This is the title of the web page
This is the title of the web page

Please assign a menu to the primary menu location under menu

Local News

ಅದ್ಭುತವಾದ ಸೈನ್ಯ ಆಗಬೇಕಾದರೆ ಅಗ್ನಿಪಥ ಬೇಕೇಬೇಕು


ಬೆಳಗಾವಿ: ನಗರದ ಖಾಸಗಿ ಹೋಟೆಲಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಜಿರಲಿ ಅವರು, ಅಗ್ನಿಪಥ ಯೋಜನೆಯ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು

ಈ ಯೋಜನೆಯ ಬಗ್ಗೆ ವಿರೋಧ ಪಕ್ಷಗಳು ತುಂಬಾ ಅಪಪ್ರಚಾರ ಮಾಡುತ್ತಿವೆ,, ಮುಕ್ತವಾಗಿ ಇದು ಸರ್ಕಾರ ಅಥವಾ ಬಿಜೆಪಿ ಪಕ್ಷ ಮಾಡಿರುವ ಯೋಜನೆ ಅಲ್ಲ, ಸೇನಾ ಇಲಾಖೆಯ ಮುಖ್ಯಸ್ಥರು ಈ ಯೋಜನೆ ತಯಾರಿಸಿ, ಅದರ ನಿಯಮಾನುಸಾರ ಮುಂದಿನ ನೇಮಕಾತಿ ಪ್ರಕ್ರಿಯೆ ನಡೆಸಲಿದ್ದಾರೆ

ಇದರಿಂದ ಯುವಕರಿಗೆ ಹಲವಾರು ಸೌಲಭ್ಯಗಳಿವೆ,, ಯುವಕರು ಯಾರದೋ ಮಾತಿಗೆ ಮರುಳಾಗಿ,. ಸರ್ಕಾರದ ವಿರುದ್ಧ ದಂಗೆ ಮಾಡಿ, ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡಬಾರದು ಎಂದರು.

ದೇಶದ ಬಲಿಷ್ಠ ಹಾಗೂ ಗುಣಮಟ್ಟದ ಸೈನ್ಯ ನಿರ್ಮಾಣ ಮಾಡುವ ಗುರಿಯೊಂದಿಗೆ ಈ ಯೋಜನೆ ತರಲಾಗಿದೆ ಅದಕ್ಕೆ ವಿರೋಧ ಪಕ್ಷದವರು ಸರಿಯಾಗಿ ಅರ್ಥ ಮಾಡಿಕೊಂಡು, ಇಂತಾ ಗಲಾಟೆ, ದಂಗೆ ಆಗದಂತೆ ನೋಡಿಕೊಳ್ಳಬೇಕು ಎಂದರು

ಇದರಿಂದ ದೇಶದ ಯುವಕರಿಗೆ ಯಾವುದೇ ಅನ್ಯಾಯ ಆಗೋಲ್ಲ, ಬದಲಾಗಿ ದೇಶ ಮತ್ತಷ್ಟು ಬಲಿಷ್ಠವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೂರ್ತಿಸಿಕೊಳ್ಳುವಂತೆ ಆಗುತ್ತದೆ ಎಂದರು

ನಮ್ಮ ಸೈನ್ಯ ಆಧುನೀಕರಣ ಆಗಲು, ಬೇರೆ ದೇಶಗಳೊಂದಿಗೆ ಗುಣಮಟ್ಟದ ಸ್ಪರ್ಧೆ ನೀಡಲು ಅಗ್ನಿಪತ ಎಂಬ ವ್ಯವಸ್ಥೆ ಅತ್ಯವಶ್ಯವಾಗಿದೆ, ಸೈನ್ಯ ಸೇರ್ಪಡೆ ಅನ್ನೋದು ಒಂದು ವೃತ್ತಿ ಅಲ್ಲ, ಅದು ದೇಶಸೇವೆ ಎಂಬ ಭಾವನೆ ಇರಬೇಕು, ಕಾಂಗ್ರೆಸ್ ಇದರಲ್ಲಿ ತನ್ನ ಸಣ್ಣತನ ತೋರಿಸಬಾರದು ಎಂದರು.

ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ ಬೇನಕೆ, ಬಿಜೆಪಿ ವಕ್ತಾರ ಜಿರಳೆ, ಮಾದ್ಯಮ ವಕ್ತಾರರಾದ ಪ್ರಭು ಹೂಗಾರ, ಶರದ್ ಪಾಟೀಲ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.


Gadi Kannadiga

Leave a Reply