ಬೆಳಗಾವಿ ೧೮- ಸಂಘಟನೆಯ ಕರ್ಯ ತುಂಬ ಕಷ್ಟಕರವಾದುದು. ಛಲ, ಸಂಯಮವಿದ್ದವರು ಮಾತ್ರ ಸಂಘಟನೆಯನ್ನು ಕಟ್ಟಿ ಯಶಸ್ವಿಯಾಗಿ ಮುನ್ನಡಿಸಿಕೊಂಡು ಹೋಗಲು ಸಾಧ್ಯ ಎಂದು ಹಿರಿಯ ಲೇಖಕಿ ರಂಜನಾ ನಾಯಕ ಇಂದಿಲ್ಲಿ ಹೇಳಿದರು.
ಬೆಳಗಾವಿಯ ತಿಲಕವಾಡಿಯಲ್ಲಿರುವ ಉದಯಭವನ ಸಭಾಭವನದಲ್ಲಿ ‘ಪ್ರಯತ್ನ’ ಸಂಘಟನೆಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ರಂಜನಾ ನಾಯಕ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು. ಮುಂದೆ ಮಾತನಾಡುತ್ತ ಅವರು ಸಂಘಟಕರಲ್ಲಿ ಇರಬೇಕಾದ ಶಾಂತಿ, ಸಂಯಮ, ಛಲ ಎಲ್ಲ ಅಂಶಗಳನ್ನು ಶ್ರೀಮತಿ ಶಾಂತಾ ಆಚಾರ್ಯ ಹೊಂದಿದ್ದಾರೆ. ಆದ್ದರಿಂದಲೇ ಪ್ರಯತ್ನ ಸಂಘಟನೆ ಯಶಸ್ವಿ ಹತ್ತನೇ ವರ್ಷ ಕಾಣಲು ಸಾಧ್ಯವಾಯಿತು. ‘ಪ್ರಯತ್ನ’ ಸಂಘಟನೆ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳಲಿ ಎಂದು ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ್ದ ಮಹಾನಗರ ಸಭೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಅವರು ಮಾತನಾಡುತ್ತ ಸಮಾಜದೊಂದಿಗೆ ಬದಕುವ ನಾವು ಮರಳಿ ಸಮಾಜಕ್ಕಾಗಿ ಏನನ್ನಾದರೂ ಕೊಡಬೇಕೆಂಬ ಕಳಕಳಿ ನಮ್ಮಲ್ಲಿ ಇರಬೇಕು. ಬಡವರಿಗೆ, ನಿರ್ಗತಿಕರಿಗೆ ನಾವು ನಮ್ಮ ಕೈಯ್ಯಿಂದಾಗುವ ಸಹಾಯವನ್ನು ಮಾಡಬೇಕು. ಪ್ರಯತ್ನ ಸಂಘಟನೆಯ ಕಾರ್ಯವೈಖರಿ ನನಗೆ ತುಂಬ ಖುಷಿಯನ್ನುಂಟು ಮಾಡಿದೆ. ಸಂಘಟನೆಗೆ ನನ್ನ ಕೈಲಾದ ಸಹಾಯ ಮಾಡುವೆ ಎಂದು ಹೇಳಿದರು.
ಪ್ರಯತ್ನ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಶಾಂತಾ ಆಚಾರ್ಯ, ನಿರ್ಗತಿಕರಿಗೆ, ಯಾರಿಗೆ ಸಹಾಯದ ಅವಶ್ಯಕತೆ ಇರುವಂತಹ ಜನರನ್ನ ಗುರುತಿಸಿ ಅವರಿಗೆ ನಮ್ಮ ಕೈಯಿಂದಾಗುವ ಸಹಾಯ ಮಾಡಬೇಕೆಂಬ ಮಾತನ್ನು ನನ್ನ ತಂದೆಯವರು ಹೇಳಿಕೊಟ್ಟಿದ್ದರು. ಅವರ ಮಾತನ್ನು ನನಸನ್ನಾಗಿಸಲು ನಮ್ಮ ಸ್ನೇಹಿತೆಯರನ್ನೆಯಲ್ಲ ಒಂದೆಡೆ ಸೇರಿಸಿಕೊಂಡು ‘ಪ್ರಯತ್ನ’ ಸಂಘಟನೆಯನ್ನು ಪ್ರಾರಂಭಿಸಿದೆ. ಆ ಸಂಘಟನೆ ಇಂದು ದಶಮಾನೋತ್ಸವ ಸಂಭ್ರಮ ಕಾಣುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಪ್ರಯತ್ನ ಸಂಘಟನೆಗೆ ಸಹಾಯ ಸಲ್ಲಿಸಿದ ಮಲ್ಲಿಕಾ ಆಚಾರ್ಯ, ರಮಾ ರಾಜ್, ವರದಾ ಭಟ್, ಅರಣಾ ಚೌದರಿ, ಮಂಗಲಾ ಧಾರವಾಡಕರ, ಬೀನಾ ರಾವ್, ಶುಭಾ ರಘುನಾಥ, ವೆಂಕಟೇಶ ಸರನೋಬತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ್ದ ಮಹಾಂತೇಶ ತಾವಂಶಿ ಮಾತನಾಡಿದರು. ಪ್ರತೀಕ್ಷಾ ಕಾರಜೋಳ ನಿರೂಪಿಸಿದರು, ಗೌರಿ ಸರನೋಬತ ವಂದಿಸಿದರು. ಪ್ರಿಯಾಂಕಾ ಕಾರಜೋಳ ಪ್ರಯತ್ನ ಸಂಘಟನೆಯನ್ನು ಪರಿಚಯಿಸಿದರು. ವಂದನಾ ಮೆಲೋಡಿಸ್ ತಂಡದವರಿಂದ ಸಾಂಸ್ಕೃತಿಕ ಕರ್ಯಕ್ರಮಗಳು ಜರುಗಿದವು.
Gadi Kannadiga > Local News > ‘ಪ್ರಯತ್ನ’ ಸಂಘದ ದಶಮಾನೋತ್ಸವ ಸಂಭ್ರಮಾಚರಣೆ ಸಂಘಟನೆಯ ಕರ್ಯ ತುಂಬ ಕಷ್ಟಕರವಾದುದು : ರಂಜನಾ ನಾಯಕ
‘ಪ್ರಯತ್ನ’ ಸಂಘದ ದಶಮಾನೋತ್ಸವ ಸಂಭ್ರಮಾಚರಣೆ ಸಂಘಟನೆಯ ಕರ್ಯ ತುಂಬ ಕಷ್ಟಕರವಾದುದು : ರಂಜನಾ ನಾಯಕ
Suresh18/04/2022
posted on

More important news
ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಸಮಾವೇಶ
04/02/2023
ಫೆ.೧೨ ರಂದು ಮಾಜಿ ಸೈನಿಕರ ರ್ಯಾಲಿ
04/02/2023
ಪ್ರೇಮಾದೇವಿ ತುಬಚಿ £ಧನ
04/02/2023
ರಾಧಾ ಕೃಷ್ಣ ನಾಟಕ ಉದ್ಘಾಟನೆ
04/02/2023
ಅಪರಿಚಿತ ವ್ಯಕ್ತಿ ಸಾವು
03/02/2023