ಯರಗಟ್ಟಿ: ಪಟ್ಟಣಕ್ಕೆ ಆಗಮಿಸಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ರಥಯಾತ್ರೆಗೆ ಯರಗಟ್ಟಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕಾಡಳಿತದಿಂದ ವೈಭವ ಸ್ವಾಗತಕೊರಲಾಯಿತ್ತು.
ಜನೇವರಿ ೬, ೭, ಮತ್ತು ೮ ರಂದು ಹಾವೇರಿಯಲ್ಲಿ ಜರುಗುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಪ್ರಚಾರಾರ್ಥ ರಾಜ್ಯ ಎಲ್ಲಾ ಪ್ರಮುಖ ನಗರಗಳಲ್ಲಿ ಸಂಚರಿಸುವ ತಾಯಿ ಭುವನೇಶ್ವರಿ ತಾಯಿಯ ಕನ್ನಡ ರಥಯಾತ್ರೆಗೆ ತಾಲೂಕಾ ದಂಡಾಧಿಕಾರಿ ಮಹಾಂತೇಶ ಮಠದ ಕನ್ನಡ ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸೊದರು.
ಈ ಸಂದರ್ಭದಲ್ಲಿ ತಾಲೂಕಾ ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಕನ್ನಡ ರಥಯಾತ್ರೆ ಉಸ್ತುವಾರಿ ನಬೀಸಾಬ ಕುಷ್ಟಗಿ, ಉಪ ತಹಶೀಲ್ದಾರ ಎಸ್. ಜಿ. ದೊಡ್ಡಮನಿ, ಡಾ. ರಾಜಶೇಖ ಬಿರಾದಾರ, ಗುರು ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಎಲ್. ಬಿ. ದಳವಾಯಿ, ಕರವೇ ಅಧ್ಯಕ್ಷ ರಫೀಕ ಡಿ.ಕೆ., ಶಿಕ್ಷಕರಾದ ವಿ. ಎಂ. ಹಾದಿಮನಿ, ಶಿಕ್ಷಕಿಯರಾದ ಶ್ರೀಮತಿ ಆರ್. ಈ. ಬಡಿಗೇರಿ, ಶ್ರೀಮತಿ ಶಿಲ್ಪಾ ಪತ್ತಾರ, ಕುಮಾರಿ ದಾನಮ್ಮ ಅಂಗಡಿ, ರುಕ್ಮಣಿ ಗೌಡರ, ಪಟ್ಟಣ ಪಂಚಾಯತ ಸಿಬ್ಬಂದಿಯಾದ ಪ್ರಕಾಶಗೌಡ ಪಾಟೀಲ, ಆನಂದ ಬೆಳವಿ, ಅಡಿವೆಪ್ಪ ಇಟಗೌಡ್ರ, ರಾಜು ಹಿರೇಮಠ ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥತರಿದ್ದರು.