ಶಿಥಿಲಾವಸ್ಥೆ ತಲುಪಿದ ತೇಗೂರು-ಗಂದಿಗವಾಡ ಸೇತುವೆ

Prasanna Kumbar
WhatsApp Group Join Now

ಗಡಿ ಕನ್ನಡಿಗ ಸುದ್ದಿ


ಖಾನಾಪುರ:ತಾಲೂಕಿನ ಗಂದಿಗವಾಡದಿಂದ ಕಿತ್ತೂರು ಸಂಪರ್ಕಿಸುವ ತಟ್ಟಹಳ್ಳ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಂದಿಗವಾಡ-ತಿಗಡೊಳ್ಳಿ ಮಾರ್ಗವಾಗಿ ಕಿತ್ತೂರನ್ನ ಸಂಪರ್ಕಿಸುವ ಈ ಸೇತುವೆ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಉಪಕಾರಿಯಾಗಿರುವ ಈ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಶಿಘ್ರವೇ ಸೇತುವೆಯನ್ನ ದುರಸ್ಥಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಲ್ಲದೇ ಈ ಸೇತುವೆ ನಿರ್ಮಾಣವಾಗಿ ಸುಮಾರು ದಶಕಗಳೇ ಕಳೆದಿದ್ದು ಸೇತುವೆ ಅತ್ಯಂತ ಈ ಭಾಗದ ಜನರಿಗೆ ಅತ್ಯಂತ ಅವಶ್ಯಕವಾಗಿದ್ದು ಈ ಸೇತುವೆಯನ್ನ ದುರಸ್ಥಿಗೊಳಿಸುವದರ ಜೊತೆಗೆ ಅಂತರ ಹೆಚ್ಚಿಸಿದರೆ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಕಿತ್ತೂರು ಗ್ರಾಮದಿಂದ 12 ಕಿಲೋಮೀಟರ್ ಅಂತರದಲ್ಲಿದೆ.
ದಿನನಿತ್ಯ ನೂರಾರು ಶಾಲಾ- ಕಾಲೇಜು ವಿದ್ಯಾರ್ಥಿಗಳು ಇದೇ ಅಏತುವೆ ಮೇಲೆ ಹಾದು ಹೋಗಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುತವ ಪರಿಸ್ಥಿತಿ ನಿರ್ಮಾಣವಾಗಿದೆ ಅಲ್ಲದೇ ಸೇತುವೆ ಶಿಥಿಲಾವಸ್ಥೆ ತಲುಪಿರುವದರಿಂದ ಅನಿವಾರ್ಯವಾಗಿ ಸಾರ್ವಜನಿಕರು ಇಟಗಿ ಕ್ರಾಸ್ ಮೂಲಕ ಕಿತ್ತೂರಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಆದ್ದರಿಂದ ಈ ಸೇತುವೆಯನ್ನ ದುರಸ್ಥಿಗೊಳಿಸಿದರೆ ಈ ಭಾಗದ ಸಾಕಷ್ಟು ವಿಧ್ಯಾರ್ಥಿಗಳು ಸಾರ್ವಜನಿಕರಿಗೆ ಅನುಕೂಲವಾಗಲಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕಡೆಗೆ ಗಮನ ಹರಿಸಿ ಈ ಸೇತುವೆಯನ್ನು ದೊಡ್ಡದಾಗಿ ನಿರ್ಮಿಸಬೇಕೆಂದು ರೈತ ಬಸವರಾಜ್ ಬಂಗಿ ಮತ್ತು ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ ಎಂ ರಾಜಿಬಾಯಿ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!