ಕೊಪ್ಪಳ : ಗಂಗಾವತಿ ಗ್ರಾಮೀಣ ಠಾಣೆಯ ಪಿಐ ಉದಯರವಿ ಅವರನ್ನು ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ರವರ ಆದೇಶದ ಅನುಸಾರ ಬೆಂಗಳೂರಿನ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮಂಡಳಿಯ ನಡವಳಿ ಹಾಗೂಏ.ಡಿ.ಜಿ.ಪಿ., ಕಾನೂನು ಮತ್ತು ಸುವ್ಯವಸ್ಥೆ ರವರ ಟಿಪ್ಪಣಿ, ಐ.ಜಿ.ಪಿ., ಬಳ್ಳಾರಿ ವಲಯ ರವರ ಪತ್ರದ ಅನ್ವಯ ವರ್ಗಾವಣೆ ಮಾಡಲಾಗಿದೆ. ವರದಿಯಲ್ಲಿ ಉದಯರವಿ ನಿಂಗಪ್ಪ, ಪಿ.ಐ., ಗಂಗಾವತಿ ಗ್ರಾಮೀಣ ಪೊಲೀಸ್ ಇವರು ಕೊಪ್ಪಳ ಜಿಲ್ಲೆ ರವರು ಹಲವಾರು ಪ್ರಕರಣಗಳಲ್ಲಿ ತನಿಖಾ ಲೋಪವೆಸಗಿರುವುದು ಹಾಗೂ ಮೇಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘನೆ ಮಾಡಿ ಕರ್ತವ್ಯ ಲೋಪವೆಸಗಿರುವುದರಿಂದ ಇವರನ್ನು ಕೊಪ್ಪಳ ಜಿಲ್ಲೆಯಿಂದ ಬೇರೆಡೆಗೆ ವರ್ಗಾಯಿಸುವಂತೆ ಸಂಬಂಧಪಟ್ಟ ಘಟಕಾಧಿಕಾರಿಗಳು ವರದಿಗಳನ್ನು ಸಲ್ಲಿಸಿರುತ್ತಾರೆ. ಅವರ ಕರ್ತವ್ಯ ಲೋಪ ಹಾಗೂ ತನಿಖಾ ಲೋಪದ ಸಂಬಂಧ ಈಗಾಗಲೇ ಇಲಾಖಾ ವಿಚಾರಣೆಗೆ ಆದೇಶಿಸಲಾಗಿರುತ್ತದೆ. ಮುಂದುವರೆದಂತೆ ಸದರಿ ಅಧಿಕಾರಿಯು ಗಂಗಾವತಿ ಉಪ ವಿಭಾಗದಲ್ಲಿ ಹಲವಾರು ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಪಿ.ಎಸ್.ಐ. ಮತ್ತು ಪಿ.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಇಲಾಖಾ ಕರ್ತವ್ಯದ ಬಗ್ಗೆ ಆಸಕ್ತಿ ತೋರದೆ ಇರುವುದು ಕಂಡುಬಂದಿರುತ್ತದೆ. ಆದ್ದರಿಂದ ಇವರನ್ನು ಸದರಿ ಸ್ಥಳದಿಂದ ಬೇರೆಡೆಗೆ ವರ್ಗಾಯಿಸುವಂತೆ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ರವರು ಕೂಡ ಶಿಫಾರಸ್ಸು ಮಾಡಿದ್ದು,
ಆದ್ದರಿಂದ, ಉದಯರವಿ, ನಿಂಗಪ್ಪ, ಪಿ.ಐ., ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ, ಕೊಪ್ಪಳ ಜಿಲ್ಲೆ ರವರು ಪ್ರಸ್ತುತ ಸ್ಥಳದಲ್ಲಿ ಒಂದು ವರ್ಷಗಳ ಸೇವೆಯನ್ನು ಪೂರೈಸದಿದ್ದರೂ ಸಹ ಆಡಳಿತಾತ್ಮಕ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2013 ರ ಕಲಂ 20(ಎಫ್) ರನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಗುಪ್ತವಾರ್ತೆಗೆ ವರ್ಗಾಯಿಸಿ ಆದೇಶಿಸಲಾಗಿದೆ ಎಂದು ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ರವರ ಪರವಾಗಿ ಡಾ.ಎಂ.ಎ ಸಲೀಂ ಅವರು ಸವಿಸ್ತಾರವಾಗಿ ವರದಿ ನೀಡಿ ವರ್ಗಾವಣೆ ಮಾಡಿದ್ದಾರೆ..
ಗಂಗಾವತಿ ವರದಿಗಾರ
(ಹನುಮೇಶ ಬಟಾರಿ)