This is the title of the web page
This is the title of the web page

Please assign a menu to the primary menu location under menu

Local News

ಶರಣರ ವಚನಗಳಲ್ಲಿಯ ಮೌಲ್ಯಗಳು ಸಾರ್ವಕಾಲಿಕ ಸತ್ಯ: ಡಾ. ಪಿ. ಜಿ. ಕೆಂಪಣ್ಣವರ


ಬೆಳಗಾವಿ :. ನಾವು ಮಾನವರಾಗಿ ಬದುಕಬೇಕಾದರೆ, ವಚನಗಳಲ್ಲಿಯ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು. ಶರಣರ ವಚನಗಳಲ್ಲಿಯ ಮೌಲ್ಯಗಳು ಸರ್ವಕಾಲಿಕ ಸತ್ಯ ಎಂಬುದನ್ನು ಮನಗಾನಬೇಕು. ಬಸವಾದಿ ಶರಣರು ನಡೆ, ನುಡಿ, ಕಾಯಕ ತತ್ವ, ಬದುಕಿನ ಸಪ್ತ ಸೂತ್ರಗಳು, ಸಮಾನತೆ, ದಯೆ, ಧರ್ಮ, ದೇವರ ಪರಿಕಲ್ಪನೆ ಕುರಿತು ನೀಡಿದ ನೀತಿಗಳು ಜಾಗತಿಕವಾಗಿವೆ. ಇಂತಹ ನೀತಿಗಳನ್ನಿರಿತ ಆಂಗ್ಲರು ಥೇಮ್ಸ ನದಿಯ ದಡದಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿ ಸ್ಥಾಪಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ಪಿ. ಜಿ. ಕೆಂಪಣ್ಣವರ ಇಂದಿಲ್ಲಿ ಹೇಳಿದರು.
ಮಾಹಾಂತೇಶ ನಗರದ ಮಾಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ರಿö್ಟÃಯ ಬಸವಸೇನೆ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೨೮ ರಂದು ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿದ ಮಾಸಿಕ ಅನುಭಾವ ಸತ್ಸಂಗದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಪಿ. ಜಿ. ಕೆಂಪಣ್ಣವರ ಶರಣರ ವಚನಗಳಲ್ಲಿ ಜೀವನ ಮೌಲ್ಯಗಳು ಹಾಗೂ ಕಾಯಕ ಪ್ರಜ್ಞೆ ವಿಷಯ ಕುರಿತಂತೆ ಉಪನ್ಯಾಸ ನೀಡುತ್ತ ಮೇಲಿನಂತೆ ಹೇಳಿದರು.
ಮುಂದೆ ಮಾತನಾಡುತ್ತ ಡಾ. ಕೆಂಪಣ್ಣವರ ಅವರು ಶರಣರು ದಾಂಪತ್ಯ ಜೀವನಕ್ಕೆ ಮಹತ್ವ ನೀಡಿ, ಇಂದ್ರೀಯ ಆಸೆಗಳನ್ನು ಈಡೇರಿಸಿಕೊಂಡು ಸಮ ಸಮಾಜವನ್ನು ನಿರ್ಮಿಸಿದರು. ಸಾವಿಗೆ ಹೆದರದೆ ಬದುಕನ್ನು ಕಟ್ಟಿಕೊಂಡವರು. ಕಾಯಕ ತತ್ವದಡಿ ದುಡಿದು ಮಿಕ್ಕಿದುದನು ದಾಸೋಹ ಮಾಡಿ ಬಾಳಿ ಬದುಕಿದ ಶರಣರ ಜೀವನ ಆದರ್ಶಪ್ರಾಯ. ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಬಿಡಿ. ಅವರನ್ನು ವಿಶ್ವಮಾನವರನ್ನಾಗಿ ಬೆಳೆಸಿರಿ. ಸಕಲ ಜೀವಾತ್ಮರಿಗೂ ಕೃಷಿ ಕೃತ್ಯ ಕಾಯಕ ಜೀವಿ ಕೃಷಿಕರ ಮಹತ್ವ ಸಾರಿದ ಶರಣರು. ವಿಭೂತಿ ಧರಿಸುವದು ವೈಜ್ಞಾನಿಕ ಸತ್ಯ ಎಂದು ಹೇಳಿದರು.
