡೆಕೋರರ ಬಂಧನ


ಬೆಳಗಾವಿ: ನಿವೃತ್ತ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಹೆದರಿಸಿ ಅವರಲ್ಲಿದ್ದ 4 ಲಕ್ಷ ರೂಪಾಯಿ ಹಣವನ್ನು ದೋಚಿದ್ದಲ್ಲದೇ ಅವರನ್ನು ಅಪಹರಿಸಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಧರೋಡೆಕೋಋ ಗುಂಪೊಂದನ್ನು ಹೆಡೆಮುರಿ ಕಟ್ಟುವಲ್ಲಿ ಹಿರೇಬಾಗೇವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಬೆಳಗಾವಿ ಶಿವಾಜಿ ನಗರದ ಲಗಮಪ್ಪಾ ಮಲ್ಲಪ್ಪ ಕೊಳ್ಳಾನಾಯಕ (30), ಪ್ರಕಾಶ ಗುಜ್ಜಪ್ಪಾ ಗೋರವ (26) ದುರ್ಗಮ್ಮಾ ಗಲ್ಲಿ ಮತ್ಯಾನಟ್ಟಿ, ಕಲ್ಲಪ್ಪ ಸಿದ್ರಾಯಿ ಹೊನ್ನಂಗಿ (29) ಮುತ್ಯಾನಟ್ಟಿ, ಮಾರುತಿ ಹನುಮಂತ ನಾಗಪ್ಪ ಬುದ್ರಾಣಿ (20) ಮಾಸ್ತಮರಡಿ, ವಿಠಲ ಗಲ್ಲಿ ಹಾಗೂ ವಿಶಾಲ ಪವರ ಸಿದ್ರಾಯಿ ತಳವಾರ (23) ಮುತ್ಯಾನ ದುರ್ಗಮ್ಮ ಗಲ್ಲಿ ಎಂದು ಗುರುತಿಸಲಾಗಿದೆ.

ಜುಲೈ 31ರಂದು ಮುತ್ನಾಳ ಗ್ರಾಮ ಎನ್‌ಹೆಚ್‌ 4 ರಲ್ಲಿ ನಿವೃತ್ತ ಸೂಪರಿಡೆಂಟ್ ಆಪ್ ಪಾರೆಸ್ಟ್ ಓರ್ವರು ಧಾರವಾಡಕ್ಕೆ ಹೋಗುವಾಗ 5 ಜನ ದರೋಡೆಕೋರರ ಗುಂಪು ಸ್ಕಾರ್ಪಿಯೋ ವಾಹನ ಅಡ್ಡಗಟ್ಟಿ ಹೆದರಿಸಿ 4 ಲಕ್ಷ ಹಣವನ್ನು ದರೋಡೆ ಮಾಡಿ, ನಿವೃತ್ತ ಆಫಿಸರ್ ಅವರನ್ನು ಅಪಹರಿಸಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿತ್ತು. ಈ ಬಗ್ಗೆ ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ಗಂಭೀವಾಗಿ ಪರಿಗಣಿಸಿದ ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಎಸ್ ವಿ ಗಿರೀಶ ಇವರ ಮಾರ್ಗದರ್ಶನದಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಐ ವಿಜಯಕುಮಾರ್ ಎನ್ ಸಿನ್ನೂರ ರವರು ಹಾಗೂ ಸಿಬ್ಬಂದಿ ತಂಡವು 5 ಜನ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


Gadi Kannadiga

Leave a Reply