This is the title of the web page
This is the title of the web page

Please assign a menu to the primary menu location under menu

Crime NewsLocal News

ಗುರೂಜಿ ಹತ್ಯೆಗೆ ಇದಾಗಿತ್ತು ಅಸಲಿ ಕಹಾನಿ, ಆರೋಪಿಗಳು ಬಿಚ್ಚಿಟ್ಟ ಸತಗಯೆ ಏನು ಗೊತ್ತೆ..?


ಹುಬ್ಬಳ್ಳಿ: ಸರಳ ವಾಸ್ತುತಜ್ಞ ಚಂದ್ರಶೇಖರ ಗುರೂಜಿ (57) ಅವರನ್ನು ಶ್ರೀನಗರ ಕ್ರಾಸ್‌ನಲ್ಲಿರುವ ದಿ ಪ್ರೆಸಿಡೆಂಟ್‌ ಹೋಟೆಲ್‌ನ ರಿಸೆಪ್ಶನ್‌ ಲಾಬಿಯಲ್ಲಿ ಅವರನ್ನು ಇಬ್ಬರು ಆಪ್ತರು ಮಂಗಳವಾರ ಮಧ್ಯಾಹ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು ತಡರಾತ್ರಿ ಪ್ರಥಮ ಮಾಹಿತಿ ವರದಿ( ಎಫ್ ಐ ಆರ್) ದಾಖಲಾಗಿದ್ದು ಇದರಲ್ಲಿ ಮಹತ್ವದ ಅಂಶಗಳನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿ ಗುರೂಜಿ ಅವರ ಸಹೋದರನ ಮಗ ಸಂಜಯ್‌ ಅಂಗಡಿ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು
‘ಸರಳ ವಾಸ್ತು ಸಂಸ್ಥೆಯಲ್ಲಿ ಅವ್ಯವಹಾರ ನಡೆಸಿದ್ದ ಕಾರಣಕ್ಕೆ ಮಹಾಂತೇಶ ಅವರನ್ನು ಚಂದ್ರಶೇಖರ ಗುರೂಜಿ ಕೆಲಸದಿಂದ ತೆಗೆದಿದ್ದರು. ಆ ಸಿಟ್ಟಿನಿಂದ ಹುಬ್ಬಳ್ಳಿ ಗೋಕುಲ ರಸ್ತೆ, ಜೆಸಿ ನಗರದಲ್ಲಿ ಗುರೂಜಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಜಾಗ ಕೊಟ್ಟಿರಲಿಲ್ಲ ಹಾಗೂ ಸೋಲಾರ್ ವ್ಯವಸ್ಥೆ ಅಳವಡಿಕೆ ಮಾಡಿಲ್ಲ ಎಂದು ಮಹಾಂತೇಶ ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಹಿಂಪಡೆಯಲು ಗುರೂಜಿ ಅವರಲ್ಲಿ ಹಣ ಕೇಳುತ್ತಿದ್ದರು. ಆಗಾಗ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಹಣ ನೀಡದ ಹಿನ್ನೆಲೆಯಲ್ಲಿ ಹಾಗೂ ಕೆಲಸದಿಂದ ತೆಗೆದು ಹಾಕಿದ್ದರಿಂದ ಹತ್ಯೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ವನಜಾಕ್ಷಿ ಬಳಿ ತಮ್ಮ ಆಸ್ತಿ ಕೇಳಿದ್ದಕ್ಕೆ ಚಂದ್ರಶೇಖರ್ ಗುರೂಜಿ ಹತ್ಯೆಯಾಯಿತೇ? ಎಂಬ ಪ್ರಶ್ನೆಯು ಸಹ ಪೊಲೀಸರ ಮುಂದಿದೆ.


Gadi Kannadiga

Leave a Reply