ಕೊಪ್ಪಳ ಜೂನ್ ೩೦: ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಜುಲೈ ೧ ರಿಂದ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಜುಲೈ ೧ರ ಬೆಳಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಕೆಡಿಪಿ ತ್ರೆöÊಮಾಸಿಕ ಸಭೆಯಲ್ಲಿ ಭಾಗಿಯಾಗುವರು. ಸಂಜೆ ೭ ಗಂಟೆಗೆ ಕೊಪ್ಪಳ ನಗರದಿಂದ ನಿರ್ಗಮಿಸಿ ಕಾರಟಗಿಗೆ ಪ್ರಯಾಣ ಬೆಳೆಸಿ ರಾತ್ರಿ ೮ ಗಂಟೆಗೆ ಕಾರಟಗಿಯಲ್ಲಿ ಸಾರ್ವಜನಿಕ ಭೇಟಿ ಮತ್ತು ಕುಂದುಕೊರತೆಗಳ ವಿಚಾರಣೆ ನಡೆಸುವರು.
ಜುಲೈ ೨ರ ಬೆಳಗ್ಗೆ ೧೦ ಗಂಟೆಗೆ ಕಾರಟಗಿಯಿಂದ ನಿರ್ಗಮಿಸಿ ಕನಕಗಿರಿ ತಾಲೂಕಿಗೆ ಪ್ರಯಾಣಿಸಿ ಬೆಳಗ್ಗೆ ೧೧ ಗಂಟೆಗೆ ಕಲಕೇರಿ, ೧೨ ಗಂಟೆಗೆ ಬೆನಕನಾಳ, ಮಧ್ಯಾಹ್ನ ಗಂಟೆಗೆ ಸುಳೇಕಲ್, ಮಧ್ಯಾಹ್ನ ೩ ಗಂಟೆಗೆ ತಿಪ್ಪನಾಳ ಗ್ರಾಮಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು. ಸಂಜೆ ೫ ಗಂಟೆಗೆ ಕನಕಗಿರಿಯಿಂದ ನಿರ್ಗಮಿಸಿ ಗಂಗಾವತಿ, ಹೊಸಪೇಟೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಸ್.ಮಧುಸೂದನ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ
Suresh30/06/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023