ಬೆಳಗಾವಿ : ಗೋಕಾಕ ಗ್ರಾಮೀಣ ಪೊಲೀಸ್ ಸರಹದ್ದಿನ ಮಹಾಂತೇಶ್ ಬಡಾವಣೆಯಲ್ಲಿ, ದಿನಾಂಕ 17/07/2021 ರಂದು ಮಂಜು ಶಂಕರ್ ಮುರಕಿಬಾವಿ ಎಂಬ ಯುವಕ ಕೊಲೆಯಾಗಿದ್ದನು.
ಕೊಲೆ ಆರೋಪದ ಅಡಿಯಲ್ಲಿ 3 ಜನರನ್ನು ಗೋಕಾಕ್ ಗ್ರಾಮೀಣ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಆಪಾಧನಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ 3ನೆಯ ಆರೋಪಿಯಾದ ಸಿದ್ದಪ್ಪ ಬಬಲಿ ಜಾಮೀನಿನ ಮೇಲೆ ಹೊರಬಂದು, ಮೊನ್ನೆ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪತ್ರಿಕಾಗೋಷ್ಠಿ ನಡೆಸಿ, ಪೊಲೀಸರ ಮೇಲೆ, ಹಾಗೂ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪವನ್ನು ಮಾಡಿದ್ದಾರೆ.
ಆದರೆ ನಮ್ಮ ಮನೆ ಮಗನನ್ನು ಅವರೇ ಕೊಲೆ ಮಾಡಿದ್ದಾರೆ, ನಮಗೆ ಹಣದ ಆಮಿಷ, ಜೀವದ ಭಯ ಹಾಕಿ, ಕೇಸ್ ವಾಪಸ್ ಪಡೆಯಲು ವತ್ತಾಯ ಮಾಡುತ್ತಿದ್ದಾರೆ, ಮೊನ್ನೆ ಅವರು ಸುದ್ದಿಗಾರರಿಗೆ ಹೇಳಿದ ವಿಷಯವೆಲ್ಲ ಸುಳ್ಳು, ಅವರು ಎಲ್ಲಾ ಅಪರಾಧ, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಾರೆ,
ಪ್ರಕರಣ ಹಿಂದೆ ಪಡೆಯದೆ ಹೋದರೆ, ನನ್ನ ಹಿಂದೆ ಮಂಜುಳಾ ಶಿಂದೆ ಎಂಬ ಹೈಕೋರ್ಟ್ ವಕೀಲರು ಇದ್ದಾರೆ,ಅವರಿಗೆ ಎಲ್ಲಾ ಮೇಲಾಧಿಕಾರಿಗಳು ಗೋತ್ತಿದ್ದಾರೆ, ನಿಮ್ಮನ್ನ ಸುಮ್ಮನೆ ಬಿಡೋಲ್ಲ ಅಂತಾ ಜೀವದ ಧಮಕಿ ಹಾಕುತ್ತಿದ್ದಾರೆ,,
ಕೊಲೆಯಾದ ಮಂಜು, ಸಿದ್ದಪ್ಪ ಬಬಲೀ ಅವರ ಮಗಳಾದ ಸುಶ್ಮಿತಾನನ್ನು ಪ್ರೀತಿಸುತ್ತಿದ್ದ ಅದಕ್ಕಾಗಿಯೇ ಈ ಕೊಲೆ ನಡೆದಿದೆ.. ದಯವಿಟ್ಟು ಅವರ ಮಾತಿಗೆ ಬೆಲೆ ನೀಡದೇ ಆ ಕೊಲೆಗಡುಕರಿಗೆ ಸರಿಯಾಗಿ ಶಿಕ್ಷೆ ಆಗಬೇಕು ಎಂದು ಮೃತ ಮಂಜುನಾಥ ಕುಟುಂಬದ ವಿನಂತಿಯಾಗಿತ್ತು..