ಗಂಗಾವತಿ:-ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವೀರು ಗ್ರಾಮೀಣ ಅಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ ನೊಂದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಂದು ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಪಿಎಸ್ ಐ ಶಾರದಮ್ಮ ಮಾತನಾಡಿ ಒಬ್ಬ ಮಹಿಳೆ ತನ್ನ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಎಂಬ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ. ಹಾಗೆಯೇ ಸಾಮಾಜಿಕ ವ್ಯವಹಾರಗಳ ಮೂಲಕ ಅರ್ಥಿಕ ಭದ್ರತೆಯನ್ನು ನೀಡಿ ಸಮಾಜದ ಅಭಿವೃದ್ಧಿಯ ಶಿಲ್ಪಿಯಾಗಿ ಮುಂದುವರಿ ಯುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಂತರ ನೊಂದ ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕರಾದ ಜಯಶ್ರೀ ಬಿ ದೇವರಾಜ್ ಮಾತನಾಡಿ
ಪ್ರತಿಯೊಬ್ಬರೂ ಮಹಿಳೆಯ ಮನಸ್ಥಿತಿಯನ್ನು ಅರಿತುಕೊಳ್ಳಬೇಕು. ಸತಿ ಸಹಗಮನದಂತಹ ಆಚರಣೆಗಳು ತೊಲಗಿದ್ದರೂ ಸಹ ಬಾಲ್ಯವಿವಾಹ, ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗುಗಳು ಅಲ್ಲಲ್ಲಿ ಕಂಡುಬರುತ್ತಿವೆ. ವರದಕ್ಷಿಣೆ ಪಡೆಯುವುದಾಗಲಿ, ಕೊಡುವುದಾಗಲಿ ಮಾಡಬಾರದು. ಆಸ್ತಿಯಲ್ಲಿ ಸಹ ಮಹಿಳೆಯರಿಗೆ ಸಮಾನ ಹಕ್ಕಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದರು.ದೇಶದಲ್ಲಿ ಪ್ರತಿ 100 ಮಹಿಳೆಯರಲ್ಲಿ ಒಬ್ಬರಿಗೆ ದೌರ್ಜನ್ಯ ನಡೆಯುತ್ತಿದೆ. ಆದರೆ ಯಾರೂ ಅದನ್ನು ಬಹಿರಂಗ ಪಡಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳಾ ಇಲಾಖೆ ಹಾಗೂ ಮಹಿಳಾ ಸಂಘಟನೆಗಳ ನೆರವು ಪಡೆದುಕೊಳ್ಳುವಂತಾಗಬೇಕು. ಪ್ರತಿ ಮಹಿಳೆಯು ಸಹಭಾಗಿತ್ವದಲ್ಲಿ ಬದುಕುವಂತೆ ಆಗಬೇಕು. ಮಹಿಳೆಗಿರುವ ಸಾಮಾಜಿಕ ಕಟ್ಟುಪಾಡುಗಳನ್ನು ತೊರೆದು ಉತ್ತಮ ಜೀವನ ನಡೆಸಬೇಕು ಎಂದರು.
ಈ ವೇಳೆ ನೊಂದ ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರದ ವತಿಯಿಂದ ಪಿಎಸ್ ಐ ಶಾರದಮ್ಮ ಹಾಗೂ ಪಿಎಸ್ ಐ ಶೈನಾಜ್ ಬೇಗಂ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಚಂದ್ರಿಕಾ, CWC ಕಾರ್ಯಕರ್ತ ಯಮುನಾ, ಸಾಂತ್ವನ ಸಮಾಜ ಕಾರ್ಯಕರ್ತೆ ಸಕೀನಾ ಬೇಗಂ, ಕುಮಾರಿ ಐಶ್ವರ್ಯ, ಮಂಜುನಾಥ್ ಎಂ, ಮಂಜುಳಾ ಕೆ ಆಚಾರ ನರಸಾಪುರ , ಸಾಂತ್ವನ ಕೇಂದ್ರದ ಸದಸ್ಯರು ಹಾಗೂ ಉಪಸ್ಥಿತರಿದ್ದರು.
ವರದಿ
(ಹನುಮೇಶ ಬಟಾರಿ ಗಂಗಾವತಿ)