This is the title of the web page
This is the title of the web page

Please assign a menu to the primary menu location under menu

State

ಸೋನಿಯಾ ಗಾಂಧಿಗೆ ಕೋವಿಡ್ ಸೋಂಕು ಇದರಲ್ಲಿಯು ರಾಜಕೀಯ ಮಾಡಲು ಮುಂದಾದ ರಾಷ್ಟ್ರೀಯ ಪಕ್ಷಗಳು


ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಗುರುವಾರ ಕೊರೋನಾ ಸೋಂಕು ದೃಡಪಟ್ಟಿದ್ದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಎರಡು ಪಕ್ಷಗಳು ಅನಾರೋಗ್ಯವನ್ನೂ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದು ಪರಸ್ಪರ ಟ್ವಿಟ್ ಮಾಡಿ ಕಾಲೆಳೆಯುವುದರ ಮೂಲಕ ಟ್ವಿಟರ್ ವಾರ್ ಮಾಡುತ್ತಿದ್ದಾರೆ.

ಸೋನಿಯಾ ಗಾಂಧಿ ಅವರಿಗೆ ಕೋವಿಡ್ ಸೋಂಕು ದೃಡಪಟ್ಟ ಬೆನ್ನಲ್ಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ನೋಟಿಸ್ ನೀಡಿದಕ್ಕೆ ಸೋನಿಯಾ ಅವರಿಗೆ ಕೋವಿಡ್ ದೃಡಪಟ್ಟಿದ್ದು ಬೇಗ ಗುಣಮುಖರಾಗಿ ಇಡಿ ತನಿಖೆಗೆ ಹಾಜರಾಗಲಿ ಎಂದು @BJP4karnataka ವು ಟ್ವಿಟ್ ಮಾಡುವುದರ ಮೂಲಕ ಕಾಂಗ್ರೆಸ್ ಮತ್ತು ಸೋನಿಯಾ ಅವರಿಗೆ ವ್ಯಂಗ್ಯವಾಡಿದೆ.

ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಕರ್ನಾಟಕ ಕಾಂಗ್ರೆಸ್ ಮರುಟ್ವಿಟ್ ಮಾಡಿದ್ದು ಒಬ್ಬರ ಅನಾರೋಗ್ಯವನ್ನು ಹಿಯಾಳಿಸುವ ವಿಕೃತಿ ಇರುವುದು @BJP4Karnataka ಪಕ್ಷಕ್ಕೆ ಮಾತ್ರ. ‘ಸಿಡಿ’ ಪಕ್ಷವು ‘ಇಡಿ’ಯನ್ನು ಚೂ ಬಿಟ್ಟರೆ ಹೆದರುವವರು ಯಾರೂ ಇಲ್ಲ.

ಹಾಗೆಯೇ ಕೋವಿಡ್ ವರದಿ ನೀಡುವುದು ನಿಮ್ಮದೇ ಸರ್ಕಾರದ ವ್ಯವಸ್ಥೆ ಎಂಬುದು ನೆನಪಿರಲಿ. SIT ತನಿಖೆ ತಪ್ಪಿಸಲು ರಮೇಶ್ ಜಾರಕಿಹೊಳಿಯ ಕೋವಿಡ್ ಸೋಂಕಿನ ನಾಟಕವನ್ನು ರಾಜ್ಯ ಕಂಡಿದೆ. ಎಂದು ಟ್ವಿಟ್ ಮಾಡುವುದರ ಮೂಲಕ ಬಿಜೆಪಿಗೆ ತಕ್ಕ ಪ್ರತಿಕ್ರಿಯೆ ನೀಡಿದೆ.


Gadi Kannadiga

Leave a Reply