ಬೆಳಗಾವಿ ; ಮಹಾರಾಷ್ಟ್ರ ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋದಿಸಿ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಸಾವಿರಾರು ಕನ್ನಡದ ಧ್ವಜ ಹಾರಿಸಲು ಮಂಗಳವಾರ ಆಗಮಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹಾಗೂ ಸಾವಿರಾರು ಕಾರ್ಯಕರ್ತರನ್ನು ಪೋಲೀಸರು ಹಿರೇಬಾಗೇವಾಡಿ ಟೋ ಗೇಟ್ ಬಳಿ ಬಂದಿಸಿದರು.
ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರಕ್ಕೆ ಪಾಠ ಕಲಿಸಲು ನಗರದ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಕನ್ನಡದ ದ್ವಜವನ್ನು ಹಾರಾಡಿಸಬೇಕೆನ್ನುವ ಉದ್ದೇಶದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಕರವೇ ಕಾರ್ಯಕರ್ತರನ್ನು ಹಿರೇಬಾಗೇವಾಡಿಯಲ್ಲಿ ಪೋಲೀಸರು ತಡೆದರು. ಈ ಸಂದರ್ಭದಲ್ಲಿ ಪೋಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಬೆಳಗಾವಿ ಕರ್ನಾಠಕದ ಅವಿಭಾಜ್ಯ ಅಂಗ, ನಾನು ಬೆಳಗಾವಿಗೆ ಬರುವಾಗ ಬಿಡುವುದಿಲ್ಲ ಎಂದರೆ ಇದು ಪೋಲೀಸ್ ರಾಜ್ಯನಾ ? ನಾವೇನಾದರೂ ಬೇರ ರೀತಿಯ ತಿರ್ಮಾಣ ತೆಗೆದುಕೊಳ್ಳುತ್ತೇವೆ ಎನ್ನು ಭಯಾ ಇದೆಯಾ ಎಂದು ಪ್ರಶ್ನಿಸಿದರು. ಬೆಳಗಾವಿ ಪೋಲೀಸರು ಕನ್ನಡಿಗರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಕರವೇ ಕಾರ್ಯಕರ್ತರನ್ನು ಬೆಳಗಾವಿ ಪ್ರವೇಶ ಮಾಡದಂತೆ ತಡೆ ಹಿಡಿದಿರುವ ಕುರಿತು ಗೃಹ ಸಚಿವ ಅರಗ್ ಜ್ಞಾನೇಂದ್ರ ಅವರೊಂದಿಗೆ ಚರ್ಚೆ ನಡೆಸುವೆ. ನಾವು ಮಹಾರಾಷ್ಟ್ರಕ್ಕೆ ಹೋಗುತ್ತಿಲ್ಲ ಸ್ವಾಮಿ. ನಾನು ಕರ್ನಾಟಕದ ಬೆಳಗಾವಿಗೆ ಹೋಗುತ್ತಿರುವುದು. ನಮ್ಮನ್ನು ನಡುರಸ್ತೆಯಲ್ಲಿಯೇ ತಡೆಯುವ ಪೋಲೀಸರ ನಡೆ ಸರಿಯಾದುದ್ದಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಗೋಗಟೆ ಕಾಲೇಜಿನಲ್ಲಿ ನಡೆದ ಗಲಾಟೆಯಲ್ಲಿ ಪೋಲೀಸರು ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಕನ್ನಡದ ಬಾವುಟದ ಬಗ್ಗೆ ಅವಹೇಳನ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪೋಲೀಸರು ಕನ್ನಡದ ಬಾವುಟದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವುದು ತಪ್ಪು. ಈ ಕುರಿತು ನಾನು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕಕುಮಾರ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಇದನ್ನು ತನಿಖೆ ನಡೆಸುತ್ತಿದ್ದಾರೆ ಅಂತೆ ತನಿಖೆಯಲ್ಲಿ ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ ಮಹಾರಾಷ್ಟ್ರದ ಉಪಟಳಕ್ಕೆ ತಕ್ಕ ಪಾಠ ಕಲಿಸಲು ಸಾವಿರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುವ ಸಂದರ್ಭದಲ್ಲಿ ಪೋಲೀಸರು ಹಿರೇಬಾಗೇವಾಡಿಯಲ್ಲಿ ಬಂದಿಸಿರುವ ಕ್ರಮ ಸರಿಯಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಪೋಲೀಸರನ್ನು ಮುಂದೆ ಬಿಟ್ಟು ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ. ಮಹಾರಾಷ್ಟ್ರದ ಮುಖಂಡರಿಗೆ ಬೆಳಗಾವಿಯಲ್ಲಿ ಮಹಾಮೇಳಾವ್, ಎಂಇಎಸ್‌ಗೆ ಸಾರ್ವಜನಿಕ ಸಭೆ ಮಾಡಲು ಅವಕಾಶ ಕೊಡುತ್ತದೆ ಸರಕಾರ. ಆದರೆ ಕರ್ನಾಟಕದಲ್ಲಿದ್ದು, ನಾಡು, ನುಡಿಯ ಬಗ್ಗೆ ಹೋರಾಟ ಮಾಡುವ ಕರವೇ ಕಾರ್ಯಕರ್ತರಿಗೆ ಅಕಾಶ ಕಲ್ಪಿಸದೆ ಇರುವುದು ದುರಂತದ ಸಂಗತಿ ಎಂದರು.
ಗಣೇಶ ರೋಕಡೆ, ರುದ್ರಗೌಡ ಪಾಟೀಲ, ಮಹೇಶ ಹಟ್ಟಿಹೊಳಿ, ರಮೇಶ ತಳವಾರ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಲಾರಿಗಳ ಮೇಲೆ ಕಲ್ಲು ತೋರಾಟ, ಕಪ್ಪು ಮಸಿ
ಬೆಳಗಾವಿಯಲ್ಲಿ ಬಹಿರಂಗ ಸಭೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದತ್ತ ಮುನ್ನುಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಮಹಾರಾಷ್ಟ್ರ ನೊಂದಣಿಯ ೫ಕ್ಕೂ ಹೆಚ್ಚು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದರು.
ಪುಣೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಮಹಾರಾಷ್ಟ್ರ ನೊಂದಣಿ ವಾಹನದ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. ಈ ವೇಳೆ ಲಾರಿ ಪುಡಿಪುಡಿಯಾಗಿದೆ ಮಹಾರಾಷ್ಟ್ರ ನೊಂದಣಿಯ ಅನೇಕ ವಾಹನಗಳನ್ನು ತಡೆದು ಅಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಮಹಾರಾಷ್ಟ್ರ ನೊಂದಣಿ ಇರುವ ಫಲಕದ ಮೇಲು ಕಪ್ಪುಮಸಿ ಬಳಿದು ಅಕ್ರೋಶ ಹೊರಹಾಕಿದರು.
Gadi Kannadiga > National > ಹಿರೇಬಾಗೇವಾಡಿ ಹೆದ್ದಾರಿಯಲ್ಲಿ ಕರವೇ ಉಗ್ರ ಸ್ವರೂಪ
More important news
ಎಂಇಎಸ್ ನಿಷೇಧಿಸುವಂತೆ ಕರವೇ ಆಗ್ರಹ
29/06/2022