This is the title of the web page
This is the title of the web page

Please assign a menu to the primary menu location under menu

State

ನ್ಯಾಯಬೆಲೆ ಅಂಗಡಿಯವರ ಗಮನಕ್ಕೆ


ಗದಗ ಅಗಸ್ಟ ೮: ನೇರ ನಗದು ಹಣ ವರ್ಗಾವಣೆ ಕುರಿತು ಗದಗ ಪಡಿತರ ಪ್ರದೇಶದ ( ಶಹರ) ನ್ಯಾಯಬೆಲೆ ಅಂಗಡಿಯವರು ಪಡಿತರ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡದೇ ಇರುವುದು ಹಾಗೂ ನ್ಯಾಯಬೆಲೆ ಅಂಗಡಿಗಳನ್ನು ನಿಗದಿತ ಸಮಯದಲ್ಲಿ ತೆರೆಯದೇ ಇರುವುದು ಹಾಗೂ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸದೇ ಇರುವ ದೂರುಗಳು ಸ್ವೀಕೃತವಾಗಿರುತ್ತದೆ.
ಜಿಲ್ಲೆಯಲ್ಲಿ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಬೆ.೮ ಗಂಟೆಯಿಂದ ಮ.೧ ಗಂಟೆಯವರೆಗೆ ಹಾಗೂ ಸಂಜೆ ೪ ಗಂಟೆಯಿಂದ ೮ ಗಂಟೆಯವರೆಗೆ ತೆರೆದಿರಬೇಕು. ಪಡಿತರವನ್ನು ನಿಯಮಾನುಸಾರವಾಗಿ ಹಂಚಿಕೆ ಮಾಡುವುದು. ನೇರ ನಗದು ಹಣ ವರ್ಗಾವಣೆ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಫಲಾನುಭವಿಗಳು/ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಿಗೆ ಆಗಮಿಸಿದಾಗ ಅವರಿಗೆ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಗುವ ಪರಿಹಾರಗಳನ್ನು ( ಇ- ಕೆವೈಸಿ ಇತರೆ) ತಕ್ಷಣವೇ ಮಾಡುವುದು, ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸುವಂತಿಲ್ಲ. ನ್ಯಾಯಬೆಲೆ ಅಂಗಡಿಯವರು ಯಾವುದೇ ರೀತಿಯ ಸಹಕರಿಸದೇ ಇದ್ದಲ್ಲಿ ಅಥವಾ ಕಚೇರಿಗಳಿಗೆ ಅಲೆದಾಡಿಸುತ್ತಿರುವುದು ಕಂಡು ಬಂದಲ್ಲಿ ಹಾಗೂ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಯಾವುದೇ ನೋಟೀಸು ನೀಡದೇ ಅಮಾನತ್ತುಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Leave a Reply