This is the title of the web page
This is the title of the web page

Please assign a menu to the primary menu location under menu

State

ಕನ್ನಡ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವ ಲೇಖಕರು ನಾಡಿನ ಆಸ್ತಿ, – ಮಂಗಲಾ ಮೆಟಗುಡ್


ಬೆಳಗಾವಿ ; ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ವಿಶ್ವಕ್ಕೆ ಪರಿಚಯಿಸುವ ಕನ್ನಡ ಲೇಖಕರು ಮತ್ತು ಉಪನ್ಯಾಸಕರು ಈ ನಾಡಿನ ಆಸ್ತಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿ ಕೊಡಬೇಕಾಗಿದೆ ಎಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಮತಿ ಮಂಗಲಾ ಮೆಟಗುಡ್ ಹೇಳಿದರು.

ಅವರು ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಮತ್ತು ಕನ್ನಡ ಮೌಲ್ಯಮಾಪನ ಕೇಂದ್ರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಜಗದೀಶ್ ಸವದತ್ತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರೊ; ರಮೇಶ್ ಮುರಂಕರ್ ಅವರ ” ಎಂಥ ಕಾಲ ಬಂತೊ ಯಪ್ಪಾ ” ಮತ್ತು “ಚದುರಿದ ಚುಕ್ಕೆ ” ಹಾಗೂ ಪ್ರೊ ; ಸಿದ್ದು ಸಾವಳಸಂಗ ಅವರ “ಹೃದಯ ಹೂವಿನ ಹಂದರ” ಮತ್ತು “ವಚನ ಸಂಜೀವಿನಿ ” ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಾಚಾರ್ಯರು ಮತ್ತು ಉಪನ್ಯಾಸಕರು ರಚಿಸಿದ ಹತ್ತನೇ ವರ್ಗದ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶಿಯಾಗುವ ಕೃತಿ “ಉತ್ತೀರ್ಣ” ಕನ್ನಡ ಕೈಪಿಡಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೃತಿಗಳನ್ನು ಬಿಡುಗಡೆಗೊಳಿಸಿದ ಮುರುಗೇಶ ಶಿವಪೂಜಿ ಅವರು ಮಾತನಾಡಿ ಪುಸ್ತಕಗಳನ್ನು ಓದುವ ವಾತಾವರಣ ಮತ್ತೆ ಬರಬೇಕಾಗಿದೆ ಪತ್ರಿಕೆ ಮತ್ತು ಲೇಖಕರ ಸಂಬಂಧ ನನ್ನು ಮತ್ತಷ್ಟು ಗಟ್ಟಿಗೊಳಿಸಿದರೆ ಕನ್ನಡ ಸಾಹಿತ್ಯ ವಿಶ್ವದಲ್ಲಿಯೇ ಮಾದರಿಯಾಗಬಹುದು ಎಂದರು.
ಬೆಳಗಾವಿ ಕನ್ನಡ ಮೌಲ್ಯಮಾಪನ ಕೇಂದ್ರದ ಮುಖ್ಯ ಪರಿಕ್ಷಕರಾದ ಶ್ರೀ ಡಿ.ಡಿ.ಹಾದಿಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪುಸ್ತಕ ಪರಿಚಯವನ್ನು ಚಿಕ್ಕೋಡಿಯ ಪ್ರೊ; ಸುಬ್ಬರಾವ್ ಎಂಟೆತ್ತಿನವರ , ವಿಜಾಪುರದ ಶ್ರೀ ಯು ಎನ್ ಕುಂಟೋಜಿ ಅವರುಗಳು ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ, ಸವದತ್ತಿ ಕಸಾಪ ತಾಲೂಕ ಅಧ್ಯಕ್ಷರಾದ ವೈ ಎಂ ಯಾಕೊಳ್ಳಿ, ಬೆಳಗಾವಿ ತಾಲೂಕ ಕಸಾಪ ಅಧ್ಯಕ್ಷರಾದ ಸುರೇಶ್ ಹಂಜಿ, ಹುಕ್ಕೇರಿ ತಾಲೂಕ
ಕಸಾಪ ಅಧ್ಯಕ್ಷರಾದ ಪ್ರಕಾಶ್ ಬ ಅವಲಕ್ಕಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಿ.ಎಂ. ಹಂಚಿನಮನಿ, ಶ್ರೀಮತಿ ಪ್ರಿಯಾ ಹುಲಗಬಾಳಿ ಡಾ. ರತ್ನಾ ಬಾಳಪ್ಪನವರ್ ಡಾ. ಪ್ರೇಮ ಯಾಕೋಳ್ಳಿ, ಶ್ರೀಮತಿ ಕಮಲಾ ಉಪಸ್ಥಿತರಿದ್ದರು. ವೈ ಎಂ ಯಾಕೊಳ್ಳಿ ಸ್ವಾಗತಿಸಿದರು ಪ್ರ; ವಿ.ಬಿ. ಚೌಗಲಾ ಕಾರ್ಯಕ್ರಮ ನಿರೂಪಿಸಿದರು, ಬೆಳಗಾವಿ ವಿಭಾಗದ ನಾಲ್ಕು ಜಿಲ್ಲೆಗಳ ಕನ್ನಡ ಉಪನ್ಯಾಸಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Leave a Reply