WhatsApp Group
Join Now
ಬೆಳಗಾವಿ ;ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಅಪ್ರತಿಮ ಶರಣರು-ಸುನೀತಾ ನಂದೆಣ್ಣವರ ಹೇಳಿದರು.
ಅವರು ಶ್ರಾವಣ ಮಾಸದ ನಿಮಿತ್ತ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘವು ಮನೆ ಮನೆಗಳಲ್ಲಿ ಮನ ಮನಕ್ಕೆ ವಚನ ಸಾಹಿತ್ಯ ಕುರಿತು ಶರಣ ದಂಪತಿಗಳಾದ ಜೀ, ಬಿ, ಕಟ್ಟಿಮನಿಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶರಣೆ ಹಡಪದ ಅಪ್ಪಣಗಳ ಪತ್ನಿ ಲಿಂಗಮ್ಮನವರ ಕುರಿತು ಸುನಿತಾ ನಂದೆಣ್ಣವರ ಮಾತನಾಡಿದರು ಶರಣೆ ಲಿಂಗಮ್ಮ ತಾನು ಕೀಳು ಕುಲದಲ್ಲಿ ಹುಟ್ಟಿ ಶರಣರ ಸಂಗದಿಂದ ಮಂಗಳದ ಮಹಾ ಬೆಳಗಿನಲ್ಲಿ ಓಲಾಡಿದೆನು ಎಂದು ಹೇಳುವುದರ ಜೊತೆಗೆ ಮನುಷ್ಯನು ಅಹಂಕಾರವನ್ನು ಅಳಿದು ಸದ್ಗುಣಗಳನ್ನು ಬೆಳೆಸಿಕೊಂಡು ಗಾಳಿ ಬಿಸದ ಜಲದಂತೆ, ಮೊಡವಿರದ ಸೂರ್ಯನಂತೆ, ಬೆಳಗುವ ದರ್ಪಣದಂತೆ ಮನಸ್ಸನ್ನು ನಿರ್ಮಲವಾಗಿಸಿಕೊಳ್ಳಬೇಕು.
ಒಡಲಗುಣ ಹಿಂಗದೆ , ಅಂಗದ ಹಂಗನ್ನು ಹರಿದು ತಾನೇ ಮೃಡಾನಾಗದೆ ಘನವಕಾಣಬಾರದೆಂದು ಲಿಂಗಮ್ಮನ ವಚನ ವಿಶ್ಲೇಷಣೆಯಲ್ಲಿ ಹೇಳಿದರು .
ಲಿಂಗಮ್ಮ ನಿಲಾಂಬಿಕೆಯ ಆಪ್ತ ಸಖಿಯಾಗಿದ್ದಳು ಕೊನೆಯವರೆಗೂ ನಿಲಾಂಬಿಕೆ ಜೊತೆ ಇದ್ದ ಅವಳ ಜೊತೆಯಲ್ಲಿಯೇ ತಂಗಡಿಯಲ್ಲಿ ಲಿಂಗೈಕ್ಕಳಾದಳು ಎಂದು ಹೇಳಿದರು ಲಿಂಗಮ್ಮ ಭೋಧೆಯ ವಚನದ ಅಪ್ಪಣಗಳ ಸತಿ ಲಿಂಗಮ್ಮ ಎಂದೇ ಹೆಸರಾಗಿದ್ದು ಅವಳ ವಚನಗಳು ನಮಗೆ ಮಂಗಳದ ಬೆಳಕನ್ನೇ ನಿಡುವಂತಹು ಎಂದು ಹೇಳಿದರು. ನಂತರ ಫ್ರೊ, ಶರಣರಾದ ಶ್ರೀಕಾಂತ ಶಾನವಾಡ ಅವರು ಹಡಪದ ಅಪ್ಪಣ್ಣನವರ ಕುರಿತು ಮಾತನಾಡಿದರು, ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಷ್ಟೇ ಅಲ್ಲ ಅವರ ನೆರಳಿನಂತೆ ಸದಾ ಅವರ ಜೊತೆಗೆ ಇದ್ದವರು ಸೂಕ್ಷ್ಮ ಗ್ರಹಿಕೆಯ ಅಪ್ಪಣ್ಣನವರು ಬಸವಣ್ಣನವರ ಆಪ್ತ ರಕ್ಷಕರು ಆಗಿದ್ದರು ಬಸವಣ್ಣನವರಿಗೆ ರಕ್ಷಣಾಕವಚವೇ ಆಗಿದ್ದರು ಮೂಢನಂಬಿಕೆಯನ್ನು ಹೋಡೆದೊಡಿಸಲು