ಗದಗ ಡಿಸೆಂಬರ್ ೩೦: ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಧಾರವಾಡದಲ್ಲಿ ಜನೆವರಿ ೨೦೨೩ ರ ಮಾಹೆಯಿಂದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೆಂದ್ರ ಧಾರವಾಡ ಇಲ್ಲಿ ಧಾರವಾಡ/ ಗದಗ/ ಹಾವೇರಿ/ ಕಾರವಾರ ಜಿಲ್ಲೆಗಳ ರೈತ/ ರೈತ ಮಹಿಳೆಯರಿಗೆ ಎರಡು ದಿನಗಳ ಅವಧಿಯ ತಂಡವಾರು ಉಚಿತವಾಗಿ ವೈಜ್ಞಾನಿಕ ಹೈನುಗಾರಿಕೆ ಮತ್ತು ಕುರಿ/ ಮೇಕೆ ಸಾಗಾಣಿಕೆ ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತ ರೈತರು ತಮ್ಮ ಹೆಸರನ್ನು ಎಸ್.ಎಂ.ಎಸ್. ಸಂದೇಶದ ಮೂಲಕ ಅಥವಾ ಕಚೇರಿ ದೂರವಾಣಿ ಕರೆ ಮುಖಾಂತರ ಅಥವಾ ಖುದ್ದಾಗಿ ಭೇಟಿ ನೀಡಿ ತಮ್ಮ ಹೆಸರನ್ನು ಬೆ ೧೦.೧೫ ರಿಂದ ಸಂಜೆ. ೫.೧೫ ರವರೆಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ ೦೮೩೬-೨೪೪೩೭೪೩ ; ಮೊಬೈಲ್ ಸಂಖ್ಯೆ ೯೫೯೧೦೨೪೪೯೯/ ೮೬೧೮೦೨೨೧೦೮ ಸಂಪರ್ಕಿಸಬಹುದಾಗಿದೆ.
Gadi Kannadiga > State > ರೈತ /ರೈತ ಮಹಿಳೆಯರಿಗೆ ಹೈನುಗಾರಿಕೆ ಮತ್ತು ಕುರಿ ಸಾಗಾಣಿಕೆ ತರಬೇತಿ