ಗಡಿ ಕನ್ನಡಿಗ
ಖಾನಾಪುರ:ಕರ್ನಾಟಕ ಸರಕಾರ ರಾಜ್ಯದ ಆಡಳಿತ ಭಾಷೆ ಕನ್ನಡ ಆದ್ದರಿಂದ ಎಲ್ಲ ಸರಕಾರಿ ಕಛೇರಿ ಹಾಗೂ ಬ್ಯಾನರಗಳಲ್ಲಿ ಕನ್ನಡ ಭಾಷೆಯನ್ನ ಕಡ್ಡಾಯ ಮಾಡಿರುವದು ಖುಷಿಯ ವಿಚಾರ ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ವಿಶ್ವ ಭಾರತಿ ಕ್ರೀಡಾ ಸಂಘದ ಸದಸ್ಯರು ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದು ಕಾರಣ ಅಂತಹ ಸಂಘದ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಯುವ ರಕ್ಷಣಾ ವೇದಿಕೆ ವತಿಯಿಂದ ಖಾನಾಪುರ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಯುವ ರಕ್ಷಣಾ ವೇದಿಕೆ ತಾಲೂಕಾ ಅದ್ಯಕ್ಷ ಪಾಂಡುರಂಗ ಗೂಳನ್ನವರ ವಿಶ್ವ ಭಾರತಿ ಕ್ರೀಡಾ ಸಂಘದವರು ಜನರ ನಡುವೆ ವಿಷ ಬೀಜ ಬಿತ್ತುತ್ತಿದ್ದು ಸರ್ಕಾರದ ಆದೇಶವನ್ನೇ ಅವಹೇಳನ ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಅಲ್ಲದೇ ಸರಕಾರದ ಆದೇಶವನ್ನ ಹಿಂಪಡೆಯಬೇಕೆಂದು ತಾಲೂಕಾ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಸರಕಾರವನ್ನ ವತ್ತಾಯಿಸುವಂತೆ ಮನವಿ ಸಲ್ಲಿಸಿದ್ದು ಕನ್ನಡಿಗರಿಗೆ ಮುಜುಗುರ ತರುತ್ತಿದೆ.
ಇಂತಹ ಸಂಘಟನೆಗಳು ಪದೇ ಪದೇ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತ ಕನ್ನಡಿಗರನ್ನ ಕೆಣಕುತ್ತಿಲೇ ಬಂದಿವೆ ಆದ್ದರಿಂದ ಇಂತಹ ಸಂಘಟನೆಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಸರಕಾರಕ್ಕೆ ತಹಶೀಲ್ದಾರ ಮೂಲಕ ವತ್ತಾಯಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆ ಉಪಾದ್ಯಕ್ಷ ಅಫಜನ ಐರಾನಿ,ಗ್ರಾಮ ಘಟಕದ ಅದ್ಯಕ್ಷ ಸಲೇಮಾನ ಕೋಟೂರು,ಸಂಘಟನಾ ಕಾರ್ಯದರ್ಶಿ ಆಶೀಪ ಬಾಬಣ್ಣವರ,ಬಾಪುಸಾಬ ಮುಲ್ಲಾ,ಆನಂದ ನಾಗನೂರ,ದಿಲಾವರ ಗೋರಿ,ಮಕ್ತುಮಸಾಬ,ಜಗದೀಶ ಒಡೆಯರ,ಬಾಲಾಜಿ ಚೌಗಲೆ,ಉಮರಪಾರೂಕ ಮುಲ್ಲಾ ಇನ್ನಿತರರು ಉಪಸ್ಥಿತರಿದ್ದರು ಉಪತಹಶೀಲ್ದಾರ ಭುವಾ ಮನವಿ ಸ್ವೀಕರಿಸಿದರು.