This is the title of the web page
This is the title of the web page

Please assign a menu to the primary menu location under menu

Local News

ಜ್ಞಾನ ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತು ಇನ್ನೊಂದಿಲ್ಲ-ಡಾ. ತೋಂಟದ ಸಿದ್ದರಾಮ ಶ್ರೀಗಳು


ಬೆಳಗಾವಿ: ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ ಖರ್ಚು ಮಾಡಿದಷ್ಟು ಹೆಚ್ಚಾಗುವ ಸಂಪತ್ ಎಂದರೆ ಅದೊಂದ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಶ್ರೀಗಳು ನುಡಿದರು.
ಅವರಿಂದು ಗೋಕಾಕ್ ತಾಲೂಕಿನ ಸುಲುದಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಹಾಗೂ ಗುರುವಂದನೆ ಕಾರ್ಯಕ್ರಮದ ಸಾ£ಧ್ಯ ವಹಿಸಿ ಆಶೀರ್ವಚನ £Ãಡುತ್ತಿದ್ದರು. ಕೇವಲ ಸಾಕ್ಷರರಾಗುವುದರಿಂದ ಪ್ರಯೋಜನವಿಲ್ಲ ಇಂದು ಸಂಸ್ಕಾರಯುತ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದೆ, ಸಂಸ್ಕಾರವಿಲ್ಲದ ನೈತಿಕ ಮೌಲ್ಯಗಳಿಲ್ಲದ ಜನ ಇಂದು ರಾಕ್ಷಸರಾಗುತ್ತಿದ್ದಾರೆ ಅದು ತಡೆಯಬೇಕೆಂದರೆ ಮಕ್ಕಳಿಗೆ ಸಂಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುವಂತಹ ಶಿಕ್ಷಣ ಬೇಕು. ಪ್ರತಿ ಮಗು ಶಿಕ್ಷಣ ಪಡೆದಾಗ ಮಾತ್ರ £ಜವಾದ ಅಭಿವೃದ್ಧಿ ಸಾಧ್ಯ ಸರ್ವರಿಗೂ ಶಿಕ್ಷಣ ಮಾತ್ರ ಸರ್ವಾಗಿಣ ಅಭಿವೃದ್ಧಿ ಸಾಧ್ಯವಾಗುತ್ತದೆ ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕು ನೈತಿಕ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಸಂಸ್ಕಾರದಿಂದ ಕೂಡಿದ ಶಿಕ್ಷಣ ಕೊಡಬೇಕಾಗಿದೆ ಇಲ್ಲದೆ ಹೋದಲ್ಲಿ ಸಮಾಜ ಕಟ್ಟಕರು ಹೆಚ್ಚಾಗುತ್ತಾರೆ ಸಂಸ್ಕಾರಯುಕ್ತ ಶಿಕ್ಷಣ ಹೊಂದಿದ ಮಕ್ಕಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ವಿದ್ಯೆ ಎನ್ನುವ ಸಂಪತ್ತಿಗಿಂತ ಹೆಚ್ಚಿನ ಸಂಪತ್ತು ಇಲ್ಲ ಯಾರು ಕದಿಯಲಾಗದ ವಿದ್ಯಾಧನ ಎಂದರೆ ಅದೇ ಶಿಕ್ಷಣ ಖರ್ಚು ಮಾಡಿದಷ್ಟು ಹೆಚ್ಚಾಗುವ ವಿದ್ಯಾ ಸಂಪತ್ತು ಇಂದಿನ ಅಗತ್ಯವಾಗಿದೆ ಎಂದು ಶ್ರೀಗಳು ನುಡಿದರು.
