ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ನಿವಾಸಿಯಾದ ಯಮನವ್ವಾ ಮಹಾದೇವ ದೊಡಮನಿ ಇವರ ಮಗಳಾದ ಶ್ವೇತಾ ಮಹಾದೇವ ದೊಡಮನಿ ಜನವರಿ 09 ರಂದು ರಾತ್ರಿ 09 ಗಂಟೆಗೆ ಮನೆಯಲ್ಲಿ ಇರುವುದಿಲ್ಲ. ಫಿರ್ಯಾದೆದಾರರು ಸಂಬAಧಿಗಳನ್ನು ವಿಚಾರಿಸಿದರು ಯಾವುದೇ ಸುಳಿವು ಇಲ್ಲದ ಕಾರಣ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ಕುಲಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಯಸ್ಸು 22, ಎತ್ತರ 5 ಪೂಟ್, ಸದೃಡ ಮೈ ಕಟ್ಟು, ಸಾದಾಗಪ್ಪು ಮೈ ಬಣ್ಣ, ಕಪ್ಪು ಕೂದಲು, ಬಿಳಿ ಕಲರ್ ಟೀ ಶರ್ಟ ಹಾಗೂ ಕಪ್ಪು ದೋತಿ ಧರಿಸಿದ್ದು, ಕನ್ನಡ ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾಳೆ.
ಸದರಿಯವರ ಬಗ್ಗೆ ಸುಳಿವು ಸಿಕ್ಕಲ್ಲಿ ಕುಲಗೋಡ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08334-222233 ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.