This is the title of the web page
This is the title of the web page

Please assign a menu to the primary menu location under menu

Local News

ಕಟ್ಟಡ ತೆರವು ವೇಳೆ ಒಮ್ನೆಲೆ ಕುಸಿತ ತಪ್ಪಿದ ಅನಾಹುತ


ಬೆಳಗಾವಿ: ಗುರುವಾರ ಮಧ್ಯಾಹ್ನ ಬೆಳಗಾವಿ ನಗರದ ಚವಾಟ್ ಗಲ್ಲಿಯಲ್ಲಿ ಮನೆ ಒಂದನ್ನು ತೆರವುಗೊಳಿಸುವ ವೇಳೆ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದಂತಾಗಿದೆ.

ಇಕ್ಕಟ್ಟಾದ ಜನವಸತಿ ಪ್ರದೇಶದಲ್ಲಿ ಇರುವ ಮೂರು ಅಂತಸ್ತಿನ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಹೊಸ ಕಟ್ಟಡ ಕಟ್ಟಲು ಗುತ್ತಿಗೆದಾರ ಗುತ್ತಿಗೆ ತಗೆದುಕೊಂಡು ಮನೆ ಕೆಡವು ಕೆಲಸದಲ್ಲಿ ನಿರತರಾಗಿದ್ದರು.

ನಿಧಾನಗತಿಯಲ್ಲಿ ಕೆಲಸ ಮಾಡುವ ಯೋಜನೆ ಇದ್ದರೂ ಕೂಡ ಜೆಸಿಬಿಯ ಅತಿಸಾಮರ್ಥ್ಯದ ಬಲಪ್ರಯೋಗದಿಂದ ಒಮ್ಮೆಲೇ ಪೂರ್ತಿ ಕಟ್ಟಡ ನೆಲಕ್ಕೆ ಉರಳಿ, ರಸ್ತೆ ತುಂಬೆಲ್ಲಾ ಕಟ್ಟಡದ ಕಲ್ಲು ಗೋಡೆ, ಬಿದ್ದವು. ಗಲ್ಲಿಯ ವಿದ್ಯುತ್ ತಂತಿಗಳು ಒಟ್ಟಾಗಿ ಹರಿದು ನೆಲಕ್ಕೆ ಬಿದ್ದಿದ್ದವು.

ಅದೃಷ್ಟವಶಾತ್ ಆ ವೇಳೆ ರಸ್ತೆಯಲ್ಲಿ ಜನರಿರಲಿಲ್ಲದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,, ಸ್ಥಳೀಯರು ಹೇಳುವ ಪ್ರಕಾರ ವಿದ್ಯುತ್ ತಂತಿ ಒಮ್ಮೆಲೇ ಬಿದ್ದಿದ್ದರಿಂದ ಮನೆಯಲ್ಲಿಯ ಕೆಲ ಟಿವಿ ಕಂಪ್ಯೂಟರ್ ಹೀಗೆ ನಾನಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಇದೆ.

ಹಿರಿಯ ನ್ಯಾಯವಾದಿ ಒಬ್ಬರು ಮಾತನಾಡಿ ಮನೆ ತೆರವು ಕಾರ್ಯಾಚರಣೆಯಲ್ಲಿ ಸಣ್ಣ ಸಾಮರ್ಥ್ಯದ ಜೆಸಿಬಿ ಉಪಯೋಗ ಮಾಡಬೇಕು, ಈ ರೀತಿ ದೊಡ್ಡ ಮಸಿನ್ ತಂದು ಕೆಲಸ ಮಾಡಿದರೆ ಇದು ಇಡೀ ಓಣಿಗೆ ಅಪಾಯಕಾರಿ ಎಂದಿದ್ದಾರೆ.

ಇಂತಾ ಅಚಾತುರ್ಯ, ಕಾನೂನುಬಾಹಿರ, ಬೇಜವಾಬ್ದಾರಿ ಕೆಲಸ ಮಾಡಿದ ಗುತ್ತಿಗೆದಾರ ಹಾಗೂ ಜೆಸಿಬಿ ಅವರ ಮೇಲೆ ಸೂಕ್ತ ಕ್ರಮ ಜಾರಿಯಾಗಬೇಕು, ಇಲ್ಲಿಯ ಜನರಿಗೆ ತೊಂದರೆ ಆದರೆ ಯಾರೂ ಹೊಣೆ ಎಂದು ಕೆಲ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


Gadi Kannadiga

Leave a Reply