ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ ಕೃತ್ಯ ಖಂಡನೀಯ-ರೊಟ್ಟಿ

Murugesh Shivapuji
ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ ಕೃತ್ಯ ಖಂಡನೀಯ-ರೊಟ್ಟಿ
WhatsApp Group Join Now

ಬೆಳಗಾವಿ; ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿರುವ ಕೃತ್ಯವು ಖಂಡನೀಯವಾಗಿದ್ದು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಾಗತಿಕ ಲಿಂಗಾಯತ ಮಹಾಸಭೆಯ ಸಂಘಟನಾ ಕಾರ್ಯದರ್ಶಿ ಬಸವರಾಜ ರೊಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲ್ಬುರ್ಗಿ ಜಿಲ್ಲೆಯ ಶಹಪುರ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ, ಗುರುವಾರ ರಾತ್ರಿ,
12ನೇ ಶತಮಾನದ ಶ್ರೇಷ್ಠ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು, ಕೆಲ ಸಮಾಜಘಾತಕ ಕಿಟಗೇಡಿಗಳು ಭಗ್ನಗೊಳಿಸಿರುವ ಘಟನೆ ಅತ್ಯಂತ ಆಘಾತಕಾರಿ ಸಂಗತಿಯಾಗಿದೆ.
ಬಸವಾದಿ ಶರಣರೊಂದಿಗೆ, ಸಮಾನತೆಯ ಸಂದೇಶವನ್ನು ಸಾರಿದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯ ಎಡಗೈಯನ್ನು ಮುರಿದು ಹಾಕಿ, ಬಲಗೈ ಬೆರಳುಗಳನ್ನು ವಿರೂಪಗೊಳಿಸಿ, ಶರಣ ಅಂಬಿಗರ ಚೌಡಯ್ಯನವರ ಮುಖಕ್ಕೆ ಸಗಣಿಯನ್ನು ಎರಸಚಿದ್ದು ಅತ್ಯಂತ ಅಮಾನವೀಯ,
ಹೇಯ ಕೃತ್ಯವಾಗಿದೆ. ಇದು ಅಸಹಿಷ್ಣುತೆಯ ಒಂದು ನಿದರ್ಶನ.ಈ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದವರು ಹೇಳಿದ್ದಾರೆ.
ಸರಕಾರ ಸಮಾಜಘಾತಕ ಕಿಡಿಗೇಡಿಗಳನ್ನು ಪತ್ತೆ, ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!