ಅತಿ ಹೆಚ್ಚು ಸ್ವಾತಂತ್ರ÷್ಯ ಹೋರಾಟಗಾರರನ್ನು ಹೊಂದಿದ ಕುಂದರ ನಾಡಿನಲ್ಲಿ ಇಂದಿಗೂ ಮೌಲ್ಯಗಳು ಉಳಿದಿವೆ ಗಾಂಧೀ ಮೆಟ್ಟಿದ ನಾಡು ಸಾವರ್ಕರಂತವರು ಇಲ್ಲಿಗೆ ಬಂದು ಹೋಗಿದ್ದಾರೆ ದೇಶಪಾಂಡೆ ಮನೆತನದವರ ಸ್ಥಳ ದಾನ ದಿಂದಾಗಿ ೧೦೫ ವರ್ಷಗಳ ಹಿಂದೆ ಪ್ರಾರಂಭವಾದ ಜೀವಂತ ದೇವರಿರುವ ದೇಗುಲ ಯಾವುದೆಂದರೆ ಅದು ಶಾಲೆ, ಸುಲಧಾಳ ಶಾಲೆಯಲ್ಲಿ ಬಹಳ ದೊಡ್ಡವರು ಕಲಿತು ನಾಡಿನ ಸೇವೆಯಲ್ಲಿ £ರತರಾಗಿದ್ದು ಬಹಳ ಸಂತೋಷದ ವಿಷಯ , ಸಾಮಾನ್ಯರ ಸಹಾಯ ಸರ್ಕಾರದಿಂದ ಹಿಂದಿಲ್ಲ ಸಾರ್ವಜ£ಕ ಶಾಲೆಗಳು ಆಗುತ್ತಿದ್ದವು ದಕ್ಷಿಣ ಭಾಗದಲ್ಲಿ ಮೈಸೂರು ಮಹಾರಾಜರು ಶಾಲೆ ಕಾಲೇಜುಗಳನ್ನು ಆರಂಭಿಸಿ ವಿದ್ಯಾಭ್ಯಾಸಕ್ಕೆ ಮಹತ್ವವನ್ನು £Ãಡಿದರು ಉತ್ತರ ಕರ್ನಾಟಕದಲ್ಲಿ ಮಠಮಾನ್ಯಗಳು ಶಾಲೆಗಳೊಂದಿಗೆ ಅನ್ನ ಆಶ್ರಯಕ್ಕಾಗಿ ಪ್ರಸಾದ £ಲಯಗಳನ್ನು ಪ್ರಾರಂಭಿಸಿದ್ದನ್ನು ಅವರು ನೆನಪಿಸಿಕೊಟ್ಟರು ಅತ್ಯಂತ ಹಿಂದುಳಿದಿದ್ದ ಉತ್ತರ ಕರ್ನಾಟಕ ಶಿಕ್ಷಣ ಸಂಸ್ಥೆಗಳು ಮತ್ತು ಪ್ರಸಾದ£ಲಯಗಳು ಆಗದೆ ಹೋಗಿದ್ದರೆ ಮತ್ತಷ್ಟು ಹಿಂದುಳಿಯುತ್ತಿತ್ತು ಎಂದು ಶ್ರೀಗಳು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಇಲಾಖೆಗಳ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ಅವರು ಮಾತನಾಡಿ ರಾಷ್ಟ್ರೀಯ ಶಿಕ್ಷಣ £Ãತಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ , ಮಕ್ಕಳಿಗೆ ಸಂಸ್ಕಾರ ಕೊಡುವ ಶಿಕ್ಷಣ ಆಗುತ್ತಿಲ್ಲ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಶಿಕ್ಷಣದ ಅಗತ್ಯ ಇಂದು ಇದೆ ಈ ಹಿನ್ನೆಲೆಯಲ್ಲಿ ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ ಮೆಕಾಲೆ ಶಿಕ್ಷಣ ಪದ್ಧತಿ ಗಿಂತ ಮಗು ಬಯಸುವ ಶಿಕ್ಷಣವನ್ನು £Ãಡಲು ಸರ್ಕಾರ ಗಮನಹರಿಸುತ್ತಿದೆ, ೨೦೩೦ ರ ಒಳಗಾಗಿ ದೇಶದಲ್ಲಿದೆ ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಸಚಿವರು ಹೇಳಿದರು.
ಹಿಂದಿಲ್ಲ ಊರಿಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ಊರವರೇ ಮಾಡಿಕೊಳ್ಳುತ್ತಿದ್ದರು. ಊರಿನ ಕಟ್ಟೆ ಪಂಚಾಯಿತಿ ಕಟ್ಟೆ ನ್ಯಾಯ ಅತ್ಯಂತ ಶ್ರೇಷ್ಠವಾಗಿತ್ತು ಮತ್ತು ಸತ್ಯವಾಗಿಯೂ ನ್ಯಾಯವಹಿತವಾಗಿಯೂ ಇತ್ತು ಎಲ್ಲರೊಂದಿಗೆ ಸಹಪಾಳ್ವೆ ಪ್ರಾಣಿ ಪಕ್ಷಿಗಳೊಂದಿಗೂ ಕೂಡ ಸಂತೋಷದಿಂದ ಬದುಕುವ ವಾತಾವರಣ ಅಂದಿತ್ತು ಇಂದು ಮಾನಸಿಕತೆ ಬದಲಾಗಬೇಕಿದೆ ಜನಕ್ಕೆ ನೆಮ್ಮದಿ ಕೊಡುವಂತ ಕಾರ್ಯ ಮಾಡಬೇಕಾಗಿದೆ ಪತಿ-ಪತ್ನಿ ಒಟ್ಟಿಗೆ ಇದ್ದರೆ ಅದೇ ನೆಮ್ಮದಿ ಸುಖ ಎನ್ನುವಂತ ಸ್ಥಿತಿ ಇಂದು £ರ್ಮಾಣವಾಗಿದೆ ಇದು ಬದಲಾಗಬೇಕು