ಬೆಳಗಾವಿ ಜಿಲ್ಲೆಯ ಜಿಲ್ಲಾಡಾಳಿತ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಏ. 11 ರಿಂದ 13 ರವರೆಗೆ ಮೂರು ದಿನಗಳ ಕಾಲ ಕ್ಷಯರೋಗ ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡ್ ಶಶಿಕಾಂತ್ ಮುನ್ಯಾಳ ಹೇಳಿದರು.
ಸೋಮವಾರ ಮೂರು ದಿನದ ಕ್ಷಯರೋಗ ಆಂದೋಲನವನ್ನು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಉದ್ಘಾಟಿಸಿದರ. ಬಳಿಕ ಮಾತನಾಡಿದ ಅವರು ಜಿಲ್ಲೆಯ ಬಹುತೇಕ ಕಡೆ ಸಂಚರಿಸಿ ರೋಗದ ಬಗ್ಗೆ ಅರಿವು, ಮುಂಜಾಗ್ರತೆ, ರೋಗಿಗಳಿಗೆ ಉಪಚಾರ ಮುಂತಾದ ಚಟುವಟಿಕೆಗಳನ್ನು ಆಯೋಜಿಸಿದ್ದು ಇದರ ಉಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು. ಕ್ಷಯರೋಗ ಹತೋಟಿಯಲ್ಲಿ ಮಾಡಿದ ಸಾಧನೆಗಾಗಿ ಜಿಲ್ಲೆಗೆ ಕೇಂದ್ರ ಸರ್ಕಾರದ ಬೆಳ್ಳಿ ಪದಕವು ದೊರೆತ ವಿಷಯವನ್ನು ಹಂಚಿಕೊಂಡರು,
ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಮುನ್ಯಾಳ, ಜಿಲ್ಲಾ ಕ್ಷಯರೋಗ ಅಧಿಕಾರಿ ಅನಿಲ್ ಕುರುಬೂರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.