ಯರಗಟ್ಟಿ: ಸಮರ್ಥ ಮತ್ತು ಸದೃಢ ಸರ್ಕಾರ ರಚನೆಯಲ್ಲಿ ಮತದಾನದ ಪಾತ್ರ ಮಹತ್ವದಾಗಿದ್ದು ತಪ್ಪದೆ ಮತದಾನ ಮಾಡಬೇಕು ಎಂದು ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ ಹೇಳಿದರು.
ಸಮೀಪದ ತಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯಡಿ ಕಿರುಗಾಲುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಗುರುವಾರ ರೋಜಗಾರ ದಿವಸ ಹಾಗೂ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಡಿಯಲು ಬೇರೆ ಊರುಗಳಿಗೆ ಗುಳೆ ಹೋಗುವದನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ ಎಂದರು.
ಗ್ರಾಪಂ ಡಿಇಓ ರಾಜಶೇಖರ ಅಣ್ಣಿಗೇರಿ ಮಾತನಾಡಿ, ೨೦೨೩ ಎಪ್ರೀಲ್ ೧ ರಿಂದ ೩೦೯ ರೂ ನಿಂದ ೩೧೬ ರೂ ಗಳಿಗೆ ಕೂಲಿ ದರವನ್ನು ಹೆಚ್ಚಿಸಲಾಗಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷಕ್ಕೆ ೧೦೦ ದಿನಗಳ ಕೆಲಸವನ್ನು ನೀಡಲಾಗುತ್ತಿದೆ ಪ್ರತಿ ಕುಟುಂಬ ೧೦೦ ದಿನಗಳ ಕೆಲಸ ಪೂರೈಸಿ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಿ. ಕೂಲಿ ಕೆಲಸದ ಜೊತೆಗೆ ಕೃಷಿ ಹೊಂಡ, ದನದ ಶೆಡ್, ಕುರಿ, ಮೆಕೆ ಸಾಕಾಣಿಕೆಗಾಗಿ ಶೆಡ್ ಗಳ ನಿರ್ಮಾಣ ಸೇರಿದಂತೆ ಹಲವು ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅವಕಾಶವಿದೆ ಎಂದರು. ನಂತರ ಕೂಲಿ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಬಿಎಫ್‌ಟಿ ಉಮೇಶ ಗೊರವನಕೊಳ್ಳ, ಮಹೇಶ ಇಟ್ನಾಳ ಸಿಬ್ಬಂದಿ ಇದ್ದರು.
Gadi Kannadiga > Local News > ಸದೃಢ ಸರ್ಕಾರ ರಚನೆಯಲ್ಲಿ ಮತದಾನದ ಪಾತ್ರ ಮಹತ್ವದ್ದು : ಮೋಮಿನ
ಸದೃಢ ಸರ್ಕಾರ ರಚನೆಯಲ್ಲಿ ಮತದಾನದ ಪಾತ್ರ ಮಹತ್ವದ್ದು : ಮೋಮಿನ
Suresh20/04/2023
posted on
