This is the title of the web page
This is the title of the web page

Please assign a menu to the primary menu location under menu

State

ಗ್ರಂಥಗಳು ಆನಂದದ ಅನುಭೂತಿಯನ್ನು ನೀಡುತ್ತವೆ : ಓಲೇಮಠದ ಶ್ರೀಗಳು


ಬೆಳಗಾವಿ: ಜೂನ್-26 : “ಗ್ರಂಥಗಳು ಮನುಷ್ಯನ ಬದುಕಿಗೆ ಆನಂದದ ಅನುಭೂತಿ ನೀಡುತ್ತವೆ. ಅದರಲ್ಲೂ ಆಧ್ಯಾತ್ಮದ ಕೃತಿಗಳು ಮಾನವನ ಮನದ ಕತ್ತಲೆಯನ್ನು ಓಡಿಸುವ ಜ್ಞಾನದ ದೀವಿಗೆಗಳಾಗಿವೆ” ಎಂದು ಜಮಖಂಡಿ ಓಲೇಮಠದ

ಡಾ. ಅಭಿನವ ಕುಮಾರ ಚೆನ್ನಬಸವ ಸ್ವಾಮಿಗಳು ಅಭಿಪ್ರಾಯ ಪಟ್ಟರು.
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ
ಹಾಗೂ ಗಂದಿಗವಾಡದ
ರಾಜಗುರು ಹಿರೇಮಠ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಜಿ.ಬಾಳೇಕುಂದ್ರಿ ಇಂಜನಿಯರಿಂಗ್ ಮಹಾವಿದ್ಯಾಲಯದಲ್ಲಿ
ಜರುಗಿದ ಮೃತ್ಯುಂಜಯಸ್ವಾಮಿ ಹಿರೇಮಠ ಅವರ ‘ನಮನಾಂಜಲಿ ಗ್ರಂಥ ಲೋಕಾರ್ಪಣೆ’ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
” ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳು ಮೆಚ್ಚಿಕೊಂಡ ‘ಅಷ್ಟೋತ್ತರ ಶತನಾಮ ಪಂಚಾಕ್ಷರಿ’ ನಾಮಗಳಿಗೆ ಲೇಖಕ ಮೃತ್ಯುಂಜಯ ಸ್ವಾಮಿಗಳು ಅನನ್ಯ ವ್ಯಾಖ್ಯಾನ ಬರೆದಿದ್ದಾರೆ. ಇಂಥ ಕೃತಿಗಳು ನಿಜವಾಗಿಯೂ ಮನುಷ್ಯನ ಮನಸ್ಸ-ಹೃದಯವನ್ನು ಅರಳಿಸತ್ತವೆ. ಜಾಗತೀಕರಣದ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ-ಪರಂಪರೆಗಳು ನಾಶವಾಗುತ್ತಿರುವ ಹೊತ್ತಿನಲ್ಲಿ ಇಂಥ ಕೃತಿಗಳು ನಮಗೆ ಭರವಸೆಯ ಬೆಳಕಾಗಿವೆ” ಎಂದು ನುಡಿದರು.
ಡಾ.ಎಫ್.ವಿ. ಮಾನ್ವಿ ಅವರು ಸಮಾರಂಭ ಉದ್ಘಾಟಿಸಿದರು.
ಖ್ಯಾತ ವೈದ್ಯ ಡಾ. ರವಿ ಪಾಟೀಲ ಗ್ರಂಥ ಲೋಕಾರ್ಪಣೆ ಮಾಡಿದರು.
ಸಾಹಿತಿ ಪ್ರಕಾಶ ಗಿರಿಮಲ್ಲನವರ ಕೃತಿ ಪರಿಚಯ ಮಾಡುತ್ತ,
“ಅಷ್ಟೋತ್ತರ ಶತನಾಮ ಪಂಚಾಕ್ಷರಿ ಮೂಲ ಪಠ್ಯವನ್ನು ಬರೆದ ಕುಮಾರ ನಿಜಗುಣರು. ಲೋಕಕ್ಕೆ ತಿಳಿಸಿದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳು. ಪಠ್ಯಕ್ಕೆ ಸೂಕ್ತ ವ್ಯಾಖ್ಯಾನ ನೀಡಿದವರು ವಾಗ್ದೇವಿಯವರು. ಅಂಥ ಕೃತಿ ಭಂಡಾರದ ಮುದ್ರೆಯನ್ನು ಒಡೆದು ತೋರಿದ ಮೃತ್ಯುಂಜಯ ಸ್ವಾಮಿಗಳು ಅಭಿನಂದನಾರ್ಹರು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಂಥ ದಾಸೋಹ ಮಾಡಿದ ಎಸ್.ಎಸ್. ಗಂಗಾಧರಮಠ ಮತ್ತು ಮಾಣೀಕ ಗಂಗಪ್ಪ ಕಮ್ಮಾರ ಅವರನ್ನು ಪೂಜ್ಯ ಶ್ರೀಗಳು ಸನ್ಮಾನಿಸಿದರು.
ಈರಣ್ಣ ದೇಯಣ್ಣವರ, ಡಾ.ಮಹೇಶ್ವರಯ್ಯಾ ಹೊತ್ತಿಗಿಮಠ, ಎಸ್.ಜಿ.ಸಿದ್ನಾಳ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಹಿರಿಯ ಸಾಹಿತಿ ಪ್ರಾ. ಬಿ. ಎಸ್. ಗವಿಮಠ ಅಧ್ಯಕ್ಷತೆ ವಹಿಸಿದ್ದರು.
ಬೈಲಹೊಂಗಲ ಮೂರುಸಾವಿರಮಠದ ಪ್ರಭುನೀಲಕಂಠ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಉಮೇಶ ಗಂಗಾಧರಮಠ ವಸ್ತ್ರದ ಸಹೋದರಿಯರಿಂದ ವಚನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಲೇಖಕ ಮೃತ್ಯುಂಜಯಸ್ವಾಮಿ ಹಿರೇಮಠ ಆಶಯ ನುಡಿಗಳನ್ನಾಡಿದರು.
ಶೀಲಾ ಜಗದೀಶ ಗಂಗಾಧರಮಠ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಸುನಿತಾ ನಂದೆನ್ನವರ ವಂದಿಸಿದರು.


Gadi Kannadiga

Leave a Reply