ಬೆಳಗಾವಿ :ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರದ ಸಕಾಲ ಯೋಜನೆಯ ದಶಮಾನೋತ್ಸವವನ್ನು ಸಡಗರದಿಂದ ಆಚರಿಸಲಾಯಿತು…
ಜಿಲ್ಲೆ ಹಾಗೂ ತಾಲೂಕಿನ ಕಂದಾಯ ಇಲಾಖೆಯ ನೂರಾರು ಸಿಬ್ಬಂದಿಗಳು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಉಪತಹಶಿಲ್ದಾರ್ ನೂರಾರು ಕಂದಾಯ ನೌಕರರು ಹಾಗೂ ಸಕಾಲ ಯೋಜನೆಯ ಸಂಯೋಜಕರು ಸಿಬ್ಬಂದಿ ಎಲ್ಲರೂ ಸೇರಿ ಈ ಸಂಭಮ್ ಆಚರಿಸುವ ಮೂಲಕ ಸಕಾಲ ಯೋಜನೆಯ ಸಾಧನೆ ಹಾಗೂ ಅದರ ಉಪಯೋಗದ ಬಗ್ಗೆ ತಿಳಿಸಿಕೊಟ್ಟರು….
ಈ ಸಂಧರ್ಭದಲ್ಲಿ ಮಾತನಾಡಿದ ಉಪತಹಸೀಲ್ದಾರ್ ಪಿ ಮೋಹನ್ ಅವರು ಘನ ಸರ್ಕಾರದ ಈ ಸಕಾಲ ಯೋಜನೆಯಲ್ಲಿ ಒಟ್ಟು 80 ಇಲಾಖೆಗಳ 1100 ಕ್ಕೂ ಹೆಚ್ಚು ಸೇವೆಗಳನ್ನು ನಿಗದಿತ ಸಮಯದಲ್ಲಿ ನೀಡುತ್ತಾ ಬಂದಿವೆ, ಸಕಾಲ ಯೋಜನೆ ಜಾರಿಗೆ ಬಂದು ಇಂದಿಗೆ 10 ವರ್ಷವಾಗಿದೆ, ಶೇಕಡಾ 97 ರಷ್ಟು ನಾವು ಇದರಲ್ಲಿ ಯಶಸ್ಸು ಸಾಧಿಸಿದ್ದೇವೆ, ಮೊದಲಿಗೆ ನಾವು ಕೇವಲ 11 ಇಲಾಖೆಗಳಲ್ಲಿ, 85 ಸೇವೆ ಮಾತ್ರಾ ನೀಡ್ತಾ ಇದ್ದೆವು, ಆದರೆ ಈಗ ಈ ಸೇವೆ ತುಂಬಾ ವಿಸ್ತಾರವಾಗಿದೆ.. ಕಂದಾಯ ಹಾಗೂ ಇತರ ಇಲಾಖೆ ಸೇರಿ ಒಟ್ಟು 98% ಕೆಸಗಳನ್ನಾ ವಿಲೇವಾರಿ ಮಾಡಿದ್ದೇವೆ ಎಂದರು.
ಜಿಲ್ಲೆಯಲ್ಲಿ ಸಕಾಲ ಸಚಿವರ ಮಾರ್ಗದರ್ಶನದಂತೆ ಜಿಲ್ಲಾ ಸಕಾಲ ಸಮನ್ವಯ ಸಮಿತಿಯನ್ನು ರಚಿಸಿ ಅಪರ್ ಜಿಲ್ಲಾಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಸಾರ್ವಜನಿಕರಿಗೆ ನಿಗದಿತ ಅವಧಿಗೆ ಮುಂಚೆನೇ ಸೇವೆಗಳನ್ನು ವದಗಿಸುವುದು ಸಕಾಲ ಯೋಜನೆ, ಕೆಲವು ವಿಳಂಬವಾದಲ್ಲಿ ಅದಕ್ಕೆ ಸಲ್ಲಿಸಬೇಕಾದ ದಾಖಲೆಗಳ ಕೊರತೆಯಿಂದ ಆಗಿರುತ್ತೆ ಹೊರತು, ಇಲಾಖೆಗಳು ತಮ್ಮ ಸೇವೆ ಸರಿಯಾಗಿ ನೀಡಿವೆ ಎಂದು ಈ ಸಂಧರ್ಬದಲ್ಲಿ ಅವರು ತಿಳಿಸಿದರು.. ಈ ಸಕಾಲ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಕಾಲ ಸಂಯೋಜಕರಾದ ಗುರುರಾಜ್ ಉಪ್ಪಿನ ಹಾಗೂ ಸಿಬ್ಬಂದಿ, ಕಂದಾಯ ಇಲಾಖೆಯ ಎಲ್ಲಾ ಪ್ರಮುಖ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ದರು.