This is the title of the web page
This is the title of the web page

Please assign a menu to the primary menu location under menu

Local News

ಏ.೨೨ ರಂದು ಅರ್ಜುನವಾಡದಲ್ಲಿ ಜಿಲ್ಲಾ ಮಟ್ಟದ ದಲಿತೋತ್ಸವ ಅಂಬೇಡ್ಕರ ಜನಜಾಗೃತಿ ವೇದಿಕೆ ಶಾಖೆ ಉದ್ಘಾಟನೆ, ಸಾವಿರಾರು ಜನ ಭಾಗಿ


ಹುಕ್ಕೇರಿ : ತಾಲೂಕಿನ ಅರ್ಜುನವಾಡ ಗ್ರಾಮದ ಅಂಬೇಡ್ಕರ ಸಮುದಾಯ ಭವನದಲ್ಲಿ ಎ.೨೨ ರಂದು ಸಂಜೆ ೬ ಕ್ಕೆ ಜಿಲ್ಲಾ ಮಟ್ಟದ ಬೃಹತ್ ದಲಿತೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಜನಜಾಗೃತಿ ವೇದಿಕೆಯ ಗ್ರಾಮ ಶಾಖಾ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ವೇದಿಕೆಯ ಜಿಲ್ಲಾ ಅಧ್ಯಕ್ಷ ದಿಲೀಪ ಹೊಸಮನಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಾವೇಶದಿಂದ ದಲಿತ ಚಳವಳಿಗೆ ಮತ್ತಷ್ಟು ಶಕ್ತಿ ಹಾಗೂ ವೇಗ ಸಿಗಲಿದೆ. ಜತೆಗೆ ಒಡೆದು ಹೋಗುತ್ತಿರುವ ಮನಸ್ಸುಗಳನ್ನು ಒಂದುಗೂಡಿಸುವ ಮಹತ್ವದ ಹೆಜ್ಜೆಗೆ ನಾಂದಿಯಾಗಲಿದೆ ಎಂದರು.
ದಲಿತೋತ್ಸವದ ನಿಮಿತ್ತ ಇಡೀ ಅರ್ಜುನವಾಡ ಗ್ರಾಮವನ್ನು ನೀಲಿಮಯಗೊಳಿಸಲಾಗಿದ್ದು ಪ್ರಮುಖ ರಸ್ತೆ, ವೃತ್ತಗಳು ನೀಲಿ ಬಣ್ಣದ ಭಾವುಟ, ಬಂಟಿಂಗ್ಸ್ನಿಂದ ರಾರಾಜಿಸುತ್ತಿವೆ. ಅಂದು ನಡೆಯುವ ಈ ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ೫ ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಈ ದಲಿತೋತ್ಸವದ ಮುಖ್ಯ ಕಾರ್ಯಕ್ರಮದ ಮುನ್ನ ಸಂಜೆ ೫ ಕ್ಕೆ ಹುಕ್ಕೇರಿ ಮತ್ತು ಸಂಕೇಶ್ವರ ಪ್ರವಾಸಿ ಮಂದಿರದಿಂದ ಅರ್ಜುನವಾಡದತ್ತ ಏಕಕಾಲಕ್ಕೆ ನೂರಾರು ಬೈಕ್‌ಗಳ ರ‍್ಯಾಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ತವಗಮಠದ ಬಾಳಯ್ಯಾ ಸ್ವಾಮೀಜಿ, ಗಂಗಾಧರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸಿ ಉದ್ಘಾಟಿಸುವರು. ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ವಿಶೇಷ ಉಪನ್ಯಾಸ ನೀಡುವರು. ತಹಸೀಲದಾರ ಡಾ.ಡಿ.ಎಚ್.ಹೂಗಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಸಿಪಿಐ ಮಹಮ್ಮದರಫೀಕ ತಹಶೀಲದಾರ, ಮುಖಂಡರಾದ ಮಹಾವೀರ ಮೋಹಿತೆ, ಶ್ಯಾಮರಾವ್ ರೇವಡೆ, ಕಿರಣ ರಜಪೂತ, ಜಿತೇಂದ್ರ ಮರಡಿ, ಬಸವರಾಜ ಕೋಳಿ ಮತ್ತಿತರರನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.
ಶೋಷಿತ ಸಮುದಾಯಗಳ ಏಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈ ಜನಾಂಗದ ಪ್ರತಿಯೊಬ್ಬರೂ ಜಾಗೃತಿ ಆಗಬೇಕಿದೆ. ಅದರಲ್ಲೂ ಯುವ ಸಮುದಾಯದ ಮೇಲೆ ಸಾಕಷ್ಟು ಹೊಣೆ ಇದೆ. ಬರುವ ದಿನಗಳಲ್ಲಿ ವೇದಿಕೆಯಿಂದ ಹೊ¸ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ, ಶ್ರೀನಿವಾಸ ವ್ಯಾಪಾರಿ, ಆನಂದ ಕೆಳಗಡೆ, ಕಿರಣ ಕೋಳಿ, ಕೆಂಪಣ್ಣಾ ಶಿರಹಟ್ಟಿ, ಮಂಜು ಪಡದಾರ, ಕೆ.ವೆಂಕಟೇಶ, ಬಸವರಾಜ ದೇವುಗೋಳ, ರೇಖಾ ಬಂಗಾರಿ, ಬಸಪ್ಪ ದೇವಪ್ಪಗೋಳ, ಲಕ್ಷö್ಮಣ ಹೂಲಿ, ಬಾಹುಸಾಹೇಬ ಪಾಂಡ್ರೆ, ಲಗಮಣ್ಣಾ ಕಣಗಲಿ, ಗಂಗಾರಾಮ ಹುಕ್ಕೇರಿ, ಮಲ್ಲು ಕುರಣಿ ಮತ್ತಿತರರು ಉಪಸ್ಥಿತರಿದ್ದರು.


Gadi Kannadiga

Leave a Reply