ಪ್ರೊ. ಕೆ. ಎಸ್. ಕೌಜಲಗಿಯವರು ಮಾತನಾಡುತ್ತಾ ಬಸವಣ್ಣನವರು ಇಂದಿನ ಯುವ ಪೀಳಿಗೆಗೆ ಶರಣ ಧರ್ಮದ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಡಬೇಕಾದ ಅವಶ್ಯಕತೆಯಿದೆ. ಲಿಂಗಾಯತರು ತಮ್ಮ ಅಸ್ಮಿತೆಗಾಗಿ ಸಂಘಟನಾತ್ಮಕ ಹೋರಾಟ ಮಾಡಲು ಮುಂದಾಗಬೇಕೆಂದು ಕರೆ ಕೊಟ್ಟರು.
ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ನ್ಯಾಯವಾದಿಗಳೂ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಅದ್ಯಕ್ಷರಾದ ಬಸವರಾಜ ರೊಟ್ಟಿಯವರು ಶರಣ ತತ್ವ ಸಿದ್ದಾಂತಗಳನ್ನು ತಿರುಚಿ ಸಮಾಜಕ್ಕೆ ತಪ್ಪು ಸಂದೇಶಗಳ ಕುರಿತು ಹೇಳಿಕೆ ಕೊಡುತ್ತಿರುವ ರಾಜಕಾರಣಿಗಳು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲವಾದಲ್ಲಿ ಸಂಘಟನಾತ್ಮಕ ಹೋರಾಟ ಅನಿವಾರ್ಯ ಎಂದು ಹೇಳಿದರು.
ಇಂದಿನ ಪ್ರಸಾದ ದಾಸೋಹಿಗಳಾದ ಶರಣ ಪ್ರಕಾಶ ಮತ್ತು ಸುರೇಖಾ ಪಾಟೀಲ ದಂಪತಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಭಾರತೀಯ ಆಡಳಿತ ಸೇವೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟö್ರಮಟ್ಟದಲ್ಲಿ ೨೫೦ ನೆಯ ಸ್ಥಾನ ಪಡೆದು ಆಯ್ಕೆಯಾದ ಬೈಲಹೊಂಗಲದ ಸಾಹಿತ್ಯ ಆಲದಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೇವಾ ಕೈಂಕರ್ಯ ಮಾಡಿದ ಮುವತ್ತಕ್ಕೂ ಹೆಚ್ಚು ಸಮಾಜ ಬಾಂಧವರನನ್ನು ಸತ್ಕರಿಸಲಾಯಿತು.
ಪ್ರಸಿದ್ಧ ವೈದ್ಯರಾದ ಡಾ. ರವಿ ಪಾಟೀಲ, ರಾಷ್ಟಿö್ರÃಯ ಬಸವ ಸೇನೆಯ ಶರಣ ಶಂಕರ ಗುಡಸ್, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಅದ್ಯಕ್ಷೆ ಶ್ರೀಮತಿ ಪ್ರೇಮಾ ಅಂಗಡಿ ವೇದಿಕೆಯ ಮೇಲೆ ಆಸೀನರಾಗಿದ್ದರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಮಳಗಲಿ ಸ್ವಾಗತಿಸಿದರು. ಡಾ. ಅಡಿವೆಪ್ಪ ಇಟಗಿ ವಂದಿಸಿದರು. ಚಂದ್ರಪ್ಪ ಬೂದಿಹಾಳ ನಿರೂಪಿಸಿದರು. ವಿವಿಧ ಬಡಾವಣೆಗಳ ಬಸವಾಭಿಮಾನಿಗಳು ಉಪಸ್ಥಿರಿದ್ದರು.


Gadi Kannadiga

Leave a Reply