ಬೆಳಗಾವಿ ; ದಿ.9-4-2023 ರಂದು ಸಾಯಂಕಾಲ 7.25 ಗಂಟೆ ಸಮಯದಲ್ಲಿ ಗೋಕಾಕ ವಲಯ ವ್ಯಾಪ್ತಿಯ ಕಪರಟ್ಟಿ ಕ್ರಾಸ್ ನ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಬಾತ್ಮಿಯ ಮೇರೆಗೆ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಸದರಿ ಮನೆಯಲ್ಲಿ ವಿವಿಧ ನಮೂನೆಯ 76 ಪೆಟ್ಟಿಗೆಯ ಒಟ್ಟು 656.640 ಲೀಟರನಷ್ಟು ಭಾ.ತ.ಮದ್ಯ ಪತ್ತೆಯಾಗಿದ್ದು ಸದರಿ ಸಿಕ್ಕ ಮದ್ಯ ಜಪ್ತು ಪಡಿಸಿಕೊಂಡಿದ್ದು ಅದರ ಅಂದಾಜು ಮೌಲ್ಯ: 3,50,000/-ಆಗಿರುತ್ತದೆ. ಮನೆಯ ಮಾಲೀಕನ ವಿರುದ್ಧ ಪ್ರ.ವ.ವ ಸಂಖ್ಯೆ.45/2022-23 ಅಡಿಯಲ್ಲಿ ಅ. ನಿ ಗೋಕಾಕ ವಲಯರವರು ಘೋರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
Gadi Kannadiga > Local News > ಅಕ್ರಮವಾಗಿ ಸಂಗ್ರಹಿಸಿದ್ದ ಮೂರುವರೆ ಲಕ್ಷ ರೂಗಳ ಮಧ್ಯ ವಶ