ಹೆಚ್ಚು ಅಂಕಗಳಿಸುವ ಶಿಕ್ಷಣ ವ್ಯವಸ್ಥೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಲ್ಲರನ್ನು ಡಾ. ಇಂಜಿ£ಯರ್ ಮಾಡಲು ಸಾಧ್ಯವಿಲ್ಲ ಇಂದು ಏ£ದ್ದರೂ ಸಮಾಜಮುಖಿ ವ್ಯಕ್ತಿಗಳನ್ನು ಸಮಾಜಮುಖಿ ಅಧಿಕಾರಿಗಳನ್ನು ಕೊಡುವ ಶಿಕ್ಷಣ ಪದ್ಧತಿ ಅತ್ಯಗತ್ಯವಾಗಿದೆ ಸಮಾಜ ದೇಶ ಪ್ರಕೃತಿಯನ್ನು ಪ್ರೀತಿಸುವಂತಹ ಶಿಕ್ಷಣ £Ãಡುವ ಅಗತ್ಯ ಇದೆ ಎಂದು ಸಚಿವರು ಹೇಳಿದರು.
ಸುಲಧಾಳ ಗ್ರಾಮದವರೇ ಆದ ಐಎಎಸ್ ಅಧಿಕಾರಿ ಪ್ರಸ್ತುತ ತುಮಕೂರಿನ ಜಿಲ್ಲಾಧಿಕಾರಿ ಶ್ರೀ ವೈ ಎಸ್ ಪಾಟೀಲ್ ಅವರು ಸ್ವಾಗತ ಭಾಷಣದಲ್ಲಿ ತಮ್ಮ ಮನೆತನದ ಮೂರು ತಲೆಮಾರುಗಳು ಇದೇ ಶಾಲೆಯಲ್ಲಿ ಕಲಿತವರು ಎಂದು ಹೇಳಿದರು ಅದೇ ರೀತಿ ಆ ಶಾಲೆಯಲ್ಲಿ ಇರುವ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಅವರು ಕೊಂಡಾಡಿದರು, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಕಾರ್ಯಕಾಲದಲ್ಲಿ ದಾಖಲೆ ಸಮಯದಲ್ಲಿ ೧೫,೦೦೦ ಶಿಕ್ಷಕರ ನೇಮಕ ಒಂದ ಒಂಬತ್ತು ಸಾವಿರಕ್ಕೂ ಅಧಿಕ ಶಾಲಾ ಕೊಠಡಿಗಳ £ರ್ಮಾಣ ಸೇರಿದಂತೆ ಆಗಿರುವ ಕಾರ್ಯಗಳನ್ನು ಅವರು ಶ್ಲಾಘಿಸಿದರು.
ಉಪನ್ಯಾಸಕರಾದ ಶ್ರೀ ಏ.ಕೆ. ಪಾಟೀಲ್ ಅವರು ಕಾರ್ಯಕ್ರಮವನ್ನು £ರೂಪಿಸಿದರು,
ಸ್ಥಳೀಯ ಶಾಸಕ ಮಾಜಿ ಸಚಿವ ಶ್ರೀ ರಮೇಶ್ ಜಾರಕಿಹೊಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಶ್ರೀಮತಿ ಜಯಶ್ರೀ ಶಿಂತ್ರಿ, ಶಾಲೆಗೆ ಸ್ಥಳದಾನ £Ãಡಿದ ದೇಶಪಾಂಡೆ ಮನೆತನದ ಶ್ರೀ ಗೋವಿಂದ ದೇಶಪಾಂಡೆ, ಶ್ರೀ ಬಸವರಾಜ ನಂದಿ, ಬಿಬಿ ಮಾಳಗಿ ,ಭೀಮಶಿ ಬದ್ಲಂಗೋಳ, ಬಾಳಗೌಡ ಪಾಟೀಲ್ , ಶ್ರೀಮತಿ ಕೆಂಪಣ್ಣವರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಚಾರ್ಯ ಎ ಎನ್ ಮುದುಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಇದೇ ಸಂದರ್ಭದಲ್ಲಿ “ ಅಕ್ಷರ ದೇಗುಲ “ಎಂಬ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು, ಶಿಕ್ಷಕ ಎಂ ಬಿ ಮುಸಲ್ಮಾರಿ ವಂದನಾರ್ಪಣೆಗೈದರು. ೧೦೫ ವರ್ಷಗಳ ಹಳೆಯ ಶಾಲಾ ಕಾರ್ಯಕ್ರಮದ ಈ ಸಂದರ್ಭದಲ್ಲಿ ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳೆಲ್ಲ ಕಾರ್ಯಕ್ರಮದಲ್ಲಿ ಸಂಭ್ರಮ ಸಡಗರದಿಂದ ಭಾಗವಹಿಸಿದ್ದರು ಊರಿನಲ್ಲಿ ಹಬ್ಬದ ವಾತಾವರಣ ಕಂಡುಬರುತ್ತಿತ್ತು.


Gadi Kannadiga

Leave a Reply