ಗದಗ ಜನೆವರಿ ೨೭: ನಶಿಸಿ ಹೋಗುತ್ತಿರುವ ತಳಸಮುದಾಯದ ವಿಶಿಷ್ಟ ಕಲೆಗಳನ್ನು ಮುನ್ನಲೆಗೆ ತರಲು ಇಲಾಖೆಯಿಂದ “ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ” ಶೀರ್ಷಿಕೆಯಡಿ ತಳಸಮುದಾಯದ ವಿಶಿಷ್ಟ ಕಲೆಗಳನ್ನು ಗುರುತಿಸಿ ಅಂತಹ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಸಕ್ತರಿರುವ ಕಲಾವಿದರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುವುದು.
ಆಸಕ್ತ ಜಿಲ್ಲೆಯಲ್ಲಿನ ೧೬ ರಿಂದ ೩೦ ವರ್ಷದೊಳಗಿನ ಗರಿಷ್ಠ ೫೦ ಜನ ಯುವಕ/ಯುವತಿಯರಿಗೆ (ಒಂದು ಕಲಾಪ್ರಕಾರಕ್ಕೆ ೧೦ ಜನರಂತೆ) ಲಾವಣಿ ಪದ, ಸೋಬಾನೆ ಪದ, ಮೂಡಲಪಾಯ (ದೊಡ್ಡಾಟ), ರಿವಾಯತ್ ಪದ(ಹೆಜ್ಜೆಮೇಳ), ಸಂಪ್ರದಾನಿ ವಾದನ(ಹಲಗೆ/ಕಣಿ ವಾದನ) ದಂತಹ ಕಲಾಪ್ರಕಾರಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಶಿಷ್ಯವೇತನದೊಂದಿಗೆ ನುರಿತ ಕಲಾವಿದರಿಂದ ತರಬೇತಿ ನೀಡುವ ಉದ್ದೇಶವಿದ್ದು ಆಸಕ್ತರು ಜನೆವರಿ ೩೧ ರೊಳಗೆ ತಮ್ಮ ಸ್ವವಿವರದೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗ ಕಚೇರಿಗೆ ಖುದ್ದಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ:೦೮೩೭೨-೨೨೧೮೬೪ ಅನ್ನು ಸಂಪರ್ಕಿಸಬಹುದಾಗಿದೆ.
Gadi Kannadiga > State > ತರಬೇತಿ ಶಿಬಿರ