ಕುಷ್ಟಗಿ:- ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿರ್ಮಾಣವಾದ ನೂತನ ಬಸ್ ನಿಲ್ದಾಣ ಬುಧವಾರ ದಿನಾಂಕ 22-3-2023 ರಂದು ಉದ್ಘಾಟನೆ ಯಾಗಲಿದೆ ಎಂದು ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.ಬಸ್ ನಿಲ್ದಾಣಕ್ಕೆ ಇನ್ನೂ ಬೇಕಾದ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಹೈದ್ರಾಬಾದ್ ಕರ್ನಾಟಕ ಯುವ ಶಕ್ತಿ (ರಿ) ಕುಷ್ಟಗಿ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಗಾಣಿಗೇರ್ ಪತ್ರಿಕಾಗೋಷ್ಠಿಯಲ್ಲಿ ನೂತನ ಬಸ್ ನಿಲ್ದಾಣ ಪೂರ್ಣ ಕಾಮಗಾರಿಯಾಗಿಲ್ಲಾ ಮತ್ತು ಮೂಲಭೂತ ಸೌಕರ್ಯಗಳು ಸಹ ಸರಿಯಾಗಿ ಒದಗಿಸಿಲ್ಲಾ ಇಂತಹ ಕೆಲಸಗಳು ಇನ್ನೂ ಮಾಡದೇ ಏಕಾ ಏಕಿ ಉದ್ಘಾಟನೆ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು ಹಾಗಾಗಿ ನೂತನ ಬಸ್ ನಿಲ್ದಾಣ ದ ಉದ್ಘಾಟನೆ ಮಾಡಲು ನಾವು ಬಿಡುವುದಿಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದವರಿಗೆ ಹೇಳಿದ್ದಾರೆ. ಎಂದು ಶಾಸಕರಿಗೆ ಮಾದ್ಯಮದವರು ತಿಳಿಸಿದ ಸಂದರ್ಭದಲ್ಲಿ ಮಾದ್ಯಮ ದವರಿಗೆ ಉತ್ತರಿಸಿದ ಶಾಸಕರು ಬಸ್ ನಿಲ್ದಾಣದ ಬಗ್ಗೆ ಏನಾದ್ರೂ ಆಕ್ಷೇಪಣೆ ಇದ್ರೆ ಕೇಳುವ ಅಧಿಕಾರ ಅವರಿಗೆ ಮತ್ತು ಎಲ್ಲಾ ಸಾರ್ವಜನಿಕ ರಿಗೂ ಇದೆ .ನೂತನ ಬಸ್ ನಿಲ್ದಾಣ ಬಗ್ಗೆ ನನಗಿರುವ ಮಾಹಿತಿ ಅವರಿಗೆ ಕೊಡಲು ನಾನು ಸಿದ್ದನಿದ್ದೇನೆ. ಎಂದು ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದರು.ನೂತನ ಬಸ್ ನಿಲ್ದಾಣದ ಉದ್ಘಾಟನೆಗೆ ಸಾರಿಗೆ ಸಚಿವರಾದ ಬಿ ಶ್ರೀರಾಮುಲು ಅವರಿಗೆ ಎರಡು ಪತ್ರಗಳನ್ನು ಬರೆದಿದ್ದೇನೆ.ಮತ್ತು ನೇರವಾಗಿ ಬೇಟಿಯಾದ ಸಂದರ್ಭದಲ್ಲಿಯೂ ಸಹ ಕೇಳಿದ್ದೇನೆ.ಆಗ ಶ್ರೀರಾಮುಲು ರವರು, ನಾವು ಈಗ ಸಂಕಲ್ಪ ಯಾತ್ರೆ ಕಾರ್ಯಕ್ರಮಗಳು ಇರುವ ಕಾರಣ ಬರಲು ಆಗುವದಿಲ್ಲಾ ,ಹಾಗಾಗಿ ನೀವು ಉದ್ಘಾಟನೆ ಮಾಡಿ ಎಂದು ಹೇಳಿದ್ದಾರೆ.ಅದಕ್ಕಾಗಿ ನಾವು ಈಗ ನೂತನ ಬಸ್ ನಿಲ್ದಾಣ ವನ್ನು ನಾಳೆ ಉದ್ಘಾಟಿಸಲಿದ್ದೇವೆ ಎಂದು ಶಾಸಕರು ಹೇಳಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