ಎದ್ದ ತಕ್ಷಣ ಅಪ್ಪಣನವರನ್ನು ಕಾಣುತ್ತಿದ್ದರಲ್ಲದೆ ಯಾರೇ ಬಸವಣ್ಣನವರನ್ನು ಬೇಟ್ಟಿಯಾಗಬೇಕಾದರೆ ಮೊದಲು ಅಪ್ಪಣ್ಣನವರನ್ನು ಕಾಣಬೇಕಿತ್ತು. ಬಸವಣ್ಣನವರ ಸಾಧನೆಗೆ ಅಪ್ಪಣ್ಣನವರ ಅಪಾರ ಕೊಡುಗೆ ಇದೆ ತೆರೆಯ ಮರೆಯ ಕಾಯಿಯಂತೆ ಇದ್ದು ಶ್ರಮಿಸಿದ ಅಪ್ಪಣ್ಪನವರು ತಾವು ಬಸವಣ್ಣನಿಂದ ಉದ್ಧಾರವಾದೆನು ಎಂದರೆ ಬಸವಣ್ಣನವರು ತಮಗೆ ದೊರೆತ ಕೀರ್ತಿ ಅಪ್ಪನವರಿಗೆ ಸಲ್ಲುತ್ತದೆ ಎನ್ನುತ್ತಿದ್ದರು ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಕೊಡದ ಆಪ್ತರಾಗಿದ್ದರು ಬಾಲ್ಯದಿಂದಲೇ ಕೂಡಿ ಆಡಿ ಬೆಳೆದ ಇವರುಗಳು ಆತ್ಮೀಯ ಸ್ನೇಹಿತರಾಗಿ ಗುರು ಶಿಷ್ಯರಾಗಿ, ದೇಹ ಎರಡಾಗಿ ಭಾವ ಒಂದಾಗಿ ಇದ್ದವರು ಇವರ ಒಡನಾಟದ ಬಂಧವನ್ನು ಎಷ್ಟು ಹೇಳಿದರೂ ಕಡಿಮೆಯೇ ಎಂದು ಹೇಳಿದರು ಬಸವಣ್ಣನವರ ಜೀವನದ ಕೊನೆಯವರೆಗೂ ಅವರ ಜೊತೆ ಇದ್ದ ಅವರನ್ನು ಕಾಪಾಡಿಕೊಂಡು ಬಂದು ಬಸವಣ್ಣನಂತಹ ವಿಶ್ವಗುರುವನ್ನು ನಮಗೆ ಕೊಟ್ಟ ಕೀರ್ತಿ ಅಪ್ಪಣ್ಣನವರಿಗೆ ಸಲ್ಲುತ್ತದೆ. ನಾವು ಬಸವಣ್ಣನವರ ಜೊತೆಗೆ ಅಪ್ಪಣ್ಣನವರನ್ನು ಸದಾ ನೆನೆಯಬೇಕು ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು
ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರು ಶರಣ ಬಸವರಾಜ ರೊಟ್ಟಿ ಅವರು ಸೆಪ್ಟೆಂಬರ್ ನಲ್ಲಿ ನಡೆಯುವ ಬಸವ ಅಭಿಯಾನ ಮತ್ತು ರಥ ಯಾತ್ರೆ ಬಗ್ಗೆ ತಿಳಿಸಿದರು ಆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಕರೆ ಕೊಟ್ಟರು.ಇಂದಿನ ವಚನ ಪ್ರಾರ್ಥನೆ ಶೈಲೇಜಾ ಮುನವಳ್ಳಿ ಶೋಭಾ ಶಿವಳ್ಳಿ ಲಲಿತಾ ರುದ್ರಗೌಡರ ನಡೆಸಿಕೊಟ್ಟರು, ಧ್ವಜಾರೋಹಣ ಮತ್ತು ಪ್ರಸಾದ ವ್ಯವಸ್ಥೆಯನ್ನು ಶರಣ ದಂಪತಿಗಳಾದ ಕಟ್ಟಿಮನಿ ಅವರು ಮಾಡಿದ್ದರು, ನಿರೂಪಣೆ ಶೋಭಾ ಶಿವಳ್ಳಿ ವಂದನಾರ್ಪಣೆ ಶಂಕರ ಶೆಟ್ಟಿ ಅವರು ಮಾಡಿದರು ಅಧ್ಯಕ್ಷರು ಎಸ್ ಜೀ ಸಿದ್ನಾಳರು ಶರಣರಾದ ಮಳಗಲಿಯವರು ಹಾಗೂ ಎಲ್ಲ ಶರಣ ಶರಣೆಯರು ಉಪಸ್ಥಿತರಿದ್ದರು.