This is the title of the web page
This is the title of the web page

Please assign a menu to the primary menu location under menu

Local News

ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿರುವ ಗ್ಯಾಸ್ ಆಪರೇಟೆಡ್ ಬರ್ನರ್


ಬೆಳಗಾವಿ ೨೦ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆರವರ ಸತತ ಪ್ರಯತ್ನದಿಂದಾಗಿ ಮೃತದೇಹಗಳ ದಹನಕ್ಕಾಗಿ ವಿನೂತನವಾಗಿ ಮೇಘಾ ಗ್ಯಾಸ್ ಕಂಪನಿ ವತಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ಮೃತರ ದೇಹಗಳನ್ನು ಗ್ಯಾಸ್ ಆಪರೇಟೆಡ್ ಬರ್ನರ್‌ನ್ನು ಅಳವಡಿಸಲಾಗುತ್ತಿದೆ. ಬೆಳಗಾವಿ ನಗರದ ಸದಾಶಿವ ನಗರ ಸಾರ್ವಜನಿಕ ಸ್ಮಶಾನದಲ್ಲಿ ಮೃತದೇಹಗಳ ದಹನಕ್ಕಾಗಿ ಡಿಸೇಲ್ ಆಪರೇಟೆಡ್ ಬರ್ನರ್‌ಗಳಿಂದ ಸಾರ್ವಜನಿಕರಿಗೆ ೫೦೦೦ ಗಳ ವೆಚ್ಚ ತಗುಲುತ್ತಿದ್ದು, ಕಟ್ಟಿಗೆಯಿಂದ ದೇಹದ ದಹನಕ್ಕಾಗಿ ೩ ರಿಂದ ೪ ಸಾವಿರವರೆಗೆ ವೆಚ್ಚವಾಗಿ ದೇಹ ದಹನವಾಗಲು ಸುಮಾರು ೪ ತಾಸುಗಳು ಬೇಕಾಗುವುದಲ್ಲದೆ ಇಲೆಕಟ್ರಿಕ್ ಆಪರೇಟೆಡ್ ಬರ್ನರ್‌ಗೆ ಅತಿಯಾದ ವೆಚ್ಚವಾಗುವುದರಿಂದ ಸಾರ್ವಜನಿಕರಿಗೆ ಮೃತದೇಹಗಳ ದಹನ ಮಾಡುವ ಕ್ರಿಯೆಯನ್ನು ಸುಲಭಗೊಳಿಸುವ ಮತ್ತು ಕಡಿಮೆ ವೆಚ್ಚದಲ್ಲಿ ಮೃತದೇಹಗಳ ಅಂತ್ಯಕ್ರಿಯೆಯನ್ನು ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗ್ಯಾಸ್ ಆಪರೇಟೆಡ್ ಬರ್ನರ್ ಗಳನ್ನು ಬಳಕೆ ಮಾಡಲಾಗುತ್ತಿದೆ.
ಬೆಳಗಾವಿ ನಗರದಲ್ಲಿ ಶಾಸಕ ಅನಿಲ ಬೆನಕೆರವರ ನಿರ್ದೇಶನದ ಮೇರೆಗೆ ಮೇಘಾ ಗ್ಯಾಸ ಕಂಪನಿಯವರೊಂದಿಗೆ ಚರ್ಚಿಸಿ ಸದಾಶಿವ ನಗರದ ಸಾರ್ವಜನಿಕ ಸ್ಮಶಾನದಲ್ಲಿ ಗ್ಯಾಸ್ ಮೂಲಕ ದೇಹಗಳ ದಹನ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದು, ಮಂಗಳವಾರ ೧೮.೧೦.೨೦೨೨ ರಂದು ಸ್ಮಶಾನ ಭೂಮಿಗೆ ತೆರಳಿ ಅಲ್ಲಿನ ಗ್ಯಾಸ್ ಪೈಪಲೈನ ಕಾಮಗಾರಿಯನ್ನು ಪರಿಶೀಲಿಸಿದರು. ನಂತರದಲ್ಲಿ ಪರೀಕ್ಷಾರ್ತವಾಗಿ ಮೃತದೇಹವನ್ನು ದಹನ ಮಾಡಲಾಗಿ, ಮೃತದೇಹವು ಕೇವಲ ಒಂದು ತಾಸಿನಲ್ಲಿ ದಹನವಾಯಿತು. ಅದಲ್ಲದೆ ಇದಕ್ಕೆ ೧೦೦೦ ರೂಪಾಯಿ ಯಿಂದ ೧೫೦೦ ರೂಪಾಯಿ ವರೆಗೆ ವೆಚ್ಚವಾಗಿದೆ. ಇದರಿಂದ ಸಾರ್ವಜನಿಕರ ಸಮಯ ಹಾಗೂ ವೆಚ್ಚವು ಕಡಿಮೆ ಆಗುತ್ತದೆ ಮತ್ತು ವಾಯುಮಾಲಿನ್ಯವಾಗುವುದಿಲ್ಲ ಎಂದು ಮಾಹಿತಿಯನ್ನು ನೀಡಿದರು. ಶೀಘ್ರದಲ್ಲೇ ಸದಾಶಿವ ನಗರದಲ್ಲಿನ ಗ್ಯಾಸ್ ಆಪರೇಟೆಡ್ ಬರ್ನರ್ ಲೋಕಾರ್ಪಣೆಗೊಳ್ಳುವುದಿದ್ದು, ಸಾರ್ವಜನಿಕರಿಗೆ ಇದರಿಂದ ಮೃತ ದೇಹಗಳ ದಹನಕ್ಕಾಗಿ ಅನುಕೂಲವಾಗುವುದು ಎಂದು ಮಾಹಿತಿಯನ್ನು ನೀಡಿದರು.
ಪರೀಕ್ಷಾರ್ತ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆ ಸಹಾಯಕ ಕಾಯ್ನಿರ್ವಾಹಕ ಅಭಿಯಂತರ ಸಚಿನ ಕಾಂಬಳೆ, ಗ್ಯಾಸ್ ಏಜೆನ್ಸಿ ಹಿರೇಮಠ, ಬಾಂಬೆ ಗ್ಯಾಸ್ ಏಜೆನ್ಸಿ ಟೆಕ್ನಿಕಲ್ ಟೀಮ್ ಉಪಸ್ಥಿತರಿದ್ದರು.


Gadi Kannadiga

Leave a Reply