ಮೂಡಲಗಿ: ಅರಭಾವಿ ಕಿತ್ತೂರ ರಾಣಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಜ.೧೨ ರಂದು ಮುಂಜಾನೆ ೧೦=೩೦ಕ್ಕೆ “ಬಾಳೆ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳು ಮತ್ತು ಮಾರುಕಟ್ಟೆ ವ್ಯವಸ್ಥೆ” ವಿಷಯವಾಗಿ ತರಬೇತಿ ಕಾರ್ಯಕ್ರಮವನ್ನು ಜರುಗಲಿದೆ.
ಮಹಾವಿದ್ಯಾಲಯದ ಡೀನ್ ಡಾ.ಎಮ್.ಜಿ.ಕೆರುಟಗಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಗಳಾಗಿ ಬಾಗಲಕೋಟ ತೋ.ವಿ.ವಿಯ ಸಂಶೋಧನಾ ನಿರ್ದೇಶಕ ಡಾ.ಎಚ್.ಸಿ.ಮಹೇಶ್ವರ, ವಿಸ್ತಾರಣಾ ನಿರ್ದೇಶಕ ಡಾ.ಎಸ್.ಐ.ಅಥಣಿ, ಬೆಳಗಾವಿ ಜಿ.ಪಂ ತೋಟಗಾರಿಕಾ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಭಾಗವಹಿಸುವರು.
ಈ ತರಬೇತಿ ಕಾರ್ಯಕ್ರಮದಲ್ಲಿ ಕಡಿಮೆ ಖರ್ಚಿನಲ್ಲಿ ಬಾಳೆ ಸಸಿಗಳನ್ನು ಉತ್ಪಾದಿಸುವ ರೈತಸ್ನೇಹಿ ತಂತ್ರಜ್ಞಾನ, ವಿವಿಧ ತಳಿಗಳು ಹಾಗೂ ನೂತನ ಉತ್ಪಾದನಾ ತಾಂತ್ರಿಕತೆಗಳು, ಬಾಳೆ ಬೆಳೆಗೆ ಬರುವ ಸಮಗ್ರ ರೋಗ ನಿರ್ವಹಣೆ, ಕೀಟ ನಿರ್ವಹಣೆ, ಕೋಯ್ಲೋತ್ತರ ಮತ್ತು ಮೌಲ್ಯವರ್ಧನೆ ತಂತ್ರಜ್ಞಾನಗಳು, ಸಾವಯವ ಗೊಬ್ಬರಗಳ ಉತ್ಪಾದನೆ ಮತ್ತು ಬಳಕೆ, ಉತ್ಪಾದನಾ ವೆಚ್ಚ, ಮಾರುಕಟ್ಟೆ ವ್ಯವಸ್ಥೆ ಹಾಗೂ ರಫ್ತು ಕಾರ್ಯಾಚರಣೆ ಮಾಹಿತಿ ವಿಷಯಗಳನ್ನೋಳಗೊಂಡ ತಾಂತ್ರಿಕ ಸಮಾವೇಶ ನಡೆಯುತ್ತದೆ. ಕಾರಣ ಆಸಕ್ತಿಯುಳ್ಳ ರೈತ ಬಾಂಧವರು ಈ ತರಬೇತಿಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರನ್ನು ನೋಂದಾಯಿಸಲು (ಶುಲ್ಕರಹಿತ) ಈ ಕೆಳಕಂಡ ವಿಜ್ಞಾನಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಡಾ. ಕಾಂತರಾಜು. ವಿ-೯೪೪೮೫೮೪೭೪೯, ೯೧೪೮೩೭೨೭೬೦ ಹಾಗೂ ಡಾ.ಸಚಿನಕುಮಾರ ಟಿ. ನಂದೀಮಠ – ೮೬೧೮೨೩೪೯೭೩, ೯೯೮೬೦೮೪೪೦೫
Gadi Kannadiga > State > ಜ. ೧೨ರಂದು ಬಾಳೆ ಬೆಳೆಯಲ್ಲಿ ತಾಂತ್ರಿಕತೆಗಳ ತರಬೇತಿ