This is the title of the web page
This is the title of the web page

Please assign a menu to the primary menu location under menu

State

ಸೈನಿಕರಿಗೆ ದೊಡ್ಡ ಗೌರವ ನೀಡಿದ ಕೃತಿಗಳು-ಬ್ರಿಗೇಡಿಯರ ದಯಾಲನ್


ಬೆಳಗಾವಿ ; ದೇಶದ ಗಡಿ ಭಾಗಗಳಲ್ಲಿ ದೇಶವನ್ನು ರಕ್ಷಿಸುತ್ತಿರುವ ಸೈನಿಕರಿಗೆ ಶ್ರೀಮತಿ ನೀಲಗಂಗಾ ಚರಂತಿಮಠ ಅವರ ಕೃತಿಗಳಲ್ಲಿ ದೊಡ್ಡ ಗೌರವವನ್ನು ನೀಡಲಾಗಿದೆ ಎಂದು ಬೆಳಗಾವಿ ಕಮಾಂಡಮೆಂಟ್ ಪಿ ಸಿ ವಿಂಗ್ ನ ಬ್ರಿಗೇಡಿಯರ್ ಶ್ರೀ ದಯಾಲನ್ ಹೇಳಿದರು.
ಅವರು ಬೆಳಗಾವಿಯಲ್ಲಿ ಹಿರಿಯ ಸಾಹಿತಿ ಶ್ರೀಮತಿ ನೀಲಗಂಗಾ ಚರಂತಿಮಠ ಅವರ “ಧಾರಿಣಿ”. “ಜನನಿ ಜನ್ಮಭೂಮಿ”. “ಒಂದೇ ಮಾತರಂ” ಮತ್ತು “ಪ್ರಣಾಮ್” ಎಂಬ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ಸಾಹಿತ್ಯ ಮತ್ತು ಕಾವ್ಯ ಇವುಗಳಿಂದ ಸೈನಿಕರು ಬಹು ದೂರ ಎಂದ ಅವರು ಸ್ವಾತಂತ್ರ್ಯ ಹೋರಾಟ ದೇಶ ಸೇವೆ ರಾಷ್ಟ್ರ ಸೇವೆ ಮತ್ತು ಸೈನಿಕರ ಕುರಿತಾದ ವಿಷಯಗಳಿಂದಾಗಿ ಈ ಕೃತಿಗಳು ಸೈನಿಕರ ನೈತಿಕತೆಯನ್ನು ಹೆಚ್ಚಿಸಿವೆ, ದೇಶದ ಬಹುತೇಕ ಎಲ್ಲ ಗಡಿಭಾಗಗಳಲ್ಲಿ ತಾವು ಸಲ್ಲಿಸಿದ ಸೇವೆ ಭಯೋತ್ಪಾದನೆ ವಿರುದ್ಧದ ಹೋರಾಟ ಸೇವಾ ಸಂದರ್ಭದಲ್ಲಿನ ಅನುಭವವನ್ನು ಅವರು ನೆನಪು ಮಾಡಿಕೊಂಡರು, ತಮ್ಮ ಕುಟುಂಬಗಳಿಂದ ದೂರ ಇರುವ ಸೈನಿಕರು ಅನುಭವಿಸುವ ಎಲ್ಲ ಕಷ್ಟಗಳು ತೊಳಲಾಟಗಳು ಕೌಟುಂಬಿಕ ಸಮಸ್ಯೆಗಳು ಎಲ್ಲವನ್ನು ಮೀರಿ ದೇಶ ಸೇವೆ ಸಲ್ಲಿಸುವ ಸೈನಿಕರ ಕಾರ್ಯ ಅಪ್ರತಿಮ ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ಎಂ ಗಂಗಾಧರಯ್ಯ ಅವರು ಕೃತಿಗಳ ಪರಿಚಯ ಮಾಡುತ್ತ ಕಥನ ನಿರೂಪಣೆ ಅತ್ಯಂತ ಸೂಕ್ತವಾಗಿದೆ ಅತ್ಯಂತ ಸರಳ ನಿರೂಪಣೆ ಸರಳವಾದ ಕಾವ್ಯ ರಚನೆ ಅಧುನಿಕ ಛಂದಸ್ಸು ಮುಕ್ತ ಕನ್ನಡ ರಾಷ್ಟ್ರಪ್ರೇಮ ರಾಷ್ಟ್ರಭಕ್ತಿ ಉಕ್ಕಿಸುವಂಥ ಶಾಲಾ ಪಠ್ಯಕ್ಕೆ ಅತ್ಯಂತ ಯೋಗ್ಯವಾದ ಕವನಗಳನ್ನು ಹೊಂದಿರುವ ಕೃತಿ ಇವಾಗಿವೆ ಎಂದರು.
ಸಮಾಜ ಹಲವು ವಿಭಾಗಗಳಾಗಿ ವಿಂಗಡಣೆಗೊಂಡು ಪ್ರತ್ಯೇಕತಾವಾದವನ್ನು ಪ್ರತಿಧ್ವನಿಸುವ ಈ ಸಂದರ್ಭದಲ್ಲಿ, ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಕೃತಿಗಳ ಬಿಡುಗಡೆ ಅತ್ಯಂತ ಔಚಿತ್ಯಪೂರ್ಣವಾಗಿದೆ , ಎಲ್ಲ ಪ್ರಕಾರದ ಸಾಹಿತ್ಯವನ್ನು ಹೊಂದಿರುವ ಈ ಕೃತಿಗಳು ಸೀಮಿತ ಪ್ರದೇಶಕ್ಕೆ ಅಷ್ಟೇ ಅಲ್ಲ ಜಗದಗಲ ವಾಗುವಂತಹ ಕೃತಿಗಳಾಗಿವೆ ಪಠ್ಯಪುಸ್ತಕಕ್ಕೆ ಬಳಸಿಕೊಳ್ಳಬಹುದಾದ ಅತ್ಯಂತ ಯೋಗ್ಯ ಕೃತಿಗಳು ಇವು ಎಂದು ಅವರು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಚಿಂತಕ ಬಿ ಎಸ್ ಗವಿಮಠ ಅವರು ರಾಷ್ಟ್ರ ಭಕ್ತಿ ರಾಷ್ಟ್ರ ಪ್ರೇಮವನ್ನು ಅನಾವರಣಗೊಳಿಸುವ, ಯೋಧರಿಗೆ ಗೌರವಾರ್ಪಣೆ ಮಾಡುವ ಕೃತಿಗಳು ಇವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊಫೆಸರ್ ಎಂಎಸ್ ಇಂಚಲ ಅವರು ರಾಷ್ಟ್ರ ಪ್ರೇಮದ ಕವನ ಒಂದನ್ನು ವಾಚಿಸಿ ಸಭಿಕರ ಮನಸೂರೆಗೈದರು.
ಕಾರ್ಯಕ್ರಮದಲ್ಲಿ ಲೇಖಕಿ ಶ್ರೀಮತಿ ನೀಲಗಂಗಾ ಚರಂತಿಮಠ, ಬ್ರಿಗೇಡಿ
ಯರ್ ದಯಾಲನ್ ಮತ್ತು ಶ್ರೀಮತಿ ದಯಾಲನ್, ಡಾ ಎಸ್ ಎಮ್ ಗಂಗಾಧರಯ್ಯ, ಶ್ರೀ ಬಿ.ಎಸ್ ಗವಿಮಠ, ಶ್ರೀ ಎಂ .ಎಸ್ ಇಂಚಲ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷ ಶ್ರೀಮತಿ ಜಯಶೀಲಾ ಬ್ಯಾಕೋಡ್, ಶ್ರೀಮತಿ ಸುನಂದಾ ಎಮ್ಮಿ ಇವರನ್ನು ಸತ್ಕರಿಸಲಾಯಿತು. ಶ್ರೀಮತಿ ದೀಪಿಕಾ ಚಾಟೆ ಸ್ವಾಗತಿಸಿದರು, ಶ್ರೀಮತಿ ಭಾರತಿ ಮಠದ ಮತ್ತು ಶ್ರೀಮತಿ ರಾಜನಂದ ಗಾರ್ಗಿ ಅವರು ಅತಿಥಿಗಳ ಪರಿಚಯ ಮಾಡಿದರು, ಶ್ರೀಮತಿ ನೈನಾ ಗಿರಿಗೌಡರ ಪ್ರಾರಂಭದಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆ ಪ್ರಸ್ತುತಪಡಿಸಿದರು, ಕೊನೆಯಲ್ಲಿ ಶ್ರೀಮತಿ ಪ್ರತಿಭಾ ಕಳ್ಳಿಮಠ ಅವರು ವಂದೇ ಮಾತರಂ ಪ್ರಸ್ತುತಪಡಿಸಿದರು, ಅಮೃತ್ ಚರಂತಿಮಠ ಗ್ರಂಥ ಪುಷ್ಪ ಸಮರ್ಪಿಸಿದರು, ಶ್ರೀಮತಿ ಸುಮಾ ಕಿತ್ತೂರು ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಸುನಿತಾ ಕೊಲ್ಲಾಪುರೆ ವಂದಿಸಿದರು.


Leave a Reply