This is the title of the web page
This is the title of the web page

Please assign a menu to the primary menu location under menu

Local News

ಇಂದು ಖಾನಾಪುರದ ಸಾಲು ಮರದ ತಿಮ್ಮಕ್ಕ ಉದ್ಯಾನವನ ಅನಾವರಣ : ಹಲವು ವಿಶೇಷತೆ


ಬೆಳಗಾವಿ : ಖಾನಾಪುರ ತಾಲೂಕಿನ ಖಾನಾಪುರ ಅರಣ್ಯ ವಲಯದಲ್ಲಿ ಸಾಲುಮರದ ತಿಮ್ಮಕ್ಕನ ಹೆಸರಿನ ಉದ್ಯಾನವನ ಅರಣ್ಯ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗಿದೆ.

ಹಲವು ವಿಶೇಷತೆಗಳನ್ನು ಹೊಂದಿರುವ ಸಾಲುಮರದ ತಿಮ್ಮಕ್ಕನ ಉದ್ಯಾನವನ್ನು ಇಂದು ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಅವರು ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳಲಿದೆ.

ಇನ್ನು ಉದ್ಯಾನವನದ ವಿಶೇಷತೆ ಕುರಿತು ಪಂಚಾಯತ ಸ್ವರಾಜ್ ಸಮಾಚಾರ ಪತ್ರಿಕೆಯ ಸಂಪಾದಕರೊಂದಿಗೆ ಮಾತನಾಡಿದಂತಹ ಸಹಾಯಕ ಸಂರಕ್ಷಣಾಧಿಕಾರಿಗಳು ಸಂತೋಷ್ ಚವ್ಹಾಣ್ ಅವರು, ಖಾನಾಪುರ ಪಟ್ಟಣದಿಂದ ಎರಡು ಕೀಲೋ ಮೀಟರ್ ಅಂತರದಲ್ಲಿರುವ ಇರುವ ಕರಂಬಲ ಗ್ರಾಮದ 50 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸಂಯೋಗದಿಂದ ಉದ್ಯಾನವನವು ನಿಮಾ೯ಣ ಮಾಡಲಾಗಿದೆ

ಇಲ್ಲಿ ಚಿಕ್ಕಮಕ್ಕಳ ಗಳಿಂದ ವಯಸ್ಕರವರೆಗೆ ಆಟ ಪಾಠ ವಾಡಲು ವಿವಿಧ ಕ್ರೀಡಾ ಸಾಮಗ್ರಿಗಳನ್ನು ಉದ್ಯಾನವನದ ಲ್ಲಿ ವ್ಯವಸ್ಥೆ ಮಾಡಲಾಗಿದೆ.ಇಲ್ಲಿ ಬರುವಂತ ಪ್ರವಾಸಿಗರಿಗೆ ಸಣ್ಣದಾದ ಉಪಹಾರ ಕೇಂದ್ರ, ಕುಡಿಯುವ ನೀರಿನ ಹಾಗೂ ಮೂಲಸೌಲಭ್ಯಗಳ ಅಳವಡಿಸಲಾಗಿದೆ.

ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿರುವ ಉದ್ಯಾನವನ ಕಂಬಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 50 ಹೇಕ್ಟರ್ ಅರಣ್ಯ ಪ್ರದೇಶದಲ್ಲಿ ಇದು ನೈಸರ್ಗಿಕ ಅರಣ್ಯವು ಕೂಡ ಇರುವುದರಿಂದ ಹೆಚ್ಚಿನ ವಿಶೇಷತೆ ಸಾಲುಮರದ ತಿಮ್ಮಕ್ಕನ ಉದ್ಯಾನವನಕ್ಕೆ ಇದೆ.

ವಲಯ ಅರಣ್ಯಾಧಿಕಾರಿ ಕವಿತಾ ಈರನಟ್ಟಿ ಅವರು ಪರಿಶ್ರಮದಿಂದಾಗಿ ಒಂದು ಸುಂದರವಾದ ಸರ್ವರಿಗೂ ಉಪಯುಕ್ತವಾದ ಉದ್ಯಾನವನ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿದೆ ಎಂದು ಸಂತೋಷ್ತಿ ಚವ್ಹಾಣ್ ಮಾಹಿತಿ ಹಂಚಿಕೊಂಡರು.


Gadi Kannadiga

Leave a